ಆಗ ಯೆಹೋವನು ಹಿಜ್ಕೀಯನಿಗೆ, “ಈ ಮಾತುಗಳೆಲ್ಲಾ ಸತ್ಯವೆಂಬುದಕ್ಕೆ ನಿನಗೊಂದು ಗುರುತನ್ನು ಕೊಡುತ್ತೇನೆ. ಬೀಜ ಬಿತ್ತಲು ನಿನಗೆ ಸಾಧ್ಯವಿರಲಿಲ್ಲ. ಆದ್ದರಿಂದ ಈ ವರ್ಷದಲ್ಲಿ ಕೂಳೆಬೆಳೆಯನ್ನೂ ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ನೀನು ಊಟಮಾಡುವೆ. ಆದರೆ ಮೂರನೆಯ ವರ್ಷದಲ್ಲಿ ನೀನೇ ಬಿತ್ತಿದ ಬೀಜದಲ್ಲಿ ಬೆಳೆದ ಬೆಳೆಯನ್ನು ಊಟಮಾಡುವೆ. ಆ ಬೆಳೆಯಿಂದ ನಿನಗೆ ಬೇಕಾದಷ್ಟು ಆಹಾರ ಸಂಗ್ರಹವಾಗುವದು. ನೀನು ದ್ರಾಕ್ಷಾಲತೆಗಳನ್ನು ನೆಟ್ಟು ಅದರ ಫಲಗಳನ್ನು ತಿನ್ನುವೆ.