ಯೆಶಾಯ 61:4 - ಪರಿಶುದ್ದ ಬೈಬಲ್4 ಆ ಸಮಯದಲ್ಲಿ ಹಾಳುಬಿದ್ದ ಹಳೇ ಪಟ್ಟಣಗಳು ಮತ್ತೆ ಕಟ್ಟಲ್ಪಡುವವು. ಅವುಗಳು ಮುಂಚೆ ಹೇಗಿದ್ದವೋ ಹಾಗೆಯೇ ಹೊಸದಾಗಿ ಕಾಣಿಸುವವು. ಹಲವು ವರ್ಷಗಳ ಕಾಲ ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳು ಹೊಸದಾಗಿ ಕಾಣಿಸುವವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರುಗಿ ಕಟ್ಟುವರು, ಪೂರ್ವದಲ್ಲಿ ಹಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳಾದ ಪಟ್ಟಣಗಳನ್ನು ಜೀರ್ಣೋದ್ಧಾರ ಮಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಮರಳಿ ಕಟ್ಟುವರಿವರು ಪಾಳುಬಿದ್ದ ಪುರಾತನ ಮನೆಗಳನು ಮತ್ತೆ ಎಬ್ಬಿಸುವರು ಬಿದ್ದ ಹಳೆಯ ಕಟ್ಟಡಗಳನು ನೂತನಗೊಳಿಸುವರು ತಲಾಂತರದ ಹಾಳುಬೀಳು ಪಟ್ಟಣಗಳನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಪುರಾತನ ಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು, ಪೂರ್ವದಲ್ಲಿ ಪಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳುಬೀಳಾದ ಪಟ್ಟಣಗಳನ್ನು ಜೀರ್ಣೋದ್ಧಾರಮಾಡುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ, ಮುಂಚೆ ಹಾಳುಬಿದ್ದವುಗಳನ್ನು ಎಬ್ಬಿಸುವರು. ಅನೇಕ ತಲಾಂತರಗಳಿಂದ ಹಾಳಾದ ಪಟ್ಟಣಗಳನ್ನೂ, ನೂತನ ಪಡಿಸುವರು. ಅಧ್ಯಾಯವನ್ನು ನೋಡಿ |
ಹೌದು, ನಾವು ಗುಲಾಮರಾಗಿದ್ದೆವು. ಆದರೆ ಸದಾಕಾಲ ಗುಲಾಮರಾಗಲು ನೀನು ನಮ್ಮನ್ನು ಬಿಡಲಿಲ್ಲ. ನಮ್ಮ ಮೇಲೆ ನೀನು ದಯೆ ತೋರಿಸಿರುವೆ. ಪರ್ಶಿಯ ರಾಜರು ನಮಗೆ ಕರುಣೆತೋರುವಂತೆ ಮಾಡಿದೆ. ನಿನ್ನ ಆಲಯವು ಹಾಳಾಗಿತ್ತು. ನಿನ್ನ ಆ ಆಲಯವನ್ನು ಮತ್ತೆ ಹೊಸದಾಗಿ ಕಟ್ಟಲು ನೀನು ನಮಗೆ ಹೊಸ ಜೀವವನ್ನು ಕೊಟ್ಟಿರುವೆ. ದೇವರೇ, ಯೆಹೂದ ಮತ್ತು ಜೆರುಸಲೇಮ್‌ಗಳ ಸಂರಕ್ಷಣೆಗಾಗಿ ಗೋಡೆಯನ್ನು ಕಟ್ಟಲು ನೀನು ನಮಗೆ ಸಹಾಯಮಾಡಿದೆ.