ಯೆಶಾಯ 46:11 - ಪರಿಶುದ್ದ ಬೈಬಲ್11 ಪೂರ್ವದಿಕ್ಕಿನಿಂದ ಒಬ್ಬನನ್ನು ಕರೆಯುತ್ತೇನೆ. ಅವನು ಗಿಡುಗನಂತಿರುವನು. ಅವನು ಬಹು ದೂರದೇಶದಿಂದ ಬಂದು ನನ್ನ ಬಯಕೆಯನ್ನು ಈಡೇರಿಸುವನು. ನಾನು ಹೇಳಿದ ಸಂಗತಿಗಳನ್ನು ಮಾಡಿಮುಗಿಸುವೆನು. ನಾನು ಅವನನ್ನು ಸೃಷ್ಟಿಸಿದೆನು. ನಾನೇ ಅವನನ್ನು ಕರೆದುಕೊಂಡು ಬರುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಮೂಡಲಿಂದ ಒಂದು ಪಕ್ಷಿಯನ್ನು ಬರಮಾಡು, ದೂರದೇಶದಿಂದ ನನ್ನ ಸಂಕಲ್ಪವನ್ನು ನೆರವೇರಿಸುವ ಮನುಷ್ಯನು ಬರಲಿ ಎಂದು ಕರೆದಿದ್ದೇನೆ. ಎಂದು ನಾನೇ ನುಡಿದಿದ್ದೇನೆ, ನಾನು ಅದನ್ನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಸಾಧಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಮೂಡಲಿಂದ ಬೇಟೆಗಾಗಿ ರಣಹದ್ದನು ಕರೆದಂತೆ ಕರೆದಿಹೆನು ದೂರದೇಶದಿಂದ ನನ್ನ ಸಂಕಲ್ಪ ಈಡೇರಿಸಲೆಂದೇ. ನುಡಿದಿರುವೆನು ನಾನು; ಈಡೇರಿಸುವೆನು ಅದನ್ನು ಯೋಜಿಸಿರುವೆನು ನಾನು; ಸಾಧಿಸುವೆನು ಅದನ್ನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಮೂಡಲಿಂದ ಹದ್ದು ಎರಗಲಿ ಎಂದು, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸತಕ್ಕವನು ದೂರದೇಶದಿಂದ ಬರಲಿ ಎಂದು ಕೂಗಿದ್ದೇನೆ; ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಪೂರ್ವದಿಂದ ಒಂದು ಕ್ರೂರವಾದ ಪಕ್ಷಿಯೂ, ದೂರದೇಶದಿಂದ ನನ್ನ ಆಜ್ಞೆಯನ್ನು ನಡೆಸುವ ಮನುಷ್ಯನೂ ಬರಲಿ, ಎಂದು ಕರೆದಿದ್ದೇನೆ. ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಮಾಡುವೆನು. ಅಧ್ಯಾಯವನ್ನು ನೋಡಿ |
“ಬಾಬಿಲೋನಿನ ಮೇಲೆ ಬಾಣ ಪ್ರಯೋಗ ಮಾಡಲು ಬಿಲ್ಲುಗಾರರಿಗೆ ಹೇಳಿರಿ. ಆ ಜನರಿಗೆ ನಗರವನ್ನು ಮುತ್ತಲು ಹೇಳಿರಿ. ಯಾರೂ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಿ. ಅದು ಮಾಡಿದ ದುಷ್ಕೃತ್ಯಗಳಿಗಾಗಿ ಮುಯ್ಯಿತೀರಿಸಿರಿ. ಬೇರೆ ಜನಾಂಗಗಳಿಗೆ ಅದು ಮಾಡಿದಂತೆ ಅದಕ್ಕೆ ಮಾಡಿರಿ. ಬಾಬಿಲೋನ್ ಯೆಹೋವನನ್ನು ಗೌರವಿಸಲಿಲ್ಲ. ಪರಿಶುದ್ಧನಿಗೆ ಅವಮಾನ ಮಾಡಿದೆ. ಆದ್ದರಿಂದ ಬಾಬಿಲೋನನ್ನು ಶಿಕ್ಷಿಸಬೇಕು.
ನಾನು ಸೈರಸನಿಗೆ ಸುಕಾರ್ಯಗಳನ್ನು ಮಾಡಲು ಶಕ್ತಿಯನ್ನು ಕೊಟ್ಟಿದ್ದೇನೆ. ಅವನ ಕೆಲಸಗಳನ್ನೆಲ್ಲಾ ಸುಲಭಗೊಳಿಸುತ್ತೇನೆ. ಸೈರಸನು ನನ್ನ ಪಟ್ಟಣವನ್ನು ಮತ್ತೆ ಕಟ್ಟುವನು; ನನ್ನ ಜನರಿಗೆ ಸ್ವಾತಂತ್ರ್ಯವನ್ನು ಕೊಡುವನು. ನನ್ನ ಜನರನ್ನು ಸೈರಸನು ನನಗೆ ಮಾರಿಬಿಡುವದಿಲ್ಲ. ಈ ಕಾರ್ಯಗಳನ್ನೆಲ್ಲ ಮಾಡುವದಕ್ಕೆ ನಾನು ಅವನಿಗೆ ಹಣ ಕೊಡುವ ಅವಶ್ಯವಿಲ್ಲ. ಜನರು ಸ್ವತಂತ್ರರಾಗುವರು. ಇದಕ್ಕಾಗಿ ನನಗೇನೂ ಖರ್ಚು ಇಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಆ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಆ ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಆ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಈ ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.”
ಯೆಹೋವನು ಹೀಗೆನ್ನುತ್ತಾನೆ: “ಜೋರ್ಡನ್ ನದಿಯ ಸಮೀಪದ ದಟ್ಟವಾದ ಅರಣ್ಯದಿಂದ ಒಮ್ಮೆ ಒಂದು ಸಿಂಹವು ಬರುವುದು. ಆ ಸಿಂಹವು ಜನರ ಸಾಕುಪ್ರಾಣಿಗಳಿದ್ದ ಹೊಲಗಳಿಗೆ ನುಗ್ಗುವುದು. ಆ ಪ್ರಾಣಿಗಳೆಲ್ಲ ಓಡಿಹೋಗುವವು. ನಾನು ಆ ಸಿಂಹದಂತಾಗುವೆನು. ನಾನು ಬಾಬಿಲೋನನ್ನು ಅದರ ಪ್ರದೇಶದಿಂದ ಓಡಿಸಿಬಿಡುವೆನು. ಈ ಕಾರ್ಯ ಮಾಡಲು ನಾನು ಯಾರನ್ನು ಆರಿಸಲಿ? ನನ್ನತೆ ಯಾರೂ ಇಲ್ಲ. ನನ್ನನ್ನು ಪ್ರತಿಭಟಿಸುವವರು ಯಾರೂ ಇಲ್ಲ. ಆದ್ದರಿಂದ ನಾನೇ ಅದನ್ನು ಮಾಡುತ್ತೇನೆ. ನನ್ನನ್ನು ಓಡಿಸಲು ಯಾವ ಕುರುಬನೂ ಬರಲಾರನು. ನಾನು ಬಾಬಿಲೋನಿನ ಜನರನ್ನು ಓಡಿಸಿಬಿಡುವೆನು.”