Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:42 - ಪರಿಶುದ್ದ ಬೈಬಲ್‌

42 “ನಿಶ್ಚಿಂತೆಯುಳ್ಳ ಗುಂಪಿನ ಆನಂದಪೂರ್ಣವಾದ ಗದ್ದಲವು ಆಕೆಯ ಸುತ್ತಲೂ ಇತ್ತು. ಔತಣಕ್ಕೆ ಅನೇಕರು ಬಂದರು. ಮರುಭೂಮಿಯ ಕಡೆಯಿಂದ ಜನರು ಬರುತ್ತಿರುವಾಗಲೇ ಅಮಲೇರಿಕೊಂಡು ಬಂದರು. ಅವರು ಬಳೆಗಳನ್ನು, ಸುಂದರವಾದ ಕಿರೀಟಗಳನ್ನು ಹೆಂಗಸರಿಗೆ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 “ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನ ಶಬ್ದವು ಇತ್ತು. ಮರುಭೂಮಿಯಿಂದ ಕುಡುಕರನ್ನೂ ಕರೆಯಿಸಿಕೊಂಡು ಅವರು ನಾಡಿನ ಜನರೊಂದಿಗೆ ಸೇರಿ, ನಿನ್ನ ಕೈಗೆ ಕಡಗವನ್ನು ತೊಡಿಸಿ, ತಲೆಗೆ ಸುಂದರ ಕಿರೀಟವನ್ನಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನವರ ಕಳಕಳವಾಯಿತು; ಅರಣ್ಯದಿಂದ ಕರೆಯಿಸಿಕೊಂಡ ಕುಡುಕರು ನಾಡಾಡಿಗರೊಂದಿಗೆ ಸೇರಿ ಅಸ್ಸೀರಿಯರಿಬ್ಬರ ಕೈಗೆ ಕಡಗವನ್ನು ತೊಡಿಸಿ, ಅವರ ತಲೆಗೆ ಸುಂದರ ಕಿರೀಟವನ್ನಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಅಲ್ಲಿ ವಿನೋದಪಡುತ್ತಿರುವ ದೊಡ್ಡ ಗುಂಪಿನವರ ಕಳಕಳವಾಯಿತು; ಅರಣ್ಯದಿಂದ ಕರೆಯಿಸಿಕೊಂಡ ಕುಡಿಕರು ನಾಡಾಡಿಗರೊಂದಿಗೆ ಸೇರಿ ಅವರಿಬ್ಬರ ಕೈಗೆ ಕಡಗವನ್ನು ತೊಡಿಸಿ ಅವರ ತಲೆಗೆ ಸುಂದರ ಕಿರೀಟವನ್ನಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 “ಅವಳ ಸಂಗಡ ವಿನೋದಪ್ರಿಯ ಸಮೂಹದ ಶಬ್ದವು ಇತ್ತು. ಸಾಧಾರಣ ಮನುಷ್ಯರ ಸಂಗಡ ಮರುಭೂಮಿಯಿಂದ ಕುಡುಕರನ್ನೂ ಕರೆಯಿಸಿಕೊಂಡು ಆ ಮಹಿಳೆ ಮತ್ತು ಅವಳ ಸಹೋದರಿಯ ಕೈಗಳ ಮೇಲೆ ಕಡಗಳನ್ನೂ ತಮ್ಮ ತಲೆಗಳ ಮೇಲೆ ಶೃಂಗಾರವಾದ ಕಿರೀಟವನ್ನೂ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:42
13 ತಿಳಿವುಗಳ ಹೋಲಿಕೆ  

ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು.


ನಿಮ್ಮ ಗಂಡು ಹೆಣ್ಣುಮಕ್ಕಳನ್ನು ನಾನು ಯೆಹೂದದ ಜನರಿಗೆ ಮಾರುವೆನು. ಅವರು ಅವರನ್ನು ಬಹುದೂರದಲ್ಲಿ ಶೆಬದ ಜನರಿಗೆ ಮಾರಿಬಿಡುವರು.” ಇದು ಯೆಹೋವನ ನುಡಿ.


ನಾನು ಇಸ್ರೇಲರಿಗೆ ಆಹಾರ ಒದಗಿಸಿದೆನು. ಅವರು ಆ ಆಹಾರವನ್ನು ಉಂಡು ತಿಂದು ತೃಪ್ತರಾಗಿ ಕೊಬ್ಬೇರಿದ್ದರಿಂದ ನನ್ನನ್ನು ಮರೆತರು.


ಆದರೆ ಶೆಬ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡಿ ನಿನ್ನ ಪಶುಗಳನ್ನೆಲ್ಲಾ ಹೊಡೆದುಕೊಂಡು ಹೋದರು; ನಿನ್ನ ಸೇವಕರುಗಳನ್ನೆಲ್ಲಾ ಕೊಂದು ಹಾಕಿದರು; ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಈ ವಿಷಯವನ್ನು ತಿಳಿಸುವುದಕ್ಕಾಗಿಯೇ ನಾನು ಬಂದೆನು” ಎಂದು ಹೇಳಿದನು.


ಮರುದಿನ ಮುಂಜಾನೆ ಜನರೆಲ್ಲರೂ ಬೇಗನೆ ಎದ್ದು ತಮ್ಮ ಪಶುಗಳನ್ನು ವಧಿಸಿ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಿ ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಬಳಿಕ ಎದ್ದು ಕುಣಿದಾಡಿದರು ಮತ್ತು ಕೂಗಾಡಿದರು.


ಆ ಗರ್ವಿಷ್ಠರು ದುಷ್ಟರೇ ಸರಿ! ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.


ಬಾಬಿಲೋನ್ ಯೆಹೋವನ ಕೈಯಲ್ಲಿನ ಬಂಗಾರದ ಪಾತ್ರೆಯಂತಿತ್ತು. ಲೋಕವೆಲ್ಲವೂ ಮದ್ಯಪಾನ ಮಾಡುವಂತೆ ಬಾಬಿಲೋನ್ ಮಾಡಿತು. ಜನಾಂಗಗಳು ಬಾಬಿಲೋನಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.


ದೇವರು ಹೇಳಿದ್ದೇನೆಂದರೆ, “ನಿನ್ನ ತಂಗಿ ಸೊದೋಮ್ ಮತ್ತು ಆಕೆಯ ಹೆಣ್ಣುಮಕ್ಕಳು ಕೊಬ್ಬಿದ ಕಣ್ಣುಳ್ಳವರಾಗಿದ್ದರು. ಅವರಿಗೆ ತಿನ್ನಲು ಬೇಕಾದಷ್ಟಿತ್ತು. ಅವರು ಶಾಂತಿಕರವಾದ ಸುಭದ್ರತೆಯಲ್ಲಿ ಜೀವಿಸಿದರು. ಅವರು ಬಡವರಿಗೆ ಸಹಾಯ ಮಾಡಲಿಲ್ಲ.


ಶೆಬ ಮತ್ತು ರಗ್ಮದ ವ್ಯಾಪಾರಿಗಳು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನಗೆ ಸಂಬಾರ ಜೀನಸು, ರತ್ನಗಳು ಮತ್ತು ಚಿನ್ನವನ್ನು ಬದಲಿಕೊಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು