Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:32 - ಪರಿಶುದ್ದ ಬೈಬಲ್‌

32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀನು ನಿನ್ನ ಅಕ್ಕನ ಲೋಟದಿಂದ ಕುಡಿಯುವೆ. ಆ ಲೋಟವು ಆಳವಾಗಿಯೂ ಅಗಲವಾಗಿಯೂ ಇದ್ದು ಪೂರ್ತಿ ತುಂಬಿದೆ (ಶಿಕ್ಷೆ). ಜನರು ನಿನ್ನನ್ನು ನೋಡಿ ನಗಾಡುವರು. ನಿನ್ನನ್ನು ಕಂಡು ಹಾಸ್ಯ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಉದ್ದವೂ, ಅಗಲವೂ, ಬಹಳ ತುಂಬುವ, ನಿನ್ನ ಅಕ್ಕನ ಪಾತ್ರೆಯಲ್ಲಿ ನೀನು ಕುಡಿದು, ಹಾಸ್ಯಕ್ಕೂ, ಕುಚೋದ್ಯಕ್ಕೂ ಗುರಿಯಾಗುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಆಳವೂ ಅಗಲವೂ ಬಹಳ ಹಿಡಿಯುವುದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲೇ ನೀನೂ ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವೆ. ಸಮಾರಿಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನಾ ಕೊಡದಿಂದಲೇ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಉದ್ದವೂ ಅಗಲವೂ ಬಹಳ ಹಿಡಿಯುವದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲಿ ನೀನು ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವೆ. ನೀನು ಹಾಸ್ಯಕ್ಕೂ ನಿಂದೆಗೂ ಗುರಿಯಾಗುವೆ. ಅದೇ ನಿನಗೆ ಹೆಚ್ಚಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:32
23 ತಿಳಿವುಗಳ ಹೋಲಿಕೆ  

ಜೆರುಸಲೇಮೇ, ಎಚ್ಚರಗೊಳ್ಳು; ಎದ್ದೇಳು; ಯೆಹೋವನು ನಿನ್ನ ಮೇಲೆ ಬಹಳವಾಗಿ ಕೋಪಗೊಂಡು ನಿನ್ನನ್ನು ಶಿಕ್ಷಿಸಿದ್ದಾನೆ. ಆ ಶಿಕ್ಷೆಯು ವಿಷತುಂಬಿದ ಪಾತ್ರೆಯಂತಿದೆ. ನೀನು ಅದನ್ನು ಕುಡಿಯಲೇಬೇಕಿತ್ತು. ಈಗ ನೀನು ಅದನ್ನು ಕುಡಿದಿರುವೆ.


ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ. ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.


ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ. ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ. ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.


ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು.


ನಾನು ಬಿದ್ದಿದ್ದೇನೆ, ಆದರೆ ವೈರಿಯೇ, ನನ್ನನ್ನು ನೋಡಿ ನಗಾಡಬೇಡ! ನಾನು ತಿರುಗಿ ಏಳುತ್ತೇನೆ; ನಾನೀಗ ಅಂಧಕಾರದಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಯೆಹೋವನು ನನ್ನ ಬೆಳಕಾಗಿರುತ್ತಾನೆ.


“ಆದ್ದರಿಂದ ಹೋಗಿ ಇಸ್ರೇಲಿನ ಪರ್ವತಗಳಿಗೆ ನನ್ನ ಪರವಾಗಿ ಹೇಳು. ಇದು ಒಡೆಯನಾದ ಯೆಹೋವನ ನುಡಿ ಎಂದು ಹೇಳು. ‘ವೈರಿಗಳು ನಿನ್ನ ಪಟ್ಟಣಗಳನ್ನೆಲ್ಲಾ ನಾಶಮಾಡಿ ಎಲ್ಲಾ ದಿಕ್ಕುಗಳಿಂದ ನುಗ್ಗಿ ನಿನ್ನ ಮೇಲೆ ಧಾಳಿ ಮಾಡಿರುತ್ತಾರೆ. ನೀನು ಬೇರೆಯವರ ವಶವಾಗಬೇಕೆಂಬದಾಗಿ ಹೀಗೆ ಮಾಡಿದರು. ಜನರು ನಿನ್ನ ವಿಷಯವಾಗಿ ಗುಜುಗುಜು ಮಾತನಾಡಿದರು.’”


ಇಸ್ರೇಲ್ ರಾಜ್ಯವು ನಾಶವಾದಾಗ ನೀನು ಸಂತೋಷಪಟ್ಟಿರುವೆ. ನಾನು ಕೂಡ ಹಾಗೆಯೇ ಮಾಡುವೆನು. ಸೇಯೀರ್ ಪರ್ವತ ಮತ್ತು ಎದೋಮ್ ರಾಜ್ಯವೆಲ್ಲಾ ನಾಶವಾಗುವದು. ಆಗ ನಾನು ಯೆಹೋವನೆಂದು ನೀನು ತಿಳಿಯುವೆ.”


“ನರಪುತ್ರನೇ, ಜೆರುಸಲೇಮ್ ಬಗ್ಗೆ ತೂರ್ ಕೆಟ್ಟ ಮಾತುಗಳನ್ನಾಡಿದೆ. ‘ಜನರನ್ನು ಸುರಕ್ಷಿತವಾಗಿರಿಸುವ ನಗರದ್ವಾರವು ಕೆಡವಲ್ಪಟ್ಟು ದ್ವಾರವೇ ಇಲ್ಲದಂತಾಗಿದೆ. ನಗರವು ಹಾಳಾಗಿರುವುದರಿಂದ ಕೊಳ್ಳೆ ಹೊಡೆಯಲು ಸುಲಭವಾಯಿತು’ ಎಂದು ಅದು ಅಂದುಕೊಂಡಿದೆ.”


ಯೆಹೋವನು ಹೇಳುವುದೇನೆಂದರೆ: ಜೆರುಸಲೇಮ್ ನಾಶವಾಯಿತೆಂದು ನೀವು ಸಂತೋಷಪಟ್ಟಿರಿ. ನೀವು ಚಪ್ಪಾಳೆತಟ್ಟಿ ಕಾಲಿನಿಂದ ನೆಲವನ್ನು ಬಡಿದಿರಿ. ಇಸ್ರೇಲ್ ದೇಶವನ್ನು ಕಡೆಗಣಿಸಿ ನಗಾಡಿದಿರಿ.


ತಾನು ಯೆಹೋವನಿಗಿಂತ ಬಹಳ ಮುಖ್ಯವಾದವನೆಂದು ಮೋವಾಬು ಭಾವಿಸಿತ್ತು. ಕುಡಿದು ಮದವೇರಿದವನಂತೆ ಆಗುವವರೆಗೆ ಮೋವಾಬನ್ನು ದಂಡಿಸಿರಿ. ಮೋವಾಬು ತನ್ನ ವಾಂತಿಯಲ್ಲಿ ಬಿದ್ದು ಹೊರಳಾಡುವದು. ಜನರು ಮೋವಾಬನ್ನು ತಮಾಷೆ ಮಾಡುವರು.


ಆದ್ದರಿಂದ ನಾನು ಉತ್ತರದ ಎಲ್ಲಾ ಜನಾಂಗಗಳನ್ನು ಕರೆಸುತ್ತೇನೆ.” ಇದು ಯೆಹೋವನ ಸಂದೇಶ. “ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಕೂಡಲೇ ಕರೆಸುವೆನು. ಅವನು ನನ್ನ ಸೇವಕ. ನಾನು ಆ ಜನರನ್ನು ಯೆಹೂದ ದೇಶದ ವಿರುದ್ಧವಾಗಿಯೂ ಯೆಹೂದ್ಯರ ವಿರುದ್ಧವಾಗಿಯೂ ತರುತ್ತೇನೆ. ನಾನು ನಿಮ್ಮ ಸುತ್ತಮುತ್ತಲಿನಲ್ಲಿದ್ದ ಜನಾಂಗಗಳ ವಿರುದ್ಧವಾಗಿಯೂ ಅವರನ್ನು ಕರೆತರುವೆನು. ನಾನು ಆ ದೇಶಗಳನ್ನೆಲ್ಲ ನಾಶಮಾಡುವೆನು. ನಾನು ಆ ಭೂಮಿಗಳನ್ನು ಶಾಶ್ವತವಾಗಿ ಬರಿದಾದ ಮರುಭೂಮಿಗಳನ್ನಾಗಿ ಮಾಡುವೆನು. ಜನರು ಆ ದೇಶಗಳನ್ನು ನೋಡಿ ಅವು ಹಾಳಾಗಿರುವುದನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು. ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.


ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು.


ನೀನು ನಮ್ಮನ್ನು ನೆರೆಹೊರೆಯವರಿಗೆ ತಮಾಷೆಯನ್ನಾಗಿ ಮಾಡಿರುವೆ. ನಮ್ಮ ನೆರೆಹೊರೆಯವರು ನಮ್ಮನ್ನು ಕಂಡು ನಗುತ್ತಾರೆ; ನಮ್ಮನ್ನು ಗೇಲಿ ಮಾಡುತ್ತಾರೆ.


ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನ್ನ ಸುತ್ತಲೂ ಇರುವ ಜನಾಂಗಗಳು ನಿನ್ನನ್ನು ಗೇಲಿ ಮಾಡುತ್ತವೆ. ನಿನ್ನನ್ನು ದಾಟಿಹೋಗುವ ಪ್ರತಿಯೊಬ್ಬನೂ ನಿನ್ನನ್ನು ಕಂಡು ಹಾಸ್ಯಮಾಡುವನು.


ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ.


ಈಗಿನಂತೆ, ನಿನ್ನ ದುಷ್ಟತನವು ಹೊರಬರುವುದಕ್ಕಿಂತ ಮೊದಲು ನೀನು ಅದನ್ನು ಮಾಡಿದೆ. ಈಗ ಎದೋಮಿನ ಹೆಣ್ಣುಮಕ್ಕಳು (ಪಟ್ಟಣಗಳು) ಮತ್ತು ಆಕೆಯ ನೆರೆಯವರು ನಿನ್ನನ್ನು ಗೇಲಿ ಮಾಡುವರು. ಫಿಲಿಷ್ಟಿಯರ ಹೆಣ್ಣುಮಕ್ಕಳು ಸಹ ನಿನ್ನನ್ನು ಗೇಲಿ ಮಾಡುವರು. ನಿನ್ನ ಸುತ್ತಲೂ ಇರುವವರು ನಿನ್ನನ್ನು ಕಡೆಗಾಣಿಸುವರು.


ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು. ಮೋಸದ ಬಿಲ್ಲಿನಂತೆ ಅವರಾದರು. ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು. ಆದರೆ ಅವರು ಕತ್ತಿಯಲ್ಲಿ ಸಾಯುವರು. ಆಗ ಈಜಿಪ್ಟಿನ ಜನರು ಅವರನ್ನು ನೋಡಿ ನಗಾಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು