Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 25:9 - ಪರಿಶುದ್ದ ಬೈಬಲ್‌

9 ಮೋವಾಬಿನ ಗಡಿಯನ್ನು ಸಂರಕ್ಷಿಸುತ್ತಿರುವ ಪಟ್ಟಣಗಳು ಆಕ್ರಮಣಕ್ಕೆ ಗುರಿಯಾಗುವಂತೆ ಮಾಡುತ್ತೇನೆ. ಬೇತ್‌ಯೆಷೀಮೋತ್, ಬಾಳ್‌ಮೆಯೋನ್, ಕಿರ್ಯಾಥಯಿಮ್, ಅದರ ವೈಭವಯುತವಾದ ಸರಹದ್ದಿನ ಪಟ್ಟಣಗಳನ್ನು ನಾನು ತೆಗೆದುಹಾಕುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆದುದರಿಂದ, ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾಥಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆದುದರಿಂದ ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್‍ಯೆಷೀಮೋತ್, ಬಾಳ್‍ಮೆಯೋನ, ಕಿರ್ಯಾಥಯಿಮ್ ಎಂಬ ಪಟ್ಟಣಗಳು, ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು ಅಂದರೆ ಬೇತ್‍ಯೆಷೀಮೋತ್ ಬಾಳ್‍ಮೆಯೋನ್, ಕಿರ್ಯಾಥಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಟ್ಟು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆದ್ದರಿಂದ ಇಗೋ, ದೇಶದ ವೈಭವಗಳಾದ ಮೋವಾಬಿನ ಗಡಿಯ ಪಟ್ಟಣಗಳಾದ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾತಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 25:9
9 ತಿಳಿವುಗಳ ಹೋಲಿಕೆ  

ಕಿರ್ಯಾತಯೀಮ್, ಬೇತ್‌ಗಾಮೂಲ್, ಬೇತ್‌ಮೆಯೋನ್,


ಆ ಪ್ರದೇಶವು ಹೆಷ್ಬೋನಿನವರೆಗೆ ವಿಸ್ತರಿಸಿ ತಪ್ಪಲಪ್ರದೇಶದ ಎಲ್ಲಾ ಊರುಗಳನ್ನೊಳಗೊಂಡಿತ್ತು. ಆ ಊರುಗಳು ಯಾವುವೆಂದರೆ: ದೀಬೋನ್, ಬಾಮೋತ್‌ಬಾಳ್, ಬೇತ್ಬಾಳ್ಮೆಯೋನ್,


ಈ ಸಂದೇಶವು ಮೋವಾಬ್ ದೇಶವನ್ನು ಕುರಿತದ್ದು. ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ನೆಬೋ ಪರ್ವತಕ್ಕೆ ದುರ್ಗತಿ ಬರುವುದು. ನೆಬೋ ಪರ್ವತ ಪ್ರದೇಶವು ಹಾಳಾಗುವುದು. ಕಿರ್ಯಾತಯಿಮ್ ಪಟ್ಟಣವು ಸೋಲುವುದು. ಅದನ್ನು ವಶಪಡಿಸಿಕೊಳ್ಳಲಾಗುವುದು. ಭದ್ರವಾದ ಸ್ಥಳವನ್ನು ಸೋಲಿಸಿ ಧ್ವಂಸ ಮಾಡಲಾಗುವುದು.


ಬೆಳನು ಆಜಾಜನ ಮಗ, ಆಜಾಜನು ಶೆಮಯನ ಮಗ, ಶೆಮಯನು ಯೋವೇಲನ ಮಗನು. ಇವರೆಲ್ಲರೂ ನೆಬೋ ಮತ್ತು ಬಾಳ್ಮೆಯೋನ್ ಪ್ರಾಂತ್ಯದ ಅರೋಯೇರ್ ಸುತ್ತಮುತ್ತ ವಾಸಿಸಿದರು.


ಗಲಿಲಾಯ ಸರೋವರದಿಂದ ಲವಣಸಮುದ್ರದವರೆಗೆ ಹಬ್ಬಿದ ಜೋರ್ಡನ್ ಕಣಿವೆಯ ಪೂರ್ವಭಾಗವು ಕೂಡ ಅವನ ಆಳ್ವಿಕೆಗೆ ಒಳಪಟ್ಟಿತ್ತು. ಬೇತ್‌ಯೆಷಿಮೋತಿನಿಂದ ದಕ್ಷಿಣದಲ್ಲಿ ಪಿಸ್ಗಾ ಬೆಟ್ಟದವರೆಗೆ ಹಬ್ಬಿದ ಪ್ರದೇಶವನ್ನು ಸಹ ಅವನು ಆಳುತ್ತಿದ್ದನು.


ಅವರು ಮೋವಾಬ್ಯರ ಮೈದಾನದಲ್ಲಿ ಬೇತ್‌ಯೆಷೀಮೋತಿನಿಂದ ಅಬೇಲ್ ಶಿಟ್ಟೀಮಿನವರೆಗೂ ಜೋರ್ಡನ್ ನದಿಯ ತೀರದಲ್ಲಿ ಇಳಿದುಕೊಂಡರು.


“ಯೆಹೋವನು ಇಸ್ರೇಲರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ, ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ಪಶುಗಳ ಮೇವಿಗೆ ಒಳ್ಳೆಯ ಸ್ಥಳವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ಪಶುಗಳು ಇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು