ಯೆಹೆಜ್ಕೇಲನು 23:33 - ಪರಿಶುದ್ದ ಬೈಬಲ್33 ನೀನು ಅಮಲೇರಿದವಳ ಹಾಗೆ ತೂರಾಡುವೆ. ನೀನು ಕುಗ್ಗಿಹೋಗುವೆ. ಆ ಲೋಟವು ನಾಶನದ ಮತ್ತು ಹಾಳುಮಾಡುವ ಲೋಟ. ನಿನ್ನ ಅಕ್ಕ ಕುಡಿದ ಪಾತ್ರೆಯಂತಿರುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಸಮಾರ್ಯಳೆಂಬ ನಿನ್ನ ಅಕ್ಕನು ಕುಡಿದ ಪಾತ್ರೆಯಿಂದಲೇ ವಿಸ್ಮಯವೂ, ನಾಶವೂ ಆಗುವುದು. ನೀನು ಅಮಲಿನಿಂದಲೂ, ದುಃಖದಿಂದಲೂ ತುಂಬಿರುವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ನೀನೂ ಕುಡಿದು, ಕುಡಿದು ಪೂರಾ ಅಮಲೇರಿ ದುಃಖಭರಿತಳಾಗುವೆ. ಅದರಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿಯುವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ಸಮಾರ್ಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನ ಪಾತ್ರೆಯಲ್ಲಿ ನೀನೂ ಕುಡಿದು ಕುಡಿದು ಪೂರಾ ಅಮಲೇರಿ ದುಃಖಭರಿತಳಾಗುವಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ನಿನ್ನ ಸಹೋದರಿಯಾದ ಸಮಾರ್ಯದ ಪಾತ್ರೆಯಿಂದಲೇ ವಿಸ್ಮಯವೂ ನಾಶವೂ ಆಗುವುದು. ನೀನು ಮತ್ತಿನಿಂದಲೂ ದುಃಖದಿಂದಲೂ ತುಂಬಿರುವೆ. ಅಧ್ಯಾಯವನ್ನು ನೋಡಿ |