Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 62:12 - ಪರಿಶುದ್ದ ಬೈಬಲ್‌

12 ಆತನ ಜನರು “ಪವಿತ್ರಜನ”ರೆಂದೂ, “ಯೆಹೋವನಿಂದ ರಕ್ಷಿಸಲ್ಪಟ್ಟವ”ರೆಂದೂ ಕರೆಯಲ್ಪಡುವರು. ಜೆರುಸಲೇಮ್, “ದೇವರಿಗೆ ಬೇಕಾದ ಪಟ್ಟಣ”ವೆಂದೂ, “ದೇವರಿರುವ ಪಟ್ಟಣ”ವೆಂದೂ ಕರೆಯಲ್ಪಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಿನ್ನ ಜನರು, “ಪರಿಶುದ್ಧಜನರು, ಯೆಹೋವನು ವಿಮೋಚಿಸಿದವರು” ಎಂದು ಅನ್ನಿಸಿಕೊಳ್ಳುವರು, ನಿನಗೋ, “ಪತಿಯು ವರಿಸಿ, ತ್ಯಜಿಸದ ಪಟ್ಟಣ” ಎಂದು ಹೆಸರು ಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ‘ಪವಿತ್ರ ಪ್ರಜೆ’ ಎನಿಸಿಕೊಳ್ಳುವುದು ನಿಮ್ಮ ಜನತೆ ‘ಸರ್ವೇಶ್ವರ ಸ್ವಾಮಿಯೇ ಉದ್ಧರಿಸಿದ ಜನತೆ’. ನಿನ್ನ ಹೆಸರೋ, ‘ಪ್ರಾಪ್ತ ನಗರಿ’ ಪತಿ ವರಿಸಿ ಕೈ ಬಿಡದ ಪುರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಿನ್ನ ಜನರು ಪರಿಶುದ್ಧಜನರು, ಯೆಹೋವನು ವಿಮೋಚಿಸಿದವರು ಎಂದು ಅನ್ನಿಸಿಕೊಳ್ಳುವರು, ನಿನಗೋ ಪತಿಯು ವರಿಸಿ ತ್ಯಜಿಸದ ಪುರಿ ಎಂದು ಹೆಸರು ಬರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಗ ಅವರು, ಪರಿಶುದ್ಧ ಜನರೂ, ಯೆಹೋವ ದೇವರು ವಿಮೋಚಿಸಿದವರೂ ಎಂದು ಎನಿಸಿಕೊಳ್ಳುವರು ನಿನಗೆ ಹುಡುಕಿದ ಹಾಗೂ ಕೈ ಬಿಡದ ಪಟ್ಟಣ, ಎಂದು ಹೆಸರು ಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 62:12
30 ತಿಳಿವುಗಳ ಹೋಲಿಕೆ  

ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.


ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ. “ದೇವರ ಪ್ರಿಯ ಜನರು” ಎಂದು ನೀನು ಕರೆಯಲ್ಪಡುವಿ. ನಿನ್ನ ದೇಶವು “ದೇವರ ಮದಲಗಿತ್ತಿ” ಎಂದು ಕರೆಯಲ್ಪಡುವದು. ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ; ನಿನ್ನ ದೇಶವು ಆತನಿಗೆ ಸೇರಿದೆ.


ಎಲ್ಲಾ ಜನಾಂಗಗಳಿಗಿಂತ ನಿಮ್ಮನ್ನು ಬಲಿಷ್ಠರಾದ ಜನಾಂಗವನ್ನಾಗಿ ಮಾಡುವನು. ದೇವರು ನಿಮಗೆ ಜನರಿಂದ ಹೊಗಳಿಕೆಯನ್ನು, ಪ್ರಖ್ಯಾತಿಯನ್ನು ಮತ್ತು ಗೌರವವನ್ನು ಬರಮಾಡುವನು; ಆತನು ವಾಗ್ದಾನ ಮಾಡಿದಂತೆಯೇ ನೀವು ಪವಿತ್ರ ಜನರಾಗುವಿರಿ.”


ಆ ಮಾರ್ಗದಲ್ಲಿ ಅಪಾಯವಿರುವದಿಲ್ಲ. ಜನರಿಗೆ ಹಾನಿಮಾಡಲು ಸಿಂಹಗಳಾಗಲಿ ಕ್ರೂರಜಂತುಗಳಾಗಲಿ ಆ ಮಾರ್ಗದಲ್ಲಿರುವದಿಲ್ಲ. ದೇವರು ರಕ್ಷಿಸುವ ಜನರಿಗೆ ಮಾತ್ರವೇ ಆ ಮಾರ್ಗವಿರುವುದು.


ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ತನ್ನ ವಾಗ್ದಾನಕ್ಕನುಸಾರವಾಗಿ ವಿಶೇಷವಾದ ಸ್ವಕೀಯ ಪ್ರಜೆಗಳನ್ನಾಗಿ ಮಾಡುವನು.


ಯಾಕೆಂದರೆ ನೀವು ಯೆಹೋವನ ಪ್ರಜೆಗಳಾಗಿದ್ದೀರಿ. ಭೂಲೋಕದಲ್ಲಿರುವ ಎಲ್ಲಾ ಜನಾಂಗಗಳಿಂದ ಆತನು ನಿಮ್ಮನ್ನು ಆರಿಸಿಕೊಂಡಿದ್ದಾನೆ. ನೀವು ಆತನ ಸ್ವಕೀಯ ಪ್ರಜೆಯಾಗಿದ್ದೀರಿ.


ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ: “ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ. ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ.”


ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ನೀನೇ ಪೇತ್ರ. ನಾನು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಬಲವು ನನ್ನ ಸಭೆಯನ್ನು ಸೋಲಿಸಲಾರದು.


ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು. ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು. ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು. ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು. ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು. ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.


ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ. ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.


ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು.


ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ.


ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.


ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.


ಯೆಹೋವನು ಹೇಳುವುದೇನೆಂದರೆ, “ನನ್ನ ಆಲೋಚನೆಯನ್ನು ಕೇಳಲು ಬಾರದೆ ಹೋದ ಜನರಿಗೂ ನಾನು ಸಹಾಯ ಮಾಡಿದೆನು. ನನ್ನನ್ನು ಹುಡುಕದವರಿಗೂ ಸಿಕ್ಕಿದೆನು. ನನ್ನ ಹೆಸರನ್ನು ಧರಿಸದ ಜನಾಂಗದೊಡನೆ ನಾನು ಮಾತನಾಡಿದೆನು. ಅವರಿಗೆ, ‘ನಾನಿಲ್ಲಿದ್ದೇನೆ! ನಾನಿಲ್ಲಿದ್ದೇನೆ!’ ಅಂದೆನು.


ಅವರೆಲ್ಲರೂ ಕುರಿಮರಿಗೋಸ್ಕರ ಒಂದು ಹೊಸ ಹಾಡನ್ನು ಹಾಡಿದರು: “ನೀನು ಕೊಲ್ಲಲ್ಪಟ್ಟವನಾದ್ದರಿಂದ, ಸುರುಳಿಯನ್ನು ತೆಗೆದುಕೊಂಡು, ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ. ನೀನು ನಿನ್ನ ರಕ್ತದಿಂದ (ಮರಣದಿಂದ) ಸಕಲ ಕುಲ, ಭಾಷೆ, ಜನಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.


“ನಿನ್ನ ಜನರೆಲ್ಲಾ ನೀತಿಯಲ್ಲಿ ಜೀವಿಸುವರು. ಅವರು ಭೂಮಿಗೆ ಶಾಶ್ವತವಾದ ಬಾಧ್ಯಸ್ತರಾಗುವರು. ಆ ಜನರನ್ನು ನಾನೇ ನಿರ್ಮಿಸಿದೆನು. ನಾನು ನನ್ನ ಸ್ವಂತ ಕೈಗಳಿಂದ ನಿರ್ಮಿಸಿದ ಆಶ್ಚರ್ಯಕರವಾದ ಸಸಿಗಳಂತೆ ಅವರಿರುವರು.


ನೀವು ಯಾಜಕರ ರಾಜ್ಯ’ ಎಂಬ ವಿಶೇಷವಾದ ಜನಾಂಗವಾಗುವಿರಿ. ಮೋಶೆಯೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ನೀನು ಇಸ್ರೇಲರಿಗೆ ಹೇಳಲೇಬೇಕು” ಎಂದನು.


ದೇವರು ಒಳ್ಳೆಯವನು; ನ್ಯಾಯವನ್ನೇ ಮಾಡುವವನು; ಆತನು ಚೀಯೋನನ್ನೂ ತನ್ನ ಬಳಿಗೆ ಬರುವ ಜನರನ್ನೂ ರಕ್ಷಿಸಿ ಕಾಪಾಡುವನು.


ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲೆಸುವರು.


“ಬಡಜನರು ನೀರಿಗಾಗಿ ಹುಡುಕಾಡುವರು. ಆದರೆ ನೀರು ಅವರಿಗೆ ದೊರಕುವದಿಲ್ಲ. ಅವರು ದಾಹಗೊಂಡಿದ್ದಾರೆ, ಅವರ ನಾಲಿಗೆ ಒಣಗಿಹೋಗಿದೆ. ನಾನು ಅವರ ಮೊರೆಯನ್ನು ಕೇಳುವೆನು. ನಾನು ಅವರನ್ನು ತೊರೆಯುವುದಿಲ್ಲ, ಅವರನ್ನು ಸಾಯಲು ಬಿಡುವುದಿಲ್ಲ.


ನೀನು ಸಮುದ್ರವನ್ನು ಬತ್ತಿಸಿರುವೆ. ಮಹಾ ಆಳದ ಗುಂಡಿಗಳ ನೀರನ್ನು ನೀನು ಬತ್ತಿಸಿರುವೆ. ಅತ್ಯಂತ ಆಳವಾದ ಸಮುದ್ರದ ತಳವನ್ನು ನೀನು ರಸ್ತೆಯನ್ನಾಗಿ ಮಾಡಿರುವೆ. ನಿನ್ನ ಜನರು ಆ ರಸ್ತೆಯಲ್ಲಿ ಸಮುದ್ರವನ್ನು ದಾಟಿ ರಕ್ಷಿಸಲ್ಪಟ್ಟರು.


ಯೆಹೋವನು ಹೇಳುವುದೇನೆಂದರೆ: “ನಾನು ನಿನ್ನನ್ನು ಮಾರಿದ್ದು ಹಣಕ್ಕಾಗಿಯಲ್ಲ; ಆದ್ದರಿಂದ ನಾನು ನಿನ್ನನ್ನು ಹಣ ಕೊಡದೆ ಬಿಡುಗಡೆ ಮಾಡುವೆನು.”


ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು. ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು. ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು; ಯೆಹೋವನು ತಾನೇ ಆ ಹೆಸರನ್ನು ಕೊಡುವನು.


ಆ ಸಮಯದಲ್ಲಿ ಅಲ್ಲಿ ಮಾರ್ಗವಿರುವದು. ಆ ಹೆದ್ದಾರಿಯು “ಪರಿಶುದ್ಧ” ಮಾರ್ಗವೆಂದು ಕರೆಯಲ್ಪಡುವದು. ದುಷ್ಟಜನರಿಗೆ ಆ ಮಾರ್ಗದಲ್ಲಿ ನಡೆಯಲು ಅನುಮತಿ ಇರುವದಿಲ್ಲ. ಮೂರ್ಖರು ಆ ಮಾರ್ಗದಲ್ಲಿ ನಡೆಯರು. ಆ ಮಾರ್ಗದಲ್ಲಿ ಒಳ್ಳೆಯ ಜನರು ಮಾತ್ರ ನಡೆಯುವರು.


ನಿನ್ನ ಪವಿತ್ರ ಜನರು ತಮ್ಮ ದೇಶದಲ್ಲಿ ಸ್ವಲ್ಪಕಾಲಕ್ಕೆ ಮಾತ್ರ ವಾಸಿಸಿದರು. ಆಗ ನಮ್ಮ ಶತ್ರುಗಳು ಬಂದು ನಿನ್ನ ಪವಿತ್ರ ಆಲಯದಲ್ಲಿ ತುಳಿದಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು