ಯೆಹೆಜ್ಕೇಲನು 25:3 - ಪರಿಶುದ್ದ ಬೈಬಲ್3 ಅಮ್ಮೋನಿಯರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನ ಮಾತುಗಳನ್ನು ಕೇಳಿರಿ. ಆತನು ಹೇಳುವುದೇನೆಂದರೆ, ನನ್ನ ಪವಿತ್ರಾಲಯವು ಅಪವಿತ್ರಗೊಂಡಾಗಲೂ ಇಸ್ರೇಲ್ ದೇಶವು ನಾಶವಾದಾಗಲೂ ಯೆಹೂದದ ಜನರು ಸೆರೆ ಒಯ್ಯಲ್ಪಟ್ಟಾಗಲೂ ನೀವು ಸಂತೋಷಪಟ್ಟಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ‘ಕರ್ತನಾದ ಯೆಹೋವನ ಮಾತನ್ನು ಕೇಳು’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದದ್ದನ್ನು, ಇಸ್ರಾಯೇಲ್ ದೇಶವು ಹಾಳುಬಿದ್ದದನ್ನು, ಯೆಹೂದ ವಂಶದವರು ಸೆರೆಹೋದದ್ದನ್ನು ನೀನು ನೋಡಿ, “ಅಹಾ!” ಎಂದು ಹಿಗ್ಗಿಕೊಂಡೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸರ್ವೇಶ್ವರನಾದ ದೇವರ ವಾಕ್ಯವನ್ನು ಕೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದುದ್ದನ್ನು, ಇಸ್ರಯೇಲ್ ನಾಡು ಪಾಳುಬಿದ್ದುದನ್ನು, ಯೆಹೂದ್ಯವಂಶದವರು ಗಡೀಪಾರಾದುದನ್ನು ನೋಡಿ ನೀನು ಹಿರಿಹಿರಿ ಹಿಗ್ಗಿಹೋದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಕರ್ತನಾದ ಯೇಹೋವನ ಮಾತನ್ನು ಕೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - [ಅಮ್ಮೋನೇ,] ನನ್ನ ಪವಿತ್ರಾಲಯವು ಹೊಲಸಾದದ್ದನ್ನು, ಇಸ್ರಾಯೇಲ್ ದೇಶವು ಹಾಳುಬಿದ್ದದ್ದನ್ನು, ಯೆಹೂದವಂಶದವರು ಸೆರೆಹೋದದ್ದನ್ನು ನೀನು ನೋಡಿ ಅಹಹ ಎಂದು ಹಿಗ್ಗಿಕೊಂಡದರಿಂದ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಅಮ್ಮೋನ್ಯರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನೀವು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಪಡಿಸಿದಾಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ನೀವು “ಆಹಾ!” ಅಂದದ್ದರಿಂದ ಅಧ್ಯಾಯವನ್ನು ನೋಡಿ |
ದೇವರು ಹೇಳಿದ್ದು, “ನರಪುತ್ರನೇ, ನನ್ನ ಪರವಾಗಿ ಜನರ ಕೂಡ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಅಮ್ಮೋನಿಯರ ಬಗ್ಗೆಯೂ ಅವರ ದೂಷಣೆಗಳ ಬಗ್ಗೆಯೂ ಹೀಗೆ ಹೇಳುತ್ತಾನೆ: “‘ನೋಡು, ಒಂದು ಖಡ್ಗ. ಆ ಖಡ್ಗವು ಒರೆಯಿಂದ ಹೊರಬಂದಿದೆ. ಆ ಖಡ್ಗವನ್ನು ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ. ಖಡ್ಗವು ಕೊಲ್ಲಲು ಸಿದ್ಧವಾಗಿದೆ. ಮಿಂಚಿನಂತೆ ಹೊಳೆಯಲೆಂದು ಅದನ್ನು ನಯಗೊಳಿಸಲಾಗಿದೆ.
ಜೆರುಸಲೇಮ್ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾಳೆ; ತಾನು ಮನೆಯನ್ನು ಕಳೆದುಕೊಂಡ ಮತ್ತು ಹಿಂಸೆಗೊಳಗಾದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾಳೆ. ಹಿಂದೆ ಅವಳಿಗಿದ್ದ ಎಲ್ಲ ಭೋಗ್ಯ ವಸ್ತುಗಳನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಹಳೆಯ ಕಾಲದಲ್ಲಿ ಲಭ್ಯವಿದ್ದ ಎಲ್ಲ ಉತ್ತಮ ವಸ್ತುಗಳನ್ನು ಅವಳು ಸ್ಮರಿಸಿಕೊಳ್ಳುತ್ತಾಳೆ. ತನ್ನ ಜನರನ್ನು ವೈರಿಗಳು ವಶಪಡಿಸಿಕೊಂಡ ಸಂಗತಿಯನ್ನು ಅವಳು ಸ್ಮರಿಸುತ್ತಾಳೆ. ಆಗ ತನಗೆ ಸಹಾಯ ಮಾಡಲು ಯಾರೂ ಇರಲಿಲ್ಲವೆಂಬುದನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಅವಳ ಶತ್ರುಗಳು ಅವಳನ್ನು ನೋಡಿ ನಕ್ಕರು. ಅವಳು ಹಾಳಾದುದನ್ನು ನೋಡಿ ಅವರು ನಕ್ಕರು.