Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 25:17 - ಪರಿಶುದ್ದ ಬೈಬಲ್‌

17 ನಾನು ಅವರೊಂದಿಗೆ ಮುಯ್ಯಿತೀರಿಸಿಕೊಳ್ಳುವೆನು. ನನ್ನ ಕೋಪವು ಅವರಿಗೆ ಪಾಠ ಕಲಿಸುವದು. ನಾನು ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅವರೆಲ್ಲರನ್ನು ಬಲವಾಗಿ ಖಂಡಿಸಿ ಮುಯ್ಯಿಗೆಮುಯ್ಯಿ ತೀರಿಸುವೆನು; ಹೀಗೆ ಪ್ರತಿಕಾರಮಾಡುವುದರಿಂದ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅವರೆಲ್ಲರನ್ನು ಬಹಳವಾಗಿ ಖಂಡಿಸಿ ಮುಯ್ಯಿಗೆ ಮುಯ್ಯಿ ತೀರಿಸುವೆನು; ಹೀಗೆ ಪ್ರತೀಕಾರಮಾಡುವೆನು, ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅವರೆಲ್ಲರನ್ನು ಬಲವಾಗಿ ಖಂಡಿಸಿ ಮುಯ್ಯಿಗೆ ಮುಯ್ಯಿತೀರಿಸುವೆನು; ಹೀಗೆ ಪ್ರತೀಕಾರಮಾಡಲು ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಾನು ದೊಡ್ಡ ಪ್ರತಿದಂಡನೆಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ಮುಯ್ಯಿತೀರಿಸುವೆನು. ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 25:17
9 ತಿಳಿವುಗಳ ಹೋಲಿಕೆ  

ನಾನು ನನ್ನ ಇಸ್ರೇಲ್ ಜನರನ್ನು ಉಪಯೋಗಿಸಿ ಎದೋಮ್ಯರಿಗೆ ಮುಯ್ಯಿ ತೀರಿಸುವೆನು. ಈ ರೀತಿಯಾಗಿ ಎದೋಮಿನ ಮೇಲಿರುವ ನನ್ನ ಕೋಪವನ್ನು ಇಸ್ರೇಲರು ಅವರಿಗೆ ತೋರಿಸುವರು. ಆಗ ಎದೋಮ್ಯರು ನಾನು ಅವರನ್ನು ಶಿಕ್ಷಿಸಿದ್ದೇನೆಂದು ತಿಳಿದುಕೊಳ್ಳುವರು.” ಇದು ನನ್ನ ಒಡೆಯನಾದ ಯೆಹೋವನ ವಾಕ್ಯ.


ಹೀಗೆ ನಾನು ಮೋವಾಬನ್ನು ಶಿಕ್ಷಿಸುವೆನು. ಆಗ ನಾನೇ ಯೆಹೋವನೆಂದು ಅವರು ತಿಳಿಯುವರು.”


ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ.


ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ ಆತನ ನೀತಿಯು ಪ್ರಖ್ಯಾತವಾಯಿತು.


“‘ನಾನು ರಬ್ಬಾ ನಗರವನ್ನು ಒಂಟೆಗಳು ಮೇಯುವ ಸ್ಥಳವನ್ನಾಗಿಯೂ, ಅಮ್ಮೋನ್ ದೇಶವನ್ನು ಕುರಿಹಟ್ಟಿಯನ್ನಾಗಿಯೂ ಮಾಡುವೆನು. ಆಗ ನಾನು ಯೆಹೋವನೆಂದು ನಿಮಗೆ ಗೊತ್ತಾಗುವದು.


ಜನರು ನಿಮ್ಮ ಮಧ್ಯದಲ್ಲಿ ಕೊಲ್ಲಲ್ಪಟ್ಟು ಬೀಳುವರು. ಆಗ ನೀನು, ನಾನು ಯೆಹೋವನೆಂದು ತಿಳಿಯುವಿ.’”


ಆದ್ದರಿಂದ ಆತನೇ ಯೆಹೋವನೆಂದು ನಿನಗೆ ತಿಳಿಯಲೆಂದು ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಯುವೆನು; ಆ ನದಿಯ ನೀರು ರಕ್ತವಾಗುವುದು.


ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ; ಅನ್ಯ ಜನರನ್ನು ದಂಡಿಸಲಿ.


ದೇಶ ಭ್ರಷ್ಟರಾಗಿದ್ದ ಹನ್ನೊಂದನೇ ವರ್ಷದ ತಿಂಗಳ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು