Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:25 - ಪರಿಶುದ್ದ ಬೈಬಲ್‌

25 ಇಸ್ರೇಲಿನ ದುಷ್ಟ ಅಧಿಪತಿಯೇ, ನೀನು ಸಾಯುವಿ. ನಿನಗೆ ನನ್ನ ಶಿಕ್ಷೆಯು ಬಂದಾಯಿತು. ನಿನ್ನ ಅಂತ್ಯವು ಹತ್ತಿರವೇ ಇದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಇಸ್ರಾಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ! ನಿನಗೆ ಸಮಯವು ಹತ್ತಿರವಾಗಿದೆ; ಇದೇ ನಿನ್ನ ಅಪರಾಧದ ಕಡೆಗಾಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇಸ್ರಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ, ನಿನಗೆ ಸಮಯವು ಸಮೀಪಿಸಿದೆ; ಇದೇ ನಿನ್ನ ಅಪರಾಧದ ಕಡೆಗಾಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಇಸ್ರಾಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ! ನಿನಗೆ ಸಮಯವು ಹತ್ತರಿಸಿದೆ; ಇದೇ ನಿನ್ನ ಅಪರಾಧದ ಕಡೆಗಾಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 “ ‘ದುಷ್ಟನಾದ ಭ್ರಷ್ಟ ಇಸ್ರಾಯೇಲಿನ ರಾಜಕುಮಾರನೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:25
21 ತಿಳಿವುಗಳ ಹೋಲಿಕೆ  

ಯಾಕೆಂದರೆ ನೀನು ಯಾವಾಗಲೂ ನನ್ನ ಜನಕ್ಕೆ ವಿರೋಧವಾಗಿರುವೆ. ನೀನು ಇಸ್ರೇಲರ ವಿರುದ್ಧವಾಗಿ ಕತ್ತಿಯನ್ನೆತ್ತಿರುವೆ. ಅವರು ಆಗ ಸಂಕಟದಲ್ಲಿದ್ದರು ಮತ್ತು ತಮ್ಮ ಶಿಕ್ಷೆಯ ಕಡೆಗಾಲದಲ್ಲಿದ್ದರು.’”


“‘ಓ ಖಡ್ಗವೇ, ನಿನ್ನ ಕುರಿತು ಅವರು ಸುಳ್ಳುದರ್ಶನಗಳನ್ನು ಕಾಣುವರು. ನಿನ್ನ ಕುರಿತು ಅವರು ಹೇಳುವ ಕಣಿಯು ದಾರಿ ತಪ್ಪಿಸುತ್ತದೆ. ಅದು ಕೇವಲ ಸುಳ್ಳುಗಳ ಕಂತೆ. ಓ ಖಡ್ಗವೇ, ನಿನ್ನನ್ನು ದುಷ್ಟರ ಕುತ್ತಿಗೆಗಳ ಮೇಲೆ ಇರಿಸಲಾಗುವುದು. ಬೇಗನೇ ಅವರು ಹೆಣಗಳಾಗಿ ಬೀಳುವರು. ಅವರ ಸಮಯವು ಬಂದಿದೆ. ಇದು ಅವರ ಅಂತ್ಯದಂಡನೆಯ ಸಮಯವಾಗಿದೆ.


ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ಯೆಹೂದದ ರಾಜನನ್ನು ಶಿಕ್ಷಿಸುವೆನು. ಯಾಕೆಂದರೆ ಅವನು ನನ್ನ ಮುಂದೆ ಮಾಡಿದ ಪ್ರಮಾಣಕ್ಕೆ ಗಮನಕೊಡಲಿಲ್ಲ ಮತ್ತು ನಾನು ಸಾಕ್ಷಿಯಾಗಿದ್ದ ಒಪ್ಪಂದವನ್ನು ಅವನು ಮುರಿದುಹಾಕಿದನು.


ರಾಜನಾದ ಯೆಹೋಯಾಕೀಮನು ಮಾಡಿದಂತೆ ಚಿದ್ಕೀಯನು ದುಷ್ಕೃತ್ಯಗಳನ್ನು ಮಾಡಿದನು. ಚಿದ್ಕೀಯನು ಆ ದುಷ್ಕೃತ್ಯಗಳನ್ನು ಮಾಡಿದ್ದು ಯೆಹೋವನಿಗೆ ಒಪ್ಪಿಗೆಯಾಗಲಿಲ್ಲ.


ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು.


ಆ ದಿನವು ಹತ್ತಿರ ಬಂತು! ಹೌದು, ದೇವರು ನ್ಯಾಯತೀರಿಸುವ ದಿನ ಹತ್ತಿರ ಬಂತು. ಅದು ಮೋಡ ಕವಿದ ದಿನವಾಗಿರುವುದು. ಅದು ಜನಾಂಗಗಳಿಗೆ ನ್ಯಾಯತೀರಿಸುವ ಸಮಯ.


ಅಂತ್ಯವು ಬರುವುದು. ಅದು ಬೇಗನೆ ಬರುವದು.


ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ. ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ. ಆದರೆ ಒಂದು ಜನಾಂಗವಾಗಿ ನೀನು ಬಹಳ ಕಾಲ ಮುಂದುವರೆಯಲಾರೆ. ನಿನ್ನ ವಿನಾಶ ಕಾಲ ಸಮೀಪಿಸಿದೆ.


“ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನ್ನಲು ಬಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಧಿಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು.


ಕೆಟ್ಟವರನ್ನು ದಂಡಿಸು, ಒಳ್ಳೆಯವರಿಗೆ ಸಹಾಯಮಾಡು. ದೇವರೇ ನೀನು ಒಳ್ಳೆಯವನು; ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.


ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು. ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.


ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಇಸ್ರೇಲ್ ದೇಶಕ್ಕೆ ನೀಡು. “ಅಂತ್ಯ, ಅಂತ್ಯವು ಬರುವುದು. ಇಡೀ ದೇಶವು ಹಾಳಾಗಿಹೋಗುವದು.


ನಿನ್ನ ಅಂತ್ಯವು ಈಗ ಬರುವುದು. ನಿನ್ನ ಮೇಲೆ ನನಗೆ ಎಷ್ಟು ಕೋಪವಿದೆ ಎಂದು ನಾನು ತೋರಿಸುವೆನು. ನಿನ್ನ ದುಷ್ಕೃತ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು. ನಿನ್ನ ಅಸಹ್ಯಕೃತ್ಯಗಳಿಗಾಗಿ ನಾನು ಪ್ರತೀಕಾರ ಮಾಡುವೆನು.


“‘ಬೊಬ್ಬೆಹಾಕು, ಕಿರುಚು, ಓ ನರಪುತ್ರನೇ, ಯಾಕೆಂದರೆ ಖಡ್ಗವು ನನ್ನ ಜನರ ಮೇಲೆ ಮತ್ತು ಇಸ್ರೇಲಿನ ಎಲ್ಲಾ ಅಧಿಪತಿಗಳ ಮೇಲೆ ಉಪಯೋಗಿಸಲ್ಪಡುವುದು. ಇಸ್ರೇಲನ್ನು ಆಳುವವರಿಗೆ ಯುದ್ಧವು ಬೇಕು. ಆಗ ಅವರು ಖಡ್ಗವು ಬಂದಾಗ ನನ್ನ ಜನರೊಂದಿಗೆ ಇರಬಹುದು. ಆದ್ದರಿಂದ ನಿನ್ನ ತೊಡೆಗೆ ಬಡಿದು ಗಟ್ಟಿಯಾದ ಸ್ವರದಿಂದ ನಿನ್ನ ದುಃಖವನ್ನು ಪ್ರದರ್ಶಿಸು.


ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀನು ಅನೇಕ ದುಷ್ಕೃತ್ಯಗಳನ್ನು ಮಾಡಿರುವೆ. ನಿನ್ನ ಪಾಪಗಳು ಬಹಳ ಸ್ಪಷ್ಟವಾಗಿವೆ. ನೀನು ದೋಷಿ ಎಂಬುದನ್ನು ನಾನು ನೆನಪುಮಾಡಿಕೊಳ್ಳುವಂತೆ ಮಾಡುವೆ. ವೈರಿಯು ನಿನ್ನನ್ನು ಹಿಡಿಯುವನು.


ಅದರ ಕೋಟೆಗಳನ್ನು ನೋಡಿರಿ. ಚೀಯೋನಿನ ಅರಮನೆಗಳನ್ನು ಹೊಗಳಿರಿ. ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.


ಈ ಸಂದೇಶ ಅಮ್ಮೋನ್ಯರನ್ನು ಕುರಿತದ್ದು. ಯೆಹೋವನು ಹೀಗೆ ಹೇಳಿದನು: “ಅಮ್ಮೋನ್ಯರೇ, ಇಸ್ರೇಲಿನ ಜನರಿಗೆ ಮಕ್ಕಳಿಲ್ಲವೆಂದು ನೀವು ತಿಳಿದುಕೊಂಡಿರುವಿರೇನು? ತಂದೆತಾಯಿಗಳು ಸತ್ತಮೇಲೆ ಭೂಮಿಯನ್ನು ತೆಗೆದುಕೊಳ್ಳುವದಕ್ಕೆ ಅವರ ವಾರಸುದಾರರು ಇಲ್ಲವೆಂದು ನೀವು ತಿಳಿದುಕೊಂಡಿರುವಿರೇನು? ಅದಕ್ಕಾಗಿಯೇ ಮಲ್ಕಾಮ್ ದೇವತೆಯು ಗಾದನ ಸೀಮೆಯನ್ನು ಸ್ವಾಧೀನ ಮಾಡಿಕೊಂಡಳೇ?”


ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ. ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು. ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು. ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.” ಯೆಹೋವನು ಹೀಗೆನ್ನುತ್ತಾನೆ:


“‘ನಾನು ರಬ್ಬಾ ನಗರವನ್ನು ಒಂಟೆಗಳು ಮೇಯುವ ಸ್ಥಳವನ್ನಾಗಿಯೂ, ಅಮ್ಮೋನ್ ದೇಶವನ್ನು ಕುರಿಹಟ್ಟಿಯನ್ನಾಗಿಯೂ ಮಾಡುವೆನು. ಆಗ ನಾನು ಯೆಹೋವನೆಂದು ನಿಮಗೆ ಗೊತ್ತಾಗುವದು.


ಆದ್ದರಿಂದ ನಾನು ರಬ್ಬದ ಗೋಡೆಗಳಲ್ಲಿ ಬೆಂಕಿ ಹಾಕುವೆನು. ಆ ಬೆಂಕಿಯು ರಬ್ಬದ ಉನ್ನತ ಗೋಪುರಗಳನ್ನು ನಾಶಮಾಡುವದು; ಹಗಲಿನ ಯುದ್ಧದ ಕೂಗಾಟದಂತೆಯೂ ಸುಂಟರಗಾಳಿಯಂತೆಯೂ ಸಂಕಟವು ಅವರ ದೇಶಕ್ಕೆ ಬರುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು