ಯೆಶಾಯ 63:6 - ಪರಿಶುದ್ದ ಬೈಬಲ್6 ನಾನು ಕೋಪಗೊಂಡಾಗ ಜನಾಂಗಗಳ ಮೇಲೆ ತುಳಿದಾಡಿದೆನು. ನಾನು ಸಿಟ್ಟುಗೊಂಡಾಗ ಅವರನ್ನು ಶಿಕ್ಷಿಸಿದೆನು. ಅವರ ರಕ್ತವನ್ನು ನೆಲದ ಮೇಲೆ ಚೆಲ್ಲಿದೆನು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ, ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ರಾಷ್ಟ್ರಗಳನು ತುಳಿದೆ ಕುಪಿತನಾಗಿ ಅವುಗಳನು ನುಚ್ಚುನೂರುಮಾಡಿದೆ ರೋಷಾವಿಷ್ಟನಾಗಿ ಅವುಗಳ ರಕ್ತವನು ನೆಲದಲಿ ಹರಿಸಿದೆ ಪ್ರವಾಹವಾಗಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.” ಅಧ್ಯಾಯವನ್ನು ನೋಡಿ |
ಯೆಹೋವನು ಹೀಗೆ ಹೇಳುತ್ತಾನೆ: “ನನ್ನನ್ನು ಕಾದುಕೊಂಡಿರಿ. ನೀವು ನನ್ನ ನ್ಯಾಯತೀರ್ಪಿನ ತನಕ ಕಾದುಕೊಂಡಿರಿ. ನಾನು ಬೇರೆ ಜನಾಂಗಗಳನ್ನು ಇಲ್ಲಿಗೆ ಕರೆದು ನಿಮ್ಮನ್ನು ಶಿಕ್ಷಿಸುವಂತೆ ಮಾಡುವ ಹಕ್ಕು ನನಗಿದೆ. ನಿಮ್ಮ ಮೇಲೆ ನನಗಿರುವ ಸಿಟ್ಟು ತೋರಿಸಲು ನಾನು ಆ ಜನಾಂಗಗಳನ್ನು ಉಪಯೋಗಿಸುವೆನು. ನಿಮ್ಮ ಮೇಲೆ ನಾನು ಎಷ್ಟರಮಟ್ಟಿಗೆ ಕೋಪಗೊಂಡಿದ್ದೇನೆ ಎಂದು ಅವರ ಮೂಲಕ ನಿಮಗೆ ತಿಳಿದುಬರುವುದು. ಆಗ ಇಡೀ ದೇಶವೇ ನಾಶವಾಗುವುದು.