ಯೆಹೆಜ್ಕೇಲನು 16:40 - ಪರಿಶುದ್ದ ಬೈಬಲ್40 ನಿನ್ನನ್ನು ಕಲ್ಲುಗಳಿಂದ ಕೊಲ್ಲುವದಕ್ಕಾಗಿ ಅವರು ಜನರನ್ನು ಒಂದುಗೂಡಿಸುವರು. ಬಳಿಕ ಅವರು ನಿನ್ನನ್ನು ಖಡ್ಗಗಳಿಂದ ತುಂಡುತುಂಡಾಗಿ ಕತ್ತರಿಸುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201940 ಅವರು ನಿನ್ನ ವಿಚಾರವಾಗಿ ನ್ಯಾಯಸಭೆಯನ್ನು ಕೂಡಿಸಿ, ನಿನ್ನನ್ನು ಕಲ್ಲೆಸೆದು ಕೊಲ್ಲುವರು, ಕತ್ತಿಗಳಿಂದ ಹತಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)40 “ಅವರು ನಿನ್ನ ವಿಷಯದಲ್ಲಿ ನ್ಯಾಯಸಭೆಯನ್ನು ಕೂಡಿಸಿ, ನಿನ್ನನ್ನು ಕಲ್ಲೆಸೆದು ಕೊಲ್ಲುವರು; ಕತ್ತಿಗಳಿಂದ ತುಂಡರಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)40 ಅವರು ನಿನ್ನ ವಿಚಾರವಾಗಿ ನ್ಯಾಯಸಭೆಯನ್ನು ಕೂಡಿಸಿ ನಿನ್ನನ್ನು ಕಲ್ಲೆಸೆದು ಕೊಲ್ಲುವರು, ಕತ್ತಿಗಳಿಂದ ಹತಿಸುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ40 ಅವರು ನಿನಗೆ ವಿರುದ್ಧವಾಗಿ ಒಂದು ಗುಂಪನ್ನು ಕರೆದುಕೊಂಡು ಬಂದು, ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಖಡ್ಗಗಳಿಂದ ನಿನ್ನನ್ನು ತಿವಿಯುವರು. ಅಧ್ಯಾಯವನ್ನು ನೋಡಿ |
ಆತನು ಹೇಳಿದ್ದೇನೆಂದರೆ: ಇಸ್ರೇಲ್ ಜನರಿಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಇಗೋ, ನನ್ನ ಪವಿತ್ರಾಲಯವನ್ನು ಹಾಳುಮಾಡುವೆನು. ನೀವು ಆ ಸ್ಥಳದ ಬಗ್ಗೆ ಹೆಮ್ಮೆಯುಳ್ಳವರಾಗಿದ್ದು ಸ್ತುತಿಗೀತೆಗಳನ್ನು ಹಾಡುತ್ತೀರಿ. ಅದು ಶಕ್ತಿ ದೊರಕುವ ಸ್ಥಳ. ನೀವು ಆ ಆಲಯವನ್ನು ನೋಡುತ್ತಾ ಆನಂದಿಸುತ್ತೀರಿ; ಅದನ್ನು ಬಹಳವಾಗಿ ಪ್ರೀತಿಸುತ್ತೀರಿ. ಆದರೆ ನಾನು ಅದನ್ನು ಕೆಡವಿಬಿಡುವೆನು. ನೀವು ಬಿಟ್ಟುಹೋಗುವ ನಿಮ್ಮ ಮಕ್ಕಳು ಯುದ್ಧದಲ್ಲಿ ಸಾಯುವರು.
ಆದ್ದರಿಂದ ನಾನು ಉತ್ತರದ ಎಲ್ಲಾ ಜನಾಂಗಗಳನ್ನು ಕರೆಸುತ್ತೇನೆ.” ಇದು ಯೆಹೋವನ ಸಂದೇಶ. “ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಕೂಡಲೇ ಕರೆಸುವೆನು. ಅವನು ನನ್ನ ಸೇವಕ. ನಾನು ಆ ಜನರನ್ನು ಯೆಹೂದ ದೇಶದ ವಿರುದ್ಧವಾಗಿಯೂ ಯೆಹೂದ್ಯರ ವಿರುದ್ಧವಾಗಿಯೂ ತರುತ್ತೇನೆ. ನಾನು ನಿಮ್ಮ ಸುತ್ತಮುತ್ತಲಿನಲ್ಲಿದ್ದ ಜನಾಂಗಗಳ ವಿರುದ್ಧವಾಗಿಯೂ ಅವರನ್ನು ಕರೆತರುವೆನು. ನಾನು ಆ ದೇಶಗಳನ್ನೆಲ್ಲ ನಾಶಮಾಡುವೆನು. ನಾನು ಆ ಭೂಮಿಗಳನ್ನು ಶಾಶ್ವತವಾಗಿ ಬರಿದಾದ ಮರುಭೂಮಿಗಳನ್ನಾಗಿ ಮಾಡುವೆನು. ಜನರು ಆ ದೇಶಗಳನ್ನು ನೋಡಿ ಅವು ಹಾಳಾಗಿರುವುದನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.
ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ನಾಶಮಾಡಲು ಬಾಬಿಲೋನಿನ ಅರಸನನ್ನು ಕಳುಹಿಸಿದನು. ಬಾಬಿಲೋನಿನ ಅರಸನು ದೇವಾಲಯದೊಳಗಿದ್ದ ಯುವಜನರನ್ನು ಕೊಂದುಹಾಕಿದನು. ಅವನಿಗೆ ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಕರುಣೆಯೇ ಇರಲಿಲ್ಲ. ಅವನು ಚಿಕ್ಕವರನ್ನೂ ದೊಡ್ಡವರನ್ನೂ ಗಂಡಸರನ್ನೂ ಹೆಂಗಸರನ್ನೂ ಬಿಡದೆ ಸಂಹರಿಸಿದನು. ರೋಗಿಗಳನ್ನೂ ಆರೋಗ್ಯವಂತರನ್ನೂ ಸಂಹರಿಸಿದನು; ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಶಿಕ್ಷಿಸಲು ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು.