ಯೆಶಾಯ 7:12 - ಪರಿಶುದ್ದ ಬೈಬಲ್12 ಅದಕ್ಕೆ ಆಹಾಜನು, “ಇದು ಸತ್ಯವೆಂಬುದಕ್ಕೆ ನಾನು ಯಾವ ಗುರುತನ್ನೂ ಕೇಳಲಾರೆ. ನಾನು ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆಗ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ, ಇಲ್ಲವೆ ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಅದಕ್ಕೆ ಆಹಾಜನು, “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆಗ ಆಹಾಜನು, ನಾನು ಕೇಳಿಕೊಳ್ಳುವದೇ ಇಲ್ಲ. ಯೆಹೋವನನ್ನು ಪರೀಕ್ಷಿಸುವದಿಲ್ಲ ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಆದರೆ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ; ಯೆಹೋವ ದೇವರನ್ನು ಪರೀಕ್ಷಿಸುವುದೂ ಇಲ್ಲ” ಎಂದನು. ಅಧ್ಯಾಯವನ್ನು ನೋಡಿ |
ಅಹಾಜನು ಯಾಜಕನಾದ ಊರೀಯನಿಗೆ, “ಈ ದೇಶದ ಜನರೆಲ್ಲರೂ ಪ್ರಾತಃಕಾಲದಲ್ಲಿ ಸರ್ವಾಂಗಹೋಮವನ್ನೂ ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ ಮತ್ತು ಪಾನದ್ರವ್ಯಗಳನ್ನೂ ಸಮರ್ಪಿಸಲು ಮಹಾವೇದಿಕೆಯನ್ನು ಬಳಸಬೇಕು; ಸರ್ವಾಂಗಹೋಮಕ್ಕಾಗಿ ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸುವ ಪಶುಗಳ ರಕ್ತವನ್ನು ಈ ಮಹಾವೇದಿಕೆಯ ಮೇಲೆ ಚಿಮುಕಿಸಿ. ಆದರೆ ನಾನು ದೇವರಿಂದ ದೈವೋತ್ತರಗಳನ್ನು ಕೇಳಲು ತಾಮ್ರವೇದಿಕೆಯನ್ನು ಉಪಯೋಗಿಸುತ್ತೇನೆ” ಎಂದು ಹೇಳಿದನು.