Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 17:15 - ಪರಿಶುದ್ದ ಬೈಬಲ್‌

15 ಆದರೆ ಈ ಹೊಸ ರಾಜನು ನೆಬೂಕದ್ನೆಚ್ಚರನಿಗೆ ತಿರುಗಿ ಬೀಳಲು ಪ್ರಯತ್ನಿಸಿದನು. ಅವನು ಈಜಿಪ್ಟಿಗೆ ದೂತರನ್ನು ಕಳುಹಿಸಿ ಸಹಾಯವನ್ನು ಕೇಳಿದನು. ಬಹಳ ಕುದುರೆಗಳನ್ನೂ ಸೈನಿಕರನ್ನೂ ಕೇಳಿದನು. ಯೆಹೂದದ ಹೊಸ ರಾಜನು ತನ್ನ ಪ್ರಯತ್ನದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನ್ನು ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಮತ್ತು ಬಹಳ ಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೂ ಇವನು ಗೆಲ್ಲುವನೋ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆದರೆ ಅವನು ಬಾಬಿಲೋನಿನ ಅರಸನ ವಿರುದ್ಧ ದಂಗೆಯೆದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಈಜಿಪ್ಟಿಗೆ ರಾಯಭಾರಿಗಳನ್ನು ಕಳುಹಿಸಿದ. ಆದರೂ ಇವನು ಗೆಲ್ಲುವನೇ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೇ? ಒಪ್ಪಂದವನ್ನು ಮೀರಿದವನು ತಪ್ಪಿಸಿಕೊಂಡಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಇವನು ಸಮೃದ್ಧನಾಗಿಯೇ ಇರುವನೋ? ಇಂಥಾ ಕೃತ್ಯಗಳನ್ನು ನಡಿಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ಅರಸನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು, ತನ್ನ ರಾಯಭಾರಿಗಳನ್ನು ಈಜಿಪ್ಟಿಗೆ ಕಳುಹಿಸಿ, ತನಗೆ ಕುದುರೆಗಳನ್ನೂ, ಬಹಳ ಜನರನ್ನೂ ಕೊಡಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿಯಾಗುವನೋ? ಇಂತಹ ಸಂಗತಿಗಳನ್ನು ಮಾಡುವವನು ತಪ್ಪಿಸಿಕೊಳ್ಳುವನೋ ಅಥವಾ ಒಡಂಬಡಿಕೆಯನ್ನು ಮುರಿದು ತಪ್ಪಿಸಿಕೊಳ್ಳಲಾಗುವುದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 17:15
29 ತಿಳಿವುಗಳ ಹೋಲಿಕೆ  

ಆಗ ಅಗಲ ರೆಕ್ಕೆಗಳಿದ್ದ ಇನ್ನೊಂದು ಹದ್ದು ದ್ರಾಕ್ಷಾಲತೆಯನ್ನು ನೋಡಿತು. ಈ ಹದ್ದಿಗೆ ತುಂಬಾ ಪುಕ್ಕಗಳಿದ್ದವು. ದ್ರಾಕ್ಷಾಲತೆಯು ತನ್ನ ಬೇರುಗಳನ್ನು ಹದ್ದಿನ ಕಡೆಗೆ ತಿರುಗಿಸಿತ್ತು. ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ ಅದು ತನ್ನ ರೆಂಬೆಗಳನ್ನು ಹದ್ದಿನ ಕಡೆಗೆ ಚಾಚಿಕೊಂಡಿತ್ತು. ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಬೇರೆ ಕಡೆಗೆ ತಿರುಗಿಕೊಂಡಿತು.


ಯೆಹೋವನಿಗೆ ಅವರ ಮೇಲೆ ಕೋಪ ಬಂದುದರಿಂದ ಜೆರುಸಲೇಮ್ ಮತ್ತು ಯೆಹೂದಗಳಿಗೆ ವಿಪತ್ತುಗಳು ಸಂಭವಿಸಿದವು. ಕೊನೆಗೆ, ಯೆಹೋವನು ಜೆರುಸಲೇಮ್ ಮತ್ತು ಯೆಹೂದದ ಜನರನ್ನು ತನ್ನಿದ ದೂರ ಎಸೆದುಬಿಟ್ಟನು. ಚಿದ್ಕೀಯನು ಬಾಬಿಲೋನ್ ರಾಜನ ವಿರುದ್ಧವಾಗಿ ದಂಗೆ ಎದ್ದನು.


ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’”


ಚಿದ್ಕೀಯನೇ, ನೀನು ಬಾಬಿಲೋನಿನ ರಾಜನಿಂದ ತಪ್ಪಿಸಿಕೊಳ್ಳಲಾರೆ. ನಿಶ್ಚಿತವಾಗಿ ನಿನ್ನನ್ನು ಹಿಡಿದು ಅವನಿಗೆ ಒಪ್ಪಿಸಲಾಗುವುದು. ಬಾಬಿಲೋನಿನ ರಾಜನನ್ನು ನೀನು ಪ್ರತ್ಯಕ್ಷವಾಗಿ ನೋಡುವೆ. ಅವನು ನಿನ್ನೊಂದಿಗೆ ಮುಖಾಮುಖಿಯಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಹೋಗುವೆ.


ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು.


ಯೆಹೋವನ ಕೋಪದಿಂದ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಇವೆಲ್ಲವೂ ಸಂಭವಿಸಿದವು. ಹೀಗೆ ಯೆಹೋವನು ಅವರನ್ನು ತನ್ನಿಂದ ದೂರಸರಿಸಿದನು. ಚಿದ್ಕೀಯನು ಬಾಬಿಲೋನ್ ರಾಜನಿಗೆ ವಿರುದ್ಧವಾಗಿ ದಂಗೆ ಎದ್ದನು.


ಅರಸನು ತನ್ನ ಉಪಯೋಗಕ್ಕಾಗಿ ಹೆಚ್ಚೆಚ್ಚಾಗಿ ಕುದುರೆಗಳನ್ನು ಖರೀದಿಸಬಾರದು; ಜನರನ್ನು ಈಜಿಪ್ಟಿಗೆ ಕಳುಹಿಸಿ ಅಲ್ಲಿಂದ ಹೆಚ್ಚುಹೆಚ್ಚು ಕುದುರೆಗಳನ್ನು ತರಿಸಬಾರದು; ಯಾಕೆಂದರೆ, ‘ನೀವು ಆ ಮಾರ್ಗದಲ್ಲಿ ಹಿಂದಕ್ಕೆ ಹೋಗಲೇಬಾರದು’ ಎಂದು ಯೆಹೋವನು ಹೇಳಿದ್ದಾನೆ.


ಆದರೆ ಯೆಹೂದದ ರಾಜನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಯಾಕೆಂದರೆ ಅವನು ತನ್ನ ಪ್ರಮಾಣವನ್ನು ತಿರಸ್ಕರಿಸಿದನು ಮತ್ತು ತಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಹಾಕಿದನು.”


ನೀನು ಹೀಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ದ್ರಾಕ್ಷಾಲತೆಯು ಬದುಕಿ ಬೆಳೆಯುವುದೋ? ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಬೇರುಗಳನ್ನು ಎಳೆದುಹಾಕಿ, ಅದರ ದ್ರಾಕ್ಷಿಹಣ್ಣುಗಳನ್ನು ಕಿತ್ತುಹಾಕುವುದು. ಆಗ ಚಿಗುರುಗಳು ಬಾಡಿ ಒಣಗಿಹೋಗುವವು. ಆ ಸಸಿಯು ಬಲಹೀನವಾಗುವುದು. ಆಗ ಅದನ್ನು ಬೇರುಸಹಿತ ಕಿತ್ತುಹಾಕಲು ಮಹಾ ಬಲವಾಗಲಿ ಅಥವಾ ದೊಡ್ಡಸೈನ್ಯವಾಗಲಿ ಅಗತ್ಯವಿರುವದಿಲ್ಲ.


“ನಿನ್ನ ಎಲ್ಲಾ ಹೆಂಡತಿಯರನ್ನು ಮತ್ತು ಮಕ್ಕಳನ್ನು ಹೊರತರಲಾಗುವುದು. ಅವರನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಬಾಬಿಲೋನಿನ ರಾಜನು ನಿನ್ನನ್ನು ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.


ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು.


“ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ!


ಇಸ್ರೇಲಿನ ದುಷ್ಟ ಅಧಿಪತಿಯೇ, ನೀನು ಸಾಯುವಿ. ನಿನಗೆ ನನ್ನ ಶಿಕ್ಷೆಯು ಬಂದಾಯಿತು. ನಿನ್ನ ಅಂತ್ಯವು ಹತ್ತಿರವೇ ಇದೆ.”


ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರ. ಖಂಡಿತವಾಗಿಯೂ ಅವನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು. ಚಿದ್ಕೀಯನು ಮುಖಾಮುಖಿಯಾಗಿ ಬಾಬಿಲೋನಿನ ರಾಜನೊಂದಿಗೆ ಮಾತನಾಡುವನು. ಚಿದ್ಕೀಯನು ತನ್ನ ಕಣ್ಣುಗಳಿಂದ ಅವನನ್ನು ನೋಡುವನು.


ಮತ್ತೊಬ್ಬನ ಮೇಲೆ ಸುಳ್ಳುಹೇಳುವವನು ದಂಡಿಸಲ್ಪಡುವನು. ಸುಳ್ಳುಸಾಕ್ಷಿಗೆ ಸುರಕ್ಷತೆಯಿಲ್ಲ.


ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ. ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು. ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.


ದೇವರೇ, ಅವರ ದುಷ್ಟತನದ ನಿಮಿತ್ತ ಅವರನ್ನು ಸೆರೆಯಾಳುಗಳಾಗಿ ಕಳುಹಿಸು. ಅವರು ಅನ್ಯ ಜನಾಂಗಗಳ ಕೋಪವನ್ನು ಅನುಭವಿಸುವಂತೆ ಹೊರಗಟ್ಟು.


ಕತ್ತೆಗಳ ಲಿಂಗಗಳಂತಿದ್ದ ಲೈಂಗಿಕ ಲಿಂಗಗಳನ್ನು ಹೊಂದಿದ್ದ ಈಜಿಪ್ಟಿನ ಪ್ರಿಯರನ್ನು ಮತ್ತು ಕುದುರೆಯ ವೀರ್ಯದಂತೆ ಹರಿಯುವ ಅವರ ವೀರ್ಯವನ್ನು ಆಕೆ ನೆನಪುಮಾಡಿಕೊಂಡಳು.


ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು. ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು. ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು. ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”


ಇಸ್ರೇಲರು ಅವರ ಮೇಲೆ ಇನ್ನು ಎಂದಿಗೂ ಭರವಸವಿಡುವುದಿಲ್ಲ. ಇಸ್ರೇಲರು ಸಹಾಯಕ್ಕಾಗಿ ದೇವರ ಬಳಿಗೆ ಹೋಗದೆ ಈಜಿಪ್ಟಿನವರ ಮೇಲೆ ಭರವಸವಿಟ್ಟಿದ್ದ ಪಾಪವನ್ನು ಅರಿತುಕೊಳ್ಳುವರು. ಆಗ ಅವರು ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.”


ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ.


ನೀನು ನಿನ್ನ ಶಕ್ತಿಯಲ್ಲಿಯೂ ಯುದ್ಧದ ತಂತ್ರೋಪಾಯಗಳ ಮೇಲೆಯೂ ಭರವಸವಿಟ್ಟಿದ್ದರೆ ಅವು ಕೇವಲ ನಿಷ್ಪ್ರಯೋಜಕವಾಗಿವೆ; ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿರುವೆ? ನೀನು ನನ್ನ ವಿರುದ್ಧ ದಂಗೆ ಏಳಬೇಕಾದರೆ ಯಾರ ಮೇಲೆ ಭರವಸವಿಟ್ಟಿರುವೆ?


ದೇವರು ಹೇಳಿದ್ದು, “ನರಪುತ್ರನೇ, ನನ್ನ ಪರವಾಗಿ ಜನರ ಕೂಡ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಅಮ್ಮೋನಿಯರ ಬಗ್ಗೆಯೂ ಅವರ ದೂಷಣೆಗಳ ಬಗ್ಗೆಯೂ ಹೀಗೆ ಹೇಳುತ್ತಾನೆ: “‘ನೋಡು, ಒಂದು ಖಡ್ಗ. ಆ ಖಡ್ಗವು ಒರೆಯಿಂದ ಹೊರಬಂದಿದೆ. ಆ ಖಡ್ಗವನ್ನು ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ. ಖಡ್ಗವು ಕೊಲ್ಲಲು ಸಿದ್ಧವಾಗಿದೆ. ಮಿಂಚಿನಂತೆ ಹೊಳೆಯಲೆಂದು ಅದನ್ನು ನಯಗೊಳಿಸಲಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು