ಯೆಹೆಜ್ಕೇಲನು 12:12 - ಪರಿಶುದ್ದ ಬೈಬಲ್12 ನಿಮ್ಮ ನಾಯಕನು ಗೋಡೆಯಲ್ಲಿ ರಂಧ್ರ ಮಾಡಿ ರಾತ್ರಿ ಕಾಲದಲ್ಲಿ ಅದರಲ್ಲಿ ನುಸುಳಿ ಪಾರಾಗುವನು. ಜನರು ತನ್ನನ್ನು ಗುರುತಿಸದಂತೆ ತನ್ನ ಮುಖವನ್ನು ಮುಚ್ಚಿಕೊಳ್ಳುವನು. ಅವನು ಯಾವ ಕಡೆಗೆ ಹೋಗುತ್ತಿದ್ದಾನೆಂದು ಅವನ ಕಣ್ಣುಗಳಿಗೆ ಕಾಣಿಸದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಆಚೆಗೆ ಸಾಗಿಸುವರು; ಅವನು ಮುಖವನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸುವುದಿಲ್ಲ.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು: ಅವನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಅವರಲ್ಲಿನ ಪ್ರಭುವು ಹೆಗಲಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು; ಅವರು ಗೋಡೆಯನ್ನು ತೋಡಿ ಕಂಡಿಯ ಮೂಲಕ ತಮ್ಮ ಸಾಮಾನನ್ನು ಆಚೆಗೆ ಸಾಗಿಸುವರು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂವಿುಯು ಅವನ ಕಣ್ಣಿಗೆ ಕಾಣಿಸದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 “ಅವರ ಮಧ್ಯದಲ್ಲಿರುವ ರಾಜಪುತ್ರನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಮುಸ್ಸಂಜೆಯಲ್ಲಿ ಹೊರಟು ಹೋಗುವನು. ಅವರು ಗೋಡೆಯನ್ನು ಕೊರೆದು, ಆ ಕಿಂಡಿಯ ಮೂಲಕ ತಮ್ಮ ಸಲಕರಣೆಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖವನ್ನು ಮುಚ್ಚಿಕೊಳ್ಳುವನು. ಅಧ್ಯಾಯವನ್ನು ನೋಡಿ |