Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 12:19 - ಪರಿಶುದ್ದ ಬೈಬಲ್‌

19 ಇದನ್ನು ನೀನು ಸಾಮಾನ್ಯ ಜನರಿಗೆ ತಿಳಿಸಬೇಕು. ನೀನು ಹೀಗೆ ಹೇಳಬೇಕು, ‘ಇನ್ನೂ ಇಸ್ರೇಲ್ ದೇಶದಲ್ಲಿರುವ ಜೆರುಸಲೇಮಿನ ನಿವಾಸಿಗಳ ಬಗ್ಗೆ ನಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಅವರು ಊಟಮಾಡುವಾಗ ಉದ್ವೇಗದಿಂದಿರುವರು; ಅವರು ಕುಡಿಯುವಾಗ ಭಯದಿಂದಿರುವರು. ಯಾಕೆಂದರೆ ಅವರ ದೇಶದಲ್ಲಿರುವ ಸಮಸ್ತವು ನಾಶವಾಗುತ್ತದೆ, ಯಾಕೆಂದರೆ ಅಲ್ಲಿ ವಾಸಿಸುವವರೆಲ್ಲರೂ ಹಿಂಸಕರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇಮಿನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ, ಅವರು ಅನ್ನವನ್ನು ನಡಗುತ್ತಾ ತಿನ್ನುವರು ಮತ್ತು ನೀರನ್ನು ಹೆದರಿಕೆಯಿಂದ ಕುಡಿಯುವರು; ಏಕೆಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವುದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ದೇಶವು ಬರಿದಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿನ ಜೆರುಸಲೇಮ್ ನಿವಾಸಿಗಳನ್ನೂ ಕುರಿತು ಇಂತೆನ್ನುತ್ತಾರೆ: ‘ಅವರು ಅನ್ನವನ್ನು ಅಂಜಿಕೆಯಿಂದ ತಿಂದು ನೀರನ್ನು ನಡುಕದಿಂದ ಕುಡಿಯುವರು: ಏಕೆಂದರೆ ಆ ನಾಡಿನಲ್ಲಿರುವವರು ಹಿಂಸಾಚಾರಿಗಳು; ಈ ಕಾರಣ, ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ನಾಡು ಬರಿದಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಈ ದೇಶದಲ್ಲಿರುವ ಜನರಿಗೆ ಹೀಗೆ ಹೇಳು - ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇವಿುನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ - ಅವರು ಅನ್ನವನ್ನು ಬೆದರಿನಿಂದ ತಿಂದು ನೀರನ್ನು ಬೆರಗಿನಿಂದ ಕುಡಿಯುವರು; ಏಕಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ ದೇಶವು ಬರಿದಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಿನ್ನ ದೇಶದ ಜನರಿಗೆ ಹೀಗೆ ಹೇಳು, ‘ಯೆರೂಸಲೇಮಿನ ನಿವಾಸಿಗಳಿಗೆ ಮತ್ತು ಇಸ್ರಾಯೇಲರ ದೇಶಕ್ಕೆ ಸಾರ್ವಭೌಮ ಯೆಹೋವ ದೇವರು ಹೇಳಿದ್ದೇನೆಂದರೆ, ಅವರು ತಮ್ಮ ರೊಟ್ಟಿಯನ್ನು ಎಚ್ಚರಿಕೆಯಿಂದಲೇ ತಿನ್ನುವರು, ನೀರನ್ನು ಅಂಜಿಕೆಯಿಂದಲೇ ಕುಡಿಯುವರು. ಅದರಲ್ಲಿ ವಾಸವಾಗಿರುವವರೆಲ್ಲರ ಹಿಂಸಾಚಾರದಿಂದ ಅವರ ದೇಶವು ಸೊತ್ತನ್ನೆಲ್ಲಾ ಕಳೆದುಕೊಂಡು ಹಾಳಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 12:19
24 ತಿಳಿವುಗಳ ಹೋಲಿಕೆ  

ನಾನು ಇತರ ಜನಾಂಗಗಳನ್ನು ಬಿರುಗಾಳಿಯಂತೆ ಅವರ ಬಳಿಗೆ ಕಳುಹಿಸುವೆನು. ಆ ರಾಷ್ಟ್ರಗಳನ್ನು ಅವರು ತಿಳಿದಿರಲಿಲ್ಲ. ಆದರೆ ಆ ದೇಶಗಳವರು ಇವರ ದೇಶವನ್ನು ದಾಟಿಹೋಗುವಾಗ ಆ ಸುಂದರವಾದ ದೇಶವು ನಾಶವಾಗುವದು.”


ದೇಶದಲ್ಲಿ ವಾಸಿಸಿದ್ದ ಜನರಿಂದಲೂ ಅವರು ಮಾಡಿದ್ದ ಕೆಲಸಗಳಿಂದಲೂ ದೇಶವು ಹಾಳಾಗಿಹೋಗಿತ್ತು.


ನಾನು ಅವರ ಮೇಲೆ ನನ್ನ ಕೈಯೆತ್ತಿ ಅವರನ್ನು ದಂಡಿಸುವೆನು ಮತ್ತು ಮರುಭೂಮಿಯಿಂದ ದಿಬ್ಲದವರೆಗೆ ಅವರು ಯಾವುದೇ ದೇಶದಲ್ಲಿ ವಾಸವಾಗಿದ್ದರೂ ನಾಶಮಾಡುವೆನು. ಆಗ ನಾನೇ ಯೆಹೋವನೆಂಬುದು ಅವರಿಗೆ ತಿಳಿಯುವುದು.”


ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು.


“ಸೆರೆಯವರಿಗಾಗಿ ಸರಪಣಿಗಳನ್ನು ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ.


ಕೇಳಿರಿ, ಉತ್ತರ ದಿಕ್ಕಿನಿಂದ ಬರುತ್ತಿರುವ ಮಹಾಧ್ವನಿಯನ್ನು! ಇದು ಯೆಹೂದದ ನಗರಗಳನ್ನು ನಾಶಮಾಡುತ್ತದೆ. ಯೆಹೂದವು ಒಂದು ಬರಿದಾದ ಮರಳುಗಾಡಾಗುವದು, ನರಿಗಳ ನಿವಾಸವಾಗುವುದು.


ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”


“ಆದ್ದರಿಂದ ಹೋಗಿ ಇಸ್ರೇಲಿನ ಪರ್ವತಗಳಿಗೆ ನನ್ನ ಪರವಾಗಿ ಹೇಳು. ಇದು ಒಡೆಯನಾದ ಯೆಹೋವನ ನುಡಿ ಎಂದು ಹೇಳು. ‘ವೈರಿಗಳು ನಿನ್ನ ಪಟ್ಟಣಗಳನ್ನೆಲ್ಲಾ ನಾಶಮಾಡಿ ಎಲ್ಲಾ ದಿಕ್ಕುಗಳಿಂದ ನುಗ್ಗಿ ನಿನ್ನ ಮೇಲೆ ಧಾಳಿ ಮಾಡಿರುತ್ತಾರೆ. ನೀನು ಬೇರೆಯವರ ವಶವಾಗಬೇಕೆಂಬದಾಗಿ ಹೀಗೆ ಮಾಡಿದರು. ಜನರು ನಿನ್ನ ವಿಷಯವಾಗಿ ಗುಜುಗುಜು ಮಾತನಾಡಿದರು.’”


ಬಳಿಕ ದೇವರು ನನಗೆ, “ನರಪುತ್ರನೇ, ನಾನು ಜೆರುಸಲೇಮಿಗೆ ರೊಟ್ಟಿಯ ಸರಬರಾಜನ್ನು ನಿಲ್ಲಿಸುವೆನು. ಜನರಿಗೆ ತಿನ್ನಲು ಕೊಂಚ ರೊಟ್ಟಿ ಸಿಗುವುದು. ಆಹಾರವು ಮುಗಿದು ಹೋಗುತ್ತಿರುವದರಿಂದ ಅವರು ಬಹಳವಾಗಿ ಚಿಂತಿಸುವರು. ಅವರಿಗೆ ಸ್ವಲ್ಪವೇ ಕುಡಿಯುವ ನೀರು ಇರುವುದು. ಆ ನೀರನ್ನು ಕುಡಿಯುವಾಗ ಅವರಿಗೆ ಭಯಹಿಡಿಯುವುದು.


ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಈ ಸ್ಥಳವು ಈಗ ಬರಿದಾಗಿದೆ. ಈಗ ಇಲ್ಲಿ ಜನರಾಗಲಿ ಪಶುಗಳಾಗಲಿ ವಾಸಿಸುವದಿಲ್ಲ. ಆದರೆ ಯೆಹೂದದ ಎಲ್ಲಾ ಊರುಗಳಲ್ಲಿ ಜನರು ವಾಸಿಸುವರು; ಕುರುಬರು ವಾಸಿಸುವರು. ಕುರಿಮಂದೆಗಳಿಗಾಗಿ ಹುಲ್ಲುಗಾವಲುಗಳಿರುವವು.


“‘ನಮ್ಮ ದೇಶವು ಒಂದು ಬರಿದಾದ ಮರುಭೂಮಿಯಾಗಿದೆ. ಅಲ್ಲಿ ಜನರಾಗಲಿ ಪ್ರಾಣಿಗಳಾಗಲಿ ವಾಸಿಸುವದಿಲ್ಲ’ ಎಂದು ನೀವು ಹೇಳುತ್ತಿರುವಿರಿ. ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಊರುಗಳಲ್ಲಿ ಈಗ ಮೌನವಿದೆ. ಆದರೆ ಬೇಗನೆ ಅಲ್ಲಿ ಧ್ವನಿಕೇಳಿಸುವುದು.


ಯೆಹೋವನು ಹೀಗೆಂದನು: “ಜೆರುಸಲೇಮ್ ನಗರವನ್ನು ನಾನು ಕೂಡಲೇ ಬಾಬಿಲೋನಿನ ಸೈನ್ಯಕ್ಕೂ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೂ ಒಪ್ಪಿಸುವೆನು. ಸೈನ್ಯವು ಈ ನಗರವನ್ನು ವಶಪಡಿಸಿಕೊಳ್ಳುವುದು.


ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು. ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು. ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.


ಬಾವಿಯಲ್ಲಿ ಹೊಸ ನೀರು ಬರುವಂತೆ ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ. ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ. ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.


ಯೆಹೋವನು ಹೀಗೆ ಹೇಳುತ್ತಾನೆ: “ಇಡೀ ದೇಶವು ಹಾಳಾಗುವುದು. ಆದರೆ ನಾನು ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ.


ಆಗ ನಾನು, “ಒಡೆಯನೇ, ಎಷ್ಟರ ತನಕ ನಾನು ಹೀಗೆ ಮಾಡಬೇಕು?” ಎಂದು ವಿಚಾರಿಸಿದೆನು. ಅದಕ್ಕೆ ಯೆಹೋವನು, “ನಗರಗಳು ನಾಶವಾಗುವ ತನಕ ಹೀಗೆಯೇ ಮಾಡು. ಮನೆಗಳಲ್ಲಿ ಜನರು ಇಲ್ಲದೆ ಹೋಗುವವರೆಗೆ ಹೀಗೆಯೇ ಮಾಡು. ಇಡೀ ದೇಶವು ಹಾಳಾಗಿ ಬೆಂಗಾಡಾಗುವ ತನಕ ಹೀಗೆಯೇ ಮಾಡುತ್ತಿರು” ಎಂದು ಹೇಳಿದನು.


ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು, ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.


ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ. ಲೋಕವೂ ಅದರ ನಿವಾಸಿಗಳೂ ಆತನವೇ.


ಆ ಇಡೀ ಪ್ರದೇಶವು ಒಂದು ಮರುಭೂಮಿಯಾಗುವುದು. ಆ ಜನಾಂಗಗಳೆಲ್ಲ ಎಪ್ಪತ್ತು ವರ್ಷಗಳವರೆಗೆ ಬಾಬಿಲೋನಿನ ರಾಜನ ಗುಲಾಮರಾಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು