Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 16:63 - ಪರಿಶುದ್ದ ಬೈಬಲ್‌

63 ಹೀಗಿರಲು, ನಿನ್ನ ಕಾರ್ಯಗಳನ್ನೆಲ್ಲಾ ನಾನು ಕ್ಷಮಿಸುವಾಗ, ನೀನು ಅವುಗಳನ್ನು ಜ್ಞಾಪಿಸಿಕೊಂಡು ನಾಚಿಕೆಪಡುವೆ. ಅಹಂಕಾರದಿಂದ ಮಾತನಾಡಲು ಮತ್ತೊಮ್ಮೆ ಬಾಯಿ ತೆರೆಯಲಾಗದಂತೆ ನೀನು ಬಹಳವಾಗಿ ಅವಮಾನಿತಳಾಗುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

63 ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ಜ್ಞಾಪಕಕ್ಕೆ ತಂದು ನಾಚಿಕೆಪಟ್ಟು ನಿನ್ನ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವಿ” ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

63 ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

63 ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷವಿುಸಿಬಿಟ್ಟ ಮೇಲೆ ನೀನು ಅವುಗಳನ್ನು ಜ್ಞಾಪಕಕ್ಕೆ ತಂದು ನಾಚಿಕೆಪಟ್ಟು ನಿನ್ನ ಅವಮಾನದ ನಿವಿುತ್ತ ಇನ್ನು ಬಾಯಿ ತೆರೆಯದಿರುವಿ. ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

63 ಆಗ ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ಜ್ಞಾಪಕಕ್ಕೆ ತಂದುಕೊಂಡು, ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದು ಎಂದು ನಿನ್ನ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 16:63
28 ತಿಳಿವುಗಳ ಹೋಲಿಕೆ  

ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ.


ನಾನು ಬಾಯಿತೆರೆದು ಮಾತಾಡುವುದಿಲ್ಲ. ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.


ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ.


“ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ.


ನಿನ್ನ ಅಕ್ಕತಂಗಿಯಂದಿರನ್ನು ನಾನು ನಿನ್ನ ಬಳಿಗೆ ತಂದು ಅವರನ್ನು ನಿನ್ನ ಮಕ್ಕಳನ್ನಾಗಿ ಮಾಡುವೆನು. ಅದು ನಮ್ಮ ಒಡಂಬಡಿಕೆಯಲ್ಲಿಲ್ಲದಿದ್ದರೂ ನಾನು ಅದನ್ನು ನಿನಗಾಗಿ ಮಾಡುವೆನು. ಆಗ ನೀನು ಮಾಡಿದ ಭಯಂಕರ ಸಂಗತಿಗಳನ್ನು ಜ್ಞಾಪಕಕ್ಕೆ ತಂದು ನೀನು ನಾಚಿಕೊಳ್ಳುವಿ.


ಚಾಚಿ ಹೀಗೆ ಪ್ರಾರ್ಥಿಸಿದೆನು: “ನನ್ನ ದೇವರೇ, ನಿನ್ನ ಕಡೆಗೆ ಮುಖವೆತ್ತಲು ನನಗೆ ನಾಚಿಕೆಯಾಗುತ್ತದೆ; ಯಾಕೆಂದರೆ ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿದೆ. ನಮ್ಮ ಅಪರಾಧಗಳ ರಾಶಿಯು ಪರಲೋಕದವರೆಗೂ ಏರಿಹೋಗಿದೆ.


ನಿಮ್ಮನ್ನು ಇತರ ಜನರಿಗಿಂತಲೂ ಉತ್ತಮರೆಂದು ಯಾರು ಹೇಳುತ್ತಾರೆ? ನಿಮ್ಮಲ್ಲಿರುವ ಪ್ರತಿಯೊಂದನ್ನೂ ದೇವರೇ ನಿಮಗೆ ಕೊಟ್ಟಿದ್ದಾನೆ. ಹೀಗಿರುವಾಗ, ನಿಮ್ಮ ಸ್ವಂತ ಶಕ್ತಿಯಿಂದ ಅವುಗಳನ್ನು ಪಡೆದುಕೊಂಡವರಂತೆ ಏಕೆ ಜಂಬಕೊಚ್ಚಿಕೊಳ್ಳುವಿರಿ?


ಜೀವಂತವಾಗಿರುವ ಯಾವ ವ್ಯಕ್ತಿಯೇ ಆಗಲಿ ತನ್ನ ಪಾಪಗಳ ನಿಮಿತ್ತ ಯೆಹೋವನ ಶಿಕ್ಷೆಗೆ ಗುರಿಯಾಗುವಾಗ ದೂರು ಹೇಳಕೂಡದು.


ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು! ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು! ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ ನಮ್ಮ ಪಾಪಗಳನ್ನು ಅಳಿಸಿಬಿಡು.


ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ; ನಮ್ಮನ್ನು ಆ ಪಾಪಗಳಿಂದ ಬಿಡಿಸು.


ನೀವು ದುಷ್ಕೃತ್ಯಗಳನ್ನು ಮಾಡಿದಿರಿ. ಈಗ ನೀವು ಆ ಕಾರ್ಯಗಳ ವಿಷಯದಲ್ಲಿ ನಾಚಿಕೆಪಡುತ್ತೀರಿ. ಆ ಕಾರ್ಯಗಳು ನಿಮಗೆ ಸಹಾಯ ಮಾಡಿದವೇ? ಇಲ್ಲ. ಆ ಕಾರ್ಯಗಳು ಆತ್ಮಿಕ ಮರಣವನ್ನು ಮಾತ್ರ ಉಂಟುಮಾಡುತ್ತವೆ.


ಆದರೆ ಆತನು ಅವರಿಗೆ ಕರುಣೆತೋರಿ ಅವರ ಪಾಪಗಳನ್ನು ಕ್ಷಮಿಸಿದನು. ಆತನು ಅವರನ್ನು ನಾಶಮಾಡಲಿಲ್ಲ. ಅನೇಕ ಸಲ ಆತನು ತನ್ನ ಕೋಪವನ್ನು ತಡೆಯುತ್ತಾ ಬಂದನು; ತಾನು ಬಹು ಕೋಪಗೊಳ್ಳದಂತೆ ನೋಡಿಕೊಂಡನು.


ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ,


ನಿಮ್ಮನ್ನು ನಿಮ್ಮ ದುಷ್ಟತ್ವದಿಂದ ಹೊಲಸು ಮಾಡಿಕೊಂಡದ್ದನ್ನು ಅಲ್ಲಿ ಜ್ಞಾಪಕಮಾಡಿಕೊಳ್ಳುವಿರಿ. ಆಗ ನೀವು ನಾಚಿಕೆಪಡುವಿರಿ.


ಆ ಜನರು ತಮಗೊದಗಿದ ಅವಮಾನವನ್ನೂ ನನಗೆ ವಿರುದ್ಧವಾಗಿ ವರ್ತಿಸಿದ್ದನ್ನೂ ಮರೆತುಬಿಡುವರು. ತಮ್ಮ ಸ್ವದೇಶದಲ್ಲಿ ಸುರಕ್ಷಿತವಾಗಿ ವಾಸಿಸುವರು. ಅವರು ಯಾರಿಗೂ ಹೆದರಬೇಕಾಗಿಲ್ಲ.


“ಈಗ, ನರಪುತ್ರನೇ, ಇಸ್ರೇಲ್ ಜನಾಂಗದವರಿಗೆ ಆಲಯದ ವಿಚಾರವಾಗಿ ತಿಳಿಸು. ಆಲಯದ ವಿನ್ಯಾಸದ ಬಗ್ಗೆ ಅವರು ತಿಳಿದಾಗ ತಮ್ಮ ಪಾಪಗಳಿಗಾಗಿ ಅವರು ನಾಚಿಕೆಪಡುವರು.


“ಆದ್ದರಿಂದ ಯಾಜಕರಂತೆ ಲೇವಿಯರು ನನಗೆ ಕಾಣಿಕೆಗಳನ್ನು ತರಕೂಡದು. ಅವರು ನನ್ನ ಪವಿತ್ರ ವಸ್ತುಗಳ ಬಳಿಗೂ, ಅತೀ ಪವಿತ್ರ ವಸ್ತುಗಳ ಬಳಿಗೂ ಬರಬಾರದು. ಅವರು ಮಾಡಿದ ಭಯಂಕರ ಕೃತ್ಯಗಳಿಗಾಗಿ ಅವರು ಅವಮಾನಿತರಾಗಬೇಕು.


“ಭೂಲೋಕವೆಲ್ಲಾ ದೇವಜನರಿಗಾಗಿ ಸಂತೋಷಿಸುವದು; ಯಾಕೆಂದರೆ ಆತನು ಅವರನ್ನು ಸಾಯಿಸುವನು; ತನ್ನ ಸೇವಕರನ್ನು ಸಂಹರಿಸುವವರನ್ನು ಶಿಕ್ಷಿಸುವನು; ತನ್ನ ವೈರಿಗಳಿಗೆ ತಕ್ಕ ದಂಡನೆ ಕೊಡುವನು. ತನ್ನ ದೇಶವನ್ನೂ ತನ್ನ ಜನರನ್ನೂ ಶುದ್ಧಿ ಮಾಡುವನು.”


ನಿನ್ನ ರೌದ್ರವನ್ನು ತೊರೆದುಬಿಡು. ಉಗ್ರ ಕೋಪದಿಂದಿರಬೇಡ.


ಅಲ್ಲಿ ವಾಸಿಸುವವರಲ್ಲಿ ಯಾರೂ “ನನಗೆ ಸೌಖ್ಯವಿಲ್ಲ” ಎಂದು ಹೇಳುವುದಿಲ್ಲ. ಅಲ್ಲಿ ವಾಸಿಸುವವರೆಲ್ಲಾ ತಮ್ಮ ಪಾಪಗಳಿಗೆ ಕ್ಷಮೆಹೊಂದಿದವರಾಗಿದ್ದಾರೆ.


ನಿನ್ನ ಪಾಪಗಳು ದೊಡ್ಡ ಮೋಡದಂತಿವೆ. ಆದರೆ ನಾನು ಅವುಗಳನ್ನು ಅಳಿಸಿಬಿಟ್ಟಿದ್ದೇನೆ. ನಿನ್ನ ಪಾಪಗಳನ್ನು ಗಾಳಿಯಲ್ಲಿ ಹಾರಿಹೋದ ಮೋಡದಂತೆ ಹಾರಿಸಿಬಿಟ್ಟಿದ್ದೇನೆ. ನಾನು ನಿನ್ನನ್ನು ರಕ್ಷಿಸಿದೆನು. ಆದ್ದರಿಂದ ನನ್ನ ಬಳಿಗೆ ಹಿಂತಿರುಗಿ ಬಾ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು