ಯೆಶಾಯ 5:14 - ಪರಿಶುದ್ದ ಬೈಬಲ್14 ಬಳಿಕ ಅವರು ಸತ್ತು ಪಾತಾಳಕ್ಕೆ ಇಳಿದುಹೋಗುವರು. ಪಾತಾಳವು ತನ್ನ ಬಾಯನ್ನು ಅಗಲವಾಗಿ ತೆರೆದು ಅವರನ್ನೆಲ್ಲಾ ನುಂಗಿಬಿಡುವುದು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಹೀಗಿರುವುದರಿಂದ ಪಾತಾಳವು ಹೆಚ್ಚು ಆತುರದಿಂದ ಅಗಾಧವಾಗಿ ಬಾಯಿ ತೆರೆಯಲು, ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲವುಗಳು ಅದರೊಳಗೆ ಬಿದ್ದುಹೋಗುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಪಾತಾಳವು ಹಸಿದು ಹಂಬಲಿಸುತ್ತಿದೆ. ಅಗಾಧವಾಗಿ, ಬಾಯಿ ತೆರೆದು ನಿಂತಿದೆ. ಜೆರುಸಲೇಮಿನ ಶ್ರೀಮಂತರು, ಸದ್ದುಗದ್ದಲ ಮಾಡುವ, ಹೆಮ್ಮೆಯಿಂದ ಹಿಗ್ಗುವ ಜನಸಾಮಾನ್ಯರು ಆ ಪಾತಾಳದೊಳಕ್ಕೆ ಬಿದ್ದುಹೋಗುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಮತ್ತು ಪಾತಾಳವು ಹೆಚ್ಚು ಆತುರದಿಂದ ಅಪಾರವಾಗಿ ಬಾಯಿತೆರೆಯಲು ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲಾ [ಅದರೊಳಗೆ] ಬಿದ್ದುಹೋಗುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಹೀಗಿರುವುದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ವೈಭವ, ಸಮೂಹ, ಕೋಲಾಹಲ, ಉಲ್ಲಾಸಪಡುವುದು ಇವೆಲ್ಲವೂ ಅದರಲ್ಲಿ ಬೀಳುವುವು. ಅಧ್ಯಾಯವನ್ನು ನೋಡಿ |
ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು.