Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 10:14 - ಪರಿಶುದ್ದ ಬೈಬಲ್‌

14 ಪ್ರತೀ ಕೆರೂಬಿದೂತನಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯದು ಮನುಷ್ಯನ ಮುಖ, ಮೂರನೆಯ ಸಿಂಹದ ಮುಖ ಮತ್ತು ನಾಲ್ಕನೆಯ ಗರುಡನ ಮುಖ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು, ಎರಡನೆಯದು ಮನುಷ್ಯನದು, ಮೂರನೆಯದು ಸಿಂಹದ್ದು, ನಾಲ್ಕನೆಯದು ಗರುಡಪಕ್ಷಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು; ಎರಡನೆಯದು ಮನುಷ್ಯನದು, ಮೂರನೆಯದು ಸಿಂಹನದು, ನಾಲ್ಕನೆಯದು ಗರುಡಪಕ್ಷಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೇದು ಕೆರೂಬಿಯದು, ಎರಡನೇದು ಮನುಷ್ಯನದು, ಮೂರನೇದು ಸಿಂಹನದು, ನಾಲ್ಕನೇದು ಗರುಡಪಕ್ಷಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಒಬ್ಬೊಬ್ಬ ಕೆರೂಬಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯ ಮುಖವು ಮನುಷ್ಯನ ಮುಖ, ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 10:14
7 ತಿಳಿವುಗಳ ಹೋಲಿಕೆ  

ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು.


ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ, ನಾಲ್ಕು ರೆಕ್ಕೆಗಳೂ ಮತ್ತು ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಂತಿದ್ದ ಕೈಗಳೂ ಇದ್ದವು.


ಬಂಡಿಯ ಪಾರ್ಶ್ವಗಳ ಮೇಲೆ ಮತ್ತು ಚೌಕಟ್ಟುಗಳ ಮೇಲೆ ಕೆರೂಬಿಗಳ, ಸಿಂಹಗಳ, ಖರ್ಜೂರ ಗಿಡಗಳ ಚಿತ್ರಗಳನ್ನು ಹಿತ್ತಾಳೆಯಲ್ಲಿ ಕೆತ್ತಿದ್ದರು. ಈ ಚಿತ್ರಗಳನ್ನು ಬಂಡಿಯಲ್ಲಿ ಅವಕಾಶವಿದ್ದ ಭಾಗಗಳಲ್ಲೆಲ್ಲಾ ಕೆತ್ತಿದ್ದರು. ಬಂಡಿಯ ಸುತ್ತಲಿನ ಚೌಕಟ್ಟಿನ ಮೇಲೆ ಹೂಗಳನ್ನು ಕೆತ್ತಿದ್ದರು.


ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು.


ಈ ಚಕ್ರಗಳಿಗೆ “ಚರಕ ಚಕ್ರ” ಎಂಬುದಾಗಿ ಕರೆಯುತ್ತಾರೆಂದು ನನಗೆ ಕೇಳಿಸಿತು.


ಒಂದು ಮುಖ ಮನುಷ್ಯನ ಮುಖದಂತಿದ್ದು ಖರ್ಜೂರ ವೃಕ್ಷವನ್ನು ದಿಟ್ಟಿಸುತ್ತಿತ್ತು. ಇನ್ನೊಂದು ಮುಖವು ಸಿಂಹದ ಮುಖದಂತಿದ್ದು ಆಚೆ ಪಕ್ಕದ ಖರ್ಜೂರ ವೃಕ್ಷವನ್ನು ನೋಡುವಂತಿತ್ತು. ಆಲಯದ ಸುತ್ತಲೂ ಈ ರೀತಿಯ ಕೆತ್ತನೆ ಕೆಲಸವಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು