ಯೆಶಾಯ 46:1 - ಪರಿಶುದ್ದ ಬೈಬಲ್1 ಬೇಲ್ ಮತ್ತು ನೆಬೋ ನನ್ನ ಮುಂದೆ ಅಡ್ಡಬೀಳುವವು. ಒಡೆಯನು ಹೀಗೆನ್ನುತ್ತಾನೆ, “ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳೇ. ಜನರು ಭಾರವಾದ ವಿಗ್ರಹಗಳನ್ನು ಪಶುಗಳ ಮೇಲೆ ಹೊರಿಸುವರು. ಅವು ಕೇವಲ ಹೊತ್ತುಕೊಂಡು ಹೋಗಬೇಕಾದ ಹೊರೆಗಳಾಗಿವೆ. ಆ ಸುಳ್ಳುದೇವರುಗಳು ಜನರನ್ನು ದಣಿಸುವುದೊಂದನ್ನು ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುವದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಬೇಲ್ ದೇವತೆಯು ಬಾಗಿದೆ, ನೆಬೋ ದೇವತೆಯು ಕುಗ್ಗಿದೆ, ಅವುಗಳ ವಿಗ್ರಹಗಳು ಪಶುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳು ಬಳಲಿದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ತಗ್ಗಿದೆ ಬೇಲ್ ದೇವತೆ ಕುಗ್ಗಿದೆ ನೆಬೋ ದೇವತೆ ಅವುಗಳ ಪ್ರತಿಮೆಗಳನು ಕತ್ತೆಗಳು ಹೊತ್ತಿವೆ. ನೀವು ಮೆರವಣಿಗೆಯಾಗಿ ಹೊರುತ್ತಿದ್ದ ಆ ಬೊಂಬೆಗಳೆ, ಭಾರವಾದ ಹೊರೆಯಾಗಿವೆ, ಬಳಲಿದಾ ಪಶುಗಳಿಗೆ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಬೇಲ್ ದೇವತೆಯು ಬೊಗ್ಗಿದೆ, ನೆಬೋದೇವತೆಯು ಕುಗ್ಗಿದೆ, ಅವುಗಳ ಬೊಂಬೆಗಳು ದನ ಮೊದಲಾದವುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳನ್ನು ಬಳಲಿಸಿವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಬೇಲ್ ದೇವತೆಯು ತಗ್ಗಿದೆ, ನೆಬೋ ದೇವತೆಯು ಕುಗ್ಗಿದೆ. ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು. ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು. ಅಧ್ಯಾಯವನ್ನು ನೋಡಿ |
ನೆಗೆವ್‌ನಲ್ಲಿರುವ ಪ್ರಾಣಿಗಳ ದುಃಖಕರವಾದ ಸಂದೇಶ: ನೆಗೆವ್ ಬಹು ಅಪಾಯಕಾರಿ ಸ್ಥಳ. ಸಿಂಹ, ವಿಷದ ಹಾವುಗಳು, ವೇಗವಾಗಿ ಚಲಿಸುವ ಹಾವುಗಳಿಂದ ಅದು ತುಂಬಿದೆ. ಆದರೆ ಕೆಲವರು ನೆಗೆವ್ ಮೂಲಕ ಪ್ರಯಾಣ ಮಾಡಿ ಈಜಿಪ್ಟಿಗೆ ಹೋಗುತ್ತಾರೆ. ಅವರು ತಮ್ಮ ಸಂಪತ್ತನ್ನೆಲ್ಲಾ ಕತ್ತೆಯ ಮೇಲೆ ಹೊರಿಸಿರುತ್ತಾರೆ. ಅವರು ತಮ್ಮ ಧನವನ್ನು ಒಂಟೆಯ ಮೇಲೆ ಹೊರಿಸಿರುತ್ತಾರೆ. ತಮಗೆ ಸಹಾಯ ಮಾಡಲಾರದ ದೇಶದ ಮೇಲೆ ಜನರು ಭರವಸವಿಟ್ಟಿದ್ದಾರೆ ಎಂಬುದೇ ಇದರರ್ಥ.
ಅವರು ಆ ವಿಗ್ರಹವನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರುತ್ತಾರೆ. ಆ ಸುಳ್ಳುದೇವರುಗಳು ನಿಷ್ಪ್ರಯೋಜಕವಾಗಿವೆ. ಜನರೇ ಅವುಗಳನ್ನು ಹೊತ್ತುಕೊಳ್ಳಬೇಕು. ಜನರು ಅವುಗಳನ್ನು ನೆಲದ ಮೇಲೆ ಇಟ್ಟಾಗ ಅವು ಅಲ್ಲಾಡುವದಿಲ್ಲ. ತಮ್ಮ ಸ್ಥಳದಿಂದ ಆ ಸುಳ್ಳುದೇವರುಗಳು ಎದ್ದುಹೋಗುವದಿಲ್ಲ. ಜನರು ಅದರ ಮುಂದೆ ಕೂಗಿಕೊಂಡರೂ ಅವು ಕೇಳಿಸಿಕೊಳ್ಳುವದಿಲ್ಲ. ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳಷ್ಟೇ. ಅವು ಜನರನ್ನು ಅವರ ಕಷ್ಟಗಳಿಂದ ಬಿಡಿಸಲಾರವು.