ಯೆಹೆಜ್ಕೇಲನು 26:10 - ಪರಿಶುದ್ದ ಬೈಬಲ್10 ಅವನ ಕುದುರೆಗಳ ಗೊರಸುಗಳಿಂದ ಹೊರಟ ಧೂಳು ನಿನ್ನನ್ನು ಮುಚ್ಚಿಬಿಡುವದು. ಅವರ ರಾಹುತರ, ಚಕ್ಕಡಿಗಳ, ರಥಗಳ ಶಬ್ದದಿಂದ ನಿನ್ನ ಗೋಡೆಗಳು ನಡುಗುವವು. ಕೋಟೆಗೋಡೆಗಳು ಕೆಡವಲ್ಪಡುವದರಿಂದ ಅವರು ನಗರದೊಳಗೆ ನುಗ್ಗುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಏಳುವ ಧೂಳಿನಿಂದ ನಿನ್ನನ್ನು ಮುಸುಕುವನು; ಒಡಕು ಬಿದ್ದ ಕೋಟೆಯೊಳಗೆ ಶತ್ರುವು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಗಾಡಿ, ರಥ ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಕದಲುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ಧೂಳು ನಿನ್ನನ್ನು ಮುಸುಕುವುದು; ಒಡಕು ಬಿದ್ದ ಕೋಟೆಯೊಳಗೆ ಶತ್ರು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಸರಕುಗಾಡಿ, ರಥ, ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಅದರುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ದೂಳು ನಿನ್ನನ್ನು ಮುಸುಕುವದು; ಒಡಕುಬಿದ್ದ ಕೋಟೆಯೊಳಗೆ ಶತ್ರುವು ನುಗ್ಗುವ ಪ್ರಕಾರ ಅವನು ನಿನ್ನ ಬಾಗಲುಗಳೊಳಗೆ ನುಗ್ಗುವಾಗ ರಾಹುತ, ಚಕ್ಕಡಿಗಾಡಿ, ರಥ ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಕದಲುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಸುಕುವದು, ಒಡಕು ಬಿದ್ದ ಕೋಟೆಯೊಳಗೆ ಶತ್ರುಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲುಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವುವು. ಅಧ್ಯಾಯವನ್ನು ನೋಡಿ |