Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 66:3 - ಪರಿಶುದ್ದ ಬೈಬಲ್‌

3 ಕೆಲವರು ಒಂದು ಕಡೆಯಲ್ಲಿ ಹೋರಿಯನ್ನು ಯಜ್ಞಮಾಡುವರು. ಇನ್ನೊಂದು ಕಡೆಯಲ್ಲಿ ಜನರಿಗೆ ಹಿಂಸೆ ಕೊಡುವರು. ಅವರು ಬಲಿಯರ್ಪಿಸಲು ಕುರಿಗಳನ್ನು ಕೊಯ್ಯುವರು, ಅದೇ ಸಮಯದಲ್ಲಿ ನಾಯಿಗಳ ಕುತ್ತಿಗೆಗಳನ್ನು ಮುರಿಯುವರು. ಅವರು ನನಗೆ ಹಂದಿಗಳ ರಕ್ತವನ್ನು ಅರ್ಪಿಸುವರು. ನನಗೆ ಧೂಪವನ್ನು ಹಾಕಲು ಯಾವಾಗಲೂ ತಯಾರಿರುವರು. ಅದೇ ಸಮಯದಲ್ಲಿ ಅಯೋಗ್ಯವಾದ ತಮ್ಮ ವಿಗ್ರಹಗಳನ್ನು ಪ್ರೀತಿಸುವರು. ಅವರು ನನ್ನ ಮಾರ್ಗವನ್ನು ಅನುಸರಿಸದೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಅವರು ತಮ್ಮ ಭಯಂಕರವಾದ ವಿಗ್ರಹಗಳನ್ನು ಪೂಜಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 “ಜನರು ಮನಬಂದ ಮಾರ್ಗವನ್ನು ಅನುಸರಿಸುತ್ತಾರೆ; ತಮ್ಮ ಅಸಹ್ಯಕಾರ್ಯಗಳಲ್ಲಿ ಅತ್ಯಾನಂದಪಡುತ್ತಾರೆ. ಹೋರಿಯನ್ನು ಬಲಿಕೊಡುವವನು ನರಬಲಿಯನ್ನು ಕೊಡುತ್ತಾನೆ; ಕುರಿ ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ. ಕಾಣಿಕೆ ಒಪ್ಪಿಸುವವನು ಹಂದಿಯ ನೆತ್ತರನ್ನು ಅರ್ಪಿಸುತ್ತಾನೆ; ಧೂಪಾರತಿ ಎತ್ತುವವನು ವಿಗ್ರಹಾರಾಧನೆಯನ್ನು ಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡುವವನ ಹಾಗಿದ್ದಾನೆ. ಕುರಿಮರಿಯನ್ನು ಬಲಿ ಕೊಡುವವನು, ನಾಯಿಯ ಕುತ್ತಿಗೆಯನ್ನು ಕಡಿಯುವವನ ಹಾಗಿದ್ದಾನೆ. ಕಾಣಿಕೆಯನ್ನು ಅರ್ಪಿಸುವವನು, ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಹಾಕುವವನು, ವಿಗ್ರಹವನ್ನು ಪೂಜಿಸುವವನ ಹಾಗಿದ್ದಾನೆ. ಹೀಗೆ, ಅವರು ಸ್ವಂತ ಮಾರ್ಗಗಳನ್ನು ಆಯ್ದುಕೊಂಡಿದ್ದಾರೆ. ಅವರ ಪ್ರಾಣವು ಅವರ ಅಸಹ್ಯಗಳಲ್ಲಿ ಹರ್ಷಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 66:3
19 ತಿಳಿವುಗಳ ಹೋಲಿಕೆ  

ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.


ಅವರು ತಮ್ಮ ವಿಶೇಷವಾದ ತೋಟದೊಳಗೆ ಪೂಜೆಮಾಡಲು ತಮ್ಮನ್ನು ಶುದ್ಧಮಾಡಿಕೊಳ್ಳುವಂತೆ ಸ್ನಾನಮಾಡುವರು. ತಮ್ಮ ವಿಶೇಷ ತೋಟದೊಳಗೆ ಹೋಗಲು ಒಬ್ಬರನ್ನೊಬ್ಬನು ಹಿಂಬಾಲಿಸುವರು. ಅಲ್ಲಿ ಅವರ ವಿಗ್ರಹಗಳನ್ನು ಪೂಜಿಸುವರು. ಆದರೆ ಯೆಹೋವನು ಅವರೆಲ್ಲರನ್ನು ನಾಶಮಾಡುವನು. “ಆ ಜನರು ಹಂದಿ, ಇಲಿ ಮತ್ತು ಇತರ ಅಶುದ್ಧ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಆದರೆ ಅವರೆಲ್ಲರೂ ಒಟ್ಟಾಗಿ ನಾಶವಾಗುವರು.” ಇದು ಯೆಹೋವನು ಹೇಳಿದ ಮಾತುಗಳು.


ಆದರೆ ನಿಮ್ಮ ಭವಿಷ್ಯವನ್ನು ನಾನು ತೀರ್ಮಾನಿಸುವೆನು. ನೀವು ಖಡ್ಗದಿಂದ ಸಾಯುವಿರಿ ಎಂದು ನಾನು ತೀರ್ಮಾನಿಸಿದ್ದೇನೆ. ನೀವೆಲ್ಲರೂ ಕೊಲ್ಲಲ್ಪಡುವಿರಿ. ಯಾಕೆಂದರೆ ನಾನು ನಿಮ್ಮನ್ನು ಕರೆದಾಗ ನೀವು ಉತ್ತರ ಕೊಡಲಿಲ್ಲ. ನಾನು ಮಾತನಾಡಿದಾಗ ನೀವು ಆಲಿಸಲಿಲ್ಲ. ನಾನು ಕೆಟ್ಟದ್ದೆಂದು ಹೇಳಿದವುಗಳನ್ನು ನೀವು ಮಾಡಿದಿರಿ; ನನಗೆ ಇಷ್ಟವಿಲ್ಲದ್ದನ್ನು ನೀವು ಮಾಡುತ್ತಿರುವಿರಿ.”


ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.


ಕೆಡುಕನ ಯಜ್ಞಗಳು ಯೆಹೋವನಿಗೆ ಅಸಹ್ಯ. ಯಾಕೆಂದರೆ ಅವು ದುರುದ್ದೇಶದಿಂದ ಕೂಡಿವೆ.


ಸೂಳೆತನದಿಂದ ಗಳಿಸಿದ ಹಣವನ್ನು ನಿಮ್ಮ ದೇವರಾದ ಯೆಹೋವನ ವಿಶೇಷ ವಾಸಸ್ಥಾನಕ್ಕೆ ತೆಗೆದುಕೊಂಡು ಬರಬಾರದು. ಒಬ್ಬನು ತಾನು ಹೊತ್ತುಕೊಂಡ ಹರಕೆಯನ್ನು ಆ ಹಣದಿಂದ ಪೂರೈಸಕೂಡದು. ಯಾಕೆಂದರೆ ಲೈಂಗಿಕ ಪಾಪದಲ್ಲಿ ತಮ್ಮ ದೇಹಗಳನ್ನು ಮಾರುವವರನ್ನು ನಿಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ; ಲೈಂಗಿಕ ಪಾಪಗಳ ಆದಾಯದಿಂದ ಬಂದ ಹಣದಿಂದ ಖರೀದಿ ಮಾಡಿದ ಕಾಣಿಕೆಗಳನ್ನು ಆತನು ದ್ವೇಷಿಸುತ್ತಾನೆ.


ನೀವು ಹಂದಿಗಳನ್ನು ತಿನ್ನಬಾರದು. ಅವುಗಳ ಗೊರಸುಗಳು ಸೀಳಿವೆ; ಆದರೆ ಅವುಗಳು ಮೆಲುಕು ಹಾಕುವುದಿಲ್ಲ. ಆದ್ದರಿಂದ ಹಂದಿಯು ನಿಮಗೆ ಶುದ್ಧ ಆಹಾರವಾಗುವುದಿಲ್ಲ; ಹಂದಿಯ ಹೆಣವನ್ನೂ ನೀವು ಮುಟ್ಟಬಾರದು.


ನೀವು ಆ ದೇವರುಗಳನ್ನು ಪೂಜಿಸಲು ಇಷ್ಟಪಡುತ್ತೀರಿ. ಆದ್ದರಿಂದ ಹೋಗಿ ಅವರನ್ನೇ ಸಹಾಯಕ್ಕಾಗಿ ಮೊರೆಯಿಡಿ. ನೀವು ಕಷ್ಟದಲ್ಲಿರುವಾಗ ಆ ದೇವರುಗಳೇ ನಿಮ್ಮನ್ನು ರಕ್ಷಿಸಲಿ” ಎಂದು ಉತ್ತರಿಸಿದನು.


ಈ ಜನರು ದುಷ್ಕೃತ್ಯಗಳನ್ನು ನಡಿಸಿ ನನಗೆ ಕೋಪವನ್ನೆಬ್ಬಿಸಿದರು. ಆದ್ದರಿಂದ ನಾನು ಇಸ್ರೇಲನ್ನು ಶಿಕ್ಷಿಸಿದೆನು. ನಾನು ಕೋಪಗೊಂಡು ಅವರಿಗೆ ವಿಮುಖನಾದೆನು. ಇಸ್ರೇಲ್ ನನ್ನನ್ನು ತೊರೆದು ತನಗಿಷ್ಟವಾದ ಸ್ಥಳಕ್ಕೆ ಹೋದನು.


ಅವರು ಹೊಸ ದೇವರುಗಳನ್ನು ಆರಿಸಿಕೊಂಡರು; ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು. ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ.


“ನಾನು ಆ ಮರದ ತುಂಡುಗಳನ್ನು ಬೆಂಕಿಯಲ್ಲಿ ಉರಿಸಿ ಚಳಿಕಾಯಿಸಿಕೊಂಡೆನು; ಅದರ ಕೆಂಡದಲ್ಲಿ ರೊಟ್ಟಿ ಸುಟ್ಟೆನು; ಮಾಂಸ ಬೇಯಿಸಿದೆನು; ಆ ಮಾಂಸವನ್ನು ತಿಂದೆನು; ಉಳಿದ ಮರದ ತುಂಡಿನಿಂದ ಅಸಹ್ಯವಾದ ಈ ವಿಗ್ರಹವನ್ನು ಮಾಡಿದೆನು; ನಾನು ಮರದ ತುಂಡನ್ನು ಪೂಜಿಸುತ್ತೇನೆ” ಎಂದು ಅವರೆಂದೂ ಯೋಚಿಸುವದಿಲ್ಲ.


“ನನಗೆ ವಿರುದ್ಧವಾಗಿ ಎದ್ದವರನ್ನು ಸ್ವೀಕರಿಸಲು ನಾನು ದಿನವೆಲ್ಲಾ ಸಿದ್ಧನಾಗಿ ನಿಂತೆನು. ಅವರು ನನ್ನ ಬಳಿಗೆ ಬರುತ್ತಾರೆಂದು ಕಾಯುತ್ತಾ ನಿಂತುಕೊಂಡೆನು. ಆದರೆ ಅವರು ಕೆಟ್ಟಜೀವಿತದಲ್ಲಿಯೇ ಮುಂದುವರಿದರು. ಅವರು ತಮಗೆ ಇಷ್ಟಬಂದ ಹಾಗೆ ನಡೆದರು.


ಯೆಹೋವನು ಹೇಳುವುದೇನೆಂದರೆ, “ನೀವು ನನ್ನ ಸಲುವಾಗಿ ಶೆಬ ದೇಶದಿಂದ ಧೂಪವನ್ನು ಏಕೆ ತರುವಿರಿ? ನೀವು ದೂರದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವದರಿಂದ ಪ್ರಯೋಜನವೇನು? ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ. ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”


ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬನೂ ತನಗೆ ಸರಿತೋರಿದಂತೆ ಮಾಡುತ್ತಿದ್ದನು.


ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲಾಡಿದೆವು. ನಮ್ಮ ಸ್ವಂತ ದಾರಿಯಲ್ಲಿ ನಾವು ಹೋದೆವು. ನಮ್ಮ ಅಪರಾಧಗಳಿಂದ ನಾವು ವಿಮುಕ್ತರಾಗುವಂತೆ ಯೆಹೋವನು ನಮ್ಮ ಅಪರಾಧಗಳನ್ನು ಆತನ ಮೇಲೆ ಹಾಕಿದನು.


ಆಗ ಹಗ್ಗಾಯನು, “ನಿಮ್ಮ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ಜನಾಂಗದ ಜನರ ವಿಷಯದಲ್ಲಿಯೂ ಅದು ಸತ್ಯವಾಗಿದೆ. ಅವರು ನನ್ನ ಮುಂದೆ ಪವಿತ್ರರಲ್ಲ. ಆದ್ದರಿಂದ ಅವರು ಯಾವ ವಸ್ತುವನ್ನಾದರೂ ಮುಟ್ಟಿದರೆ ಅದು ಅಶುದ್ಧವಾಗುವುದು ಮತ್ತು ಅವರು ಯಜ್ಞವೇದಿಕೆಯ ಮೇಲೆ ಅರ್ಪಿಸುವುದೆಲ್ಲಾ ಅಶುದ್ಧವಾಗಿರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು