9 “ನರಪುತ್ರನೇ, ನನ್ನ ಪರವಾಗಿ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “‘ನೋಡು, ಒಂದು ಖಡ್ಗ, ಹರಿತವಾದ ಖಡ್ಗ, ಆ ಖಡ್ಗವು ಉಜ್ಜಿ ಶುಭ್ರಮಾಡಲ್ಪಟ್ಟಿದೆ.
ದೇವರು ಹೇಳಿದ್ದು, “ನರಪುತ್ರನೇ, ನನ್ನ ಪರವಾಗಿ ಜನರ ಕೂಡ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಅಮ್ಮೋನಿಯರ ಬಗ್ಗೆಯೂ ಅವರ ದೂಷಣೆಗಳ ಬಗ್ಗೆಯೂ ಹೀಗೆ ಹೇಳುತ್ತಾನೆ: “‘ನೋಡು, ಒಂದು ಖಡ್ಗ. ಆ ಖಡ್ಗವು ಒರೆಯಿಂದ ಹೊರಬಂದಿದೆ. ಆ ಖಡ್ಗವನ್ನು ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ. ಖಡ್ಗವು ಕೊಲ್ಲಲು ಸಿದ್ಧವಾಗಿದೆ. ಮಿಂಚಿನಂತೆ ಹೊಳೆಯಲೆಂದು ಅದನ್ನು ನಯಗೊಳಿಸಲಾಗಿದೆ.
ಇಸ್ರೇಲ್ ದೇಶಕ್ಕೆ ಹೀಗೆ ಹೇಳು: ‘ಯೆಹೋವನು ನನಗೆ ಹೀಗೆಂದಿದ್ದಾನೆ, ನಾನು ನಿನಗೆ ವಿರೋಧವಾಗಿದ್ದೇನೆ. ನನ್ನ ಖಡ್ಗವನ್ನು ಅದರ ಒರೆಯಿಂದ ಹೊರತೆಗೆಯುವೆನು. ನಿನ್ನಲ್ಲಿರುವ ಒಳ್ಳೆಯ ಜನರನ್ನೂ ಕೆಟ್ಟ ಜನರನ್ನೂ ತೆಗೆದುಬಿಡುವೆನು.
ಶತ್ರುಗಳು ಅವರನ್ನು ಸೆರೆಹಿಡಿದರೆ ನಾನು ಅವರನ್ನು ಕೊಂದುಹಾಕಲು ಕತ್ತಿಗೆ ಆಜ್ಞಾಪಿಸುವೆನು. ಹೌದು ನಾನು ಅವರನ್ನು ಗಮನಿಸುತ್ತಾ ಕಾಯುವೆನು. ಅವರಿಗೆ ಒಳ್ಳೆಯದು ಮಾಡುವುದಕ್ಕಾಗಿ ಅಲ್ಲ. ಅವರಿಗೆ ಸಂಕಟ ಕೊಡುವುದಕ್ಕಾಗಿ ಅವರನ್ನು ಕಾಯುತ್ತೇನೆ.”
ಅವರ ಹೃದಯಗಳು ಭಯದಿಂದ ಕರಗಿಹೋಗುವುದು. ಬಹು ಜನರು ಪ್ರಜ್ಞೆ ತಪ್ಪಿ ಬೀಳುವರು. ನಗರದ್ವಾರದ ಬಳಿಯಲ್ಲಿದ್ದು ಈ ಖಡ್ಗವು ಬಹು ಜನರನ್ನು ಕೊಲ್ಲುವುದು. ಹೌದು, ಖಡ್ಗವು ಮಿಂಚಿನಂತೆ ಹೊಳೆಯುವುದು. ಜನರನ್ನು ಕೊಲ್ಲುವುದಕ್ಕಾಗಿ ಅದು ಹೊಳಪುಮಾಡಲ್ಪಟ್ಟಿದೆ.
‘ನಾವು ಎಲ್ಲಿಗೆ ಹೋಗಬೇಕು’ ಎಂದು ಅವರು ಕೇಳಬಹುದು. ಯೆಹೋವನು ಹೀಗೆ ಹೇಳಿದ್ದಾನೆ ಎಂದು ನೀನು ಅವರಿಗೆ ಹೇಳು. “‘ಕೆಲವು ಜನರು ಮರಣಹೊಂದಬೇಕೆಂದು ನಾನು ಗೊತ್ತುಮಾಡಿದ್ದೇನೆ. ಅವರು ಮರಣಹೊಂದುತ್ತಾರೆ. ಕೆಲವು ಜನರು ಖಡ್ಗಗಳಿಂದ ಕೊಲ್ಲಲ್ಪಡಬೇಕೆಂದು ನಾನು ಗೊತ್ತುಮಾಡಿದ್ದೇನೆ. ಅವರು ಖಡ್ಗಗಳಿಗೆ ಬಲಿಯಾಗುತ್ತಾರೆ. ಕೆಲವು ಜನರು ಹೊಟ್ಟೆಗೆ ಅನ್ನವಿಲ್ಲದೆ ಸಾಯಬೇಕು ಎಂದು ನಾನು ಗೊತ್ತುಮಾಡಿದ್ದೇನೆ. ಅವರು ಹಸಿವಿನಿಂದ ಸಾಯುತ್ತಾರೆ. ಕೆಲವು ಜನರನ್ನು ಶತ್ರುಗಳು ಸೆರೆಹಿಡಿದು ಪರದೇಶಕ್ಕೆ ತೆಗೆದುಕೊಂಡು ಹೋಗಲಿ ಎಂದು ಗೊತ್ತುಮಾಡಿದ್ದೇನೆ. ಅವರು ಪರದೇಶದಲ್ಲಿ ಸೆರೆಯಾಳುಗಳಾಗಿ ಇರುವರು.
ಅನೇಕ ಸೈನಿಕರು ಆ ಬೋಳುಬೆಟ್ಟಗಳನ್ನು ತುಳಿದುಕೊಂಡು ಹೋದರು. ಆ ಸೈನ್ಯಗಳಿಂದ ಯೆಹೋವನು ಆ ದೇಶವನ್ನು ದಂಡಿಸಿದನು. ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನ್ನು ದಂಡಿಸಲಾಯಿತು. ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.
ಕುದುರೆಗಳನ್ನು ಸಜ್ಜುಗೊಳಿಸಿರಿ. ಸೈನಿಕರೇ, ನಿಮ್ಮ ಕುದುರೆಯ ಮೇಲೆ ಹತ್ತಿರಿ, ಯುದ್ಧಕ್ಕಾಗಿ ನಿಮ್ಮನಿಮ್ಮ ಸ್ಥಾನಗಳಿಗೆ ಹೋಗಿರಿ. ನಿಮ್ಮ ಶಿರಸ್ತ್ರಾಣಗಳನ್ನು ಧರಿಸಿರಿ, ನಿಮ್ಮ ಭರ್ಜಿಗಳನ್ನು ಚೂಪುಗೊಳಿಸಿರಿ. ನಿಮ್ಮ ಕವಚಗಳನ್ನು ಧರಿಸಿರಿ.
ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ? ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ. ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”