Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 19:5 - ಪರಿಶುದ್ದ ಬೈಬಲ್‌

5 “‘ಆ ಸಿಂಹಿಣಿಯು ತನಗಾದ ನಿರಾಶೆಯನ್ನೂ ತನ್ನ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನ್ನು ಕಂಡು, ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು ಅದನ್ನು ಪ್ರಾಯದ ಸಿಂಹವನ್ನಾಗಿ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆ ಸಿಂಹಿಣಿಯು ತಾನು ಕಾದುಕೊಂಡಿದ್ದರೂ, ತನ್ನ ನಿರೀಕ್ಷೆಯು ಹಾಳಾಯಿತೆಂದು ತನ್ನ ಮರಿಗಳಲ್ಲಿ ಇನ್ನೊಂದನ್ನು ತೆಗೆದು ಸಾಕಿ, ಪ್ರಾಯಕ್ಕೆ ತಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ತನ್ನ ನಂಬಿಕೆ ನಿರೀಕ್ಷೆ ಹಾಳಾಯಿತೆಂದುಕೊಂಡಾ ಸಿಂಹಿಣಿ, ಪ್ರಾಯಕ್ಕೆ ತಂದಳು ತನ್ನ ಮರಿಗಳಲ್ಲಿ ಇನ್ನೊಂದನ್ನು ಸಾಕಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆ ಸಿಂಹಿಯು ತಾನು ಕಾದುಕೊಂಡಿದ್ದರೂ ತನ್ನ ನಿರೀಕ್ಷೆಯು ಹಾಳಾಯಿತೆಂದು ತನ್ನ ಮರಿಗಳಲ್ಲಿ ಇನ್ನೊಂದನ್ನು ತೆಗೆದು ಸಾಕಿ ಪ್ರಾಯಕ್ಕೆ ತಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ ‘ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕಳೆದುಕೊಂಡೆನೆಂದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು, ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 19:5
6 ತಿಳಿವುಗಳ ಹೋಲಿಕೆ  

ಮರಿಗಳಲ್ಲೊಂದು ಎದ್ದು ಗಟ್ಟಿಮುಟ್ಟಾದ ಸಿಂಹವಾಗಿ ಬೆಳೆಯುತ್ತಾ ಬಂತು. ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.


ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ. ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ. ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು; ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.


ಅವನು ಮಾತನ್ನು ಮುಂದುವರಿಸಿ, “ನಿನ್ನ ತಂದೆಯು ಮತ್ತು ಅವನ ಜನರು ಶೂರರೆಂಬುದು ನಿನಗೆ ತಿಳಿದಿದೆ. ಕಾಡಿನಲ್ಲಿ ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರು ರೋಷವುಳ್ಳವರಾಗಿದ್ದಾರೆ. ನಿನ್ನ ತಂದೆಯು ಒಬ್ಬ ನುರಿತ ಹೋರಾಟಗಾರ. ಅವನು ಜನರೊಂದಿಗೆ ರಾತ್ರಿಯಲ್ಲಿ ಇರುವುದಿಲ್ಲ.


“‘ಅದು ಗರ್ಜಿಸುವ ಶಬ್ದವನ್ನು ಜನರು ಕೇಳಿದರು. ಜನಾಂಗಗಳು ಅದರ ಬಗ್ಗೆ ಕೇಳಿದರು. ಅದನ್ನು ತಮ್ಮ ಗುಂಡಿಯಲ್ಲಿ ಅವರು ಬಂಧಿಸಿದರು. ಅವರು ಅದರ ಬಾಯಿಗೆ ಕೊಂಡಿಯನ್ನು ಹಾಕಿ ಈಜಿಪ್ಟಿಗೆ ಅದನ್ನು ಕೊಂಡೊಯ್ದರು.


ಅದು ಬೆಳೆದು ಪ್ರಾಯದ ಸಿಂಹವಾಗಿ ಸಿಂಹಗಳೊಂದಿಗೆ ಬೇಟೆಯಾಡಲು ಹೋಯಿತು; ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು