ಯೆಹೆಜ್ಕೇಲನು 19:9 - ಪರಿಶುದ್ದ ಬೈಬಲ್9 ಅವರು ಅದನ್ನು ಮರದ ಪಂಜರದಲ್ಲಿಟ್ಟು ಕೊಂಡಿಗಳನ್ನು ಹಾಕಿ, ಬಾಬಿಲೋನಿನ ರಾಜನ ಬಳಿಗೆ ಕೊಂಡೊಯ್ದರು. ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನ್ನೆಂದಿಗೂ ಕೇಳದಿರಲಿ ಎಂದು ಅದನ್ನು ಅಲ್ಲಿ ಸೆರೆಮನೆಗೆ ಹಾಕಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಅದನ್ನು ಸರಪಣಿಗಳಿಂದ ಬಿಗಿದು, ಪಂಜರದಲ್ಲಿ ಹಾಕಿ, ಬಾಬೆಲಿನ ಅರಸನ ಬಳಿಗೆ ತಂದವು. ಅದರ ಧ್ವನಿಯು ಇಸ್ರಾಯೇಲಿನ ಪರ್ವತಗಳಲ್ಲಿ ಇನ್ನು ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿ ಬಿಟ್ಟವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಒಯ್ದವು ಅದನ್ನು ಬಾಬಿಲೋನಿನ ಅರಸನ ಬಳಿಗೆ ಬಿಗಿದು ಸರಪಣಿ, ಹಾಕಿ ಪಂಜರದೊಳಗೆ. ಅದರ ಗರ್ಜನೆ ಇಸ್ರಯೇಲಿನ ಗಿರಿಗಳಿಗೆ ಕೇಳಿಸದಂತೆ, ಸೇರಿಸಿಬಿಟ್ಟವು ಅದನ್ನು ಸುಭದ್ರ ಕೋಟೆಯೊಳಗೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಅವು ಅದನ್ನು ಸರಪಣಿಗಳಿಂದ ಬಿಗಿದು ಪಂಜರದಲ್ಲಿ ಹಾಕಿ ಬಾಬೆಲಿನ ಅರಸನ ಬಳಿಗೆ ತಂದವು. ಅದರ ಧ್ವನಿಯು ಇಸ್ರಾಯೇಲಿನ ಪರ್ವತಗಳಲ್ಲಿ ಇನ್ನು ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿಬಿಟ್ಟವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಪಂಜರದಲ್ಲಿ ಹಾಕಿ, ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾಯೇಲಿನ ಪರ್ವತಗಳ ಮೇಲೆ ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿದರು. ಅಧ್ಯಾಯವನ್ನು ನೋಡಿ |
ಆದರೆ ನೀವು ಬಲಹೀನ ಕುರಿಗಳನ್ನು ಬಲಪಡಿಸಲಿಲ್ಲ. ಕಾಯಿಲೆಯಲ್ಲಿರುವ ಕುರಿಗಳನ್ನು ನೀವು ಪರಾಂಬರಿಸಲಿಲ್ಲ. ಗಾಯಗೊಂಡ ಕುರಿಗಳಿಗೆ ಬಟ್ಟೆ ಸುತ್ತಲಿಲ್ಲ. ಕೆಲವು ಕುರಿಗಳು ದಾರಿತಪ್ಪಿ ದೂರ ಹೋದವು. ಆದರೆ ನೀವು ಅದರ ಬೆನ್ನ ಹಿಂದೆ ಹೋಗಿ ಹಿಂತಿರುಗಿ ಬರುವಂತೆ ಮಾಡಲಿಲ್ಲ. ತಪ್ಪಿಹೋದ ಕುರಿಗಳನ್ನು ನೀವು ಹುಡುಕಲಿಲ್ಲ. ನೀವು ಬಹಳ ಕ್ರೂರಿಗಳೂ ದಯೆ ಇಲ್ಲದವರೂ ಆಗಿದ್ದೀರಿ. ಆ ರೀತಿಯಾಗಿ ನೀವು ನಿಮ್ಮ ಕುರಿಗಳನ್ನು ನಡೆಸಿದಿರಿ.