ಯೆಶಾಯ 60:7 - ಪರಿಶುದ್ದ ಬೈಬಲ್7 ಜನರು ಕೇದಾರಿನ ಎಲ್ಲಾ ಕುರಿಗಳನ್ನು ಒಟ್ಟುಗೂಡಿಸಿ ನಿನಗೆ ಕೊಡುವರು. ನೆಬಾಯೋತಿನಿಂದ ಟಗರುಗಳನ್ನು ನಿನಗೆ ತರುವರು. ನೀನು ನಿನ್ನ ವೇದಿಕೆಯ ಮೇಲೆ ಅವುಗಳನ್ನು ಯಜ್ಞಮಾಡುವೆ. ಆಗ ನಾನು ಸ್ವೀಕರಿಸುವೆನು. ನನ್ನ ಸುಂದರವಾದ ಆಲಯವನ್ನು ಇನ್ನೂ ಸೌಂದರ್ಯಗೊಳಿಸುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ನಿನ್ನಲ್ಲಿ ಕೂಡುವುವು ಕೇದಾರಿನ ಸಕಲ ಮಂದೆಗಳು ಬಲಿಯರ್ಪಣೆಗೊದಗುವುವು ನೆಬಾಯೋತಿನ ಟಗರುಗಳು. ಏರುವುವು ನನಗೆ ಸಮರ್ಪಕವಾದ ಹೋಮವಾಗಿ ಬಲಿಪೀಠವನು. ಚಂದಗೊಳಿಸುವೆನು ನನ್ನ ಸುಂದರವಾದ ಆಲಯವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸಿ ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ನನ್ನ ಸುಂದರಾಲಯವನ್ನು ಚಂದಗೊಳಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಕೇದಾರಿನ ಮಂದೆಗಳೆಲ್ಲಾ ನಿನ್ನಲ್ಲಿ ಸೇರಿಬರುವುವು. ನೆಬಾಯೋತಿನ ಟಗರುಗಳು ನಿನ್ನನ್ನು ಸೇವಿಸುವುವು. ನನ್ನ ಬಲಿಪೀಠದ ಮೇಲೆ ಮೆಚ್ಚಿಕೆಯಿಂದ ಏರುವುವು. ನನ್ನ ಮಹಿಮೆಯ ಆಲಯವನ್ನು ಘನಪಡಿಸುವೆನು. ಅಧ್ಯಾಯವನ್ನು ನೋಡಿ |
ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡುವುದಕ್ಕಾಗಿ ದೇವರು ನನ್ನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡನು. ದೇವರ ಸುವಾರ್ತೆಯನ್ನು ಉಪದೇಶಿಸುವುದರ ಮೂಲಕ ನಾನು ಆತನ ಸೇವೆ ಮಾಡುವವನಾಗಿದ್ದೇನೆ. ಯೆಹೂದ್ಯರಲ್ಲದ ಜನರು ಸಹ ದೇವರು ಸ್ವೀಕರಿಸಿಕೊಳ್ಳುವ ಕಾಣಿಕೆಯಂತಾಗಬೇಕೆಂದು ನಾನು ಈ ಸೇವೆ ಮಾಡುವವನಾಗಿದ್ದೇನೆ. ಆ ಜನರು ದೇವರಿಗೋಸ್ಕರವಾಗಿ ಪವಿತ್ರಾತ್ಮನ ಮೂಲಕ ಪವಿತ್ರರಾಗಿದ್ದಾರೆ.
ಆದ್ದರಿಂದ, ಈಗ ನೀವು (ಮೂವರು) ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಹೋಗಿ ಅವುಗಳನ್ನು ನಿಮಗೋಸ್ಕರ ದೋಷಪರಿಹಾರಕಯಜ್ಞ ಮಾಡಿರಿ. ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥಿಸುವನು. ಆಗ ನಾನು ಅವನ ಪ್ರಾರ್ಥನೆಗೆ ಖಂಡಿತವಾಗಿ ಉತ್ತರಿಸುವೆನು; ನಿಮ್ಮ ಮೂರ್ಖತನಕ್ಕೆ ಬರಬೇಕಾಗಿದ್ದ ದಂಡನೆಯನ್ನು ಮನ್ನಿಸುವೆನು. ನೀವು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ; ಆದರೆ ನನ್ನ ಸೇವಕನಾದ ಯೋಬನು ಹೇಳಿದವುಗಳು ಸತ್ಯವಾಗಿವೆ.” ಎಂದನು.
ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಎತ್ತರವಾದ ನನ್ನ ಪವಿತ್ರಪರ್ವತಕ್ಕೆ ಜನರು ಬರಲೇಬೇಕು. ಅಲ್ಲಿ ಅವರು ನನ್ನ ಸೇವೆ ಮಾಡಲೇಬೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನ್ನು ಸ್ವೀಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನ್ನು ಪ್ರಥಮ ಫಲಗಳನ್ನು ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನ್ನು ನನಗೆ ತರಬೇಕೆಂದು ಅಪೇಕ್ಷಿಸುತ್ತೇನೆ.