Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 45:9 - ಪರಿಶುದ್ದ ಬೈಬಲ್‌

9 “ಈ ಜನರನ್ನು ನೋಡು. ತಮ್ಮನ್ನು ಸೃಷ್ಟಿದಾತನೊಂದಿಗೆ ವಾದಿಸುತ್ತಿದ್ದಾರೆ. ನನ್ನೊಂದಿಗೆ ವಾದಿಸುವದನ್ನು ನೋಡಿರಿ! ಅವರು ಒಡೆಯಲ್ಪಟ್ಟ ಮಣ್ಣಿನ ಮಡಿಕೆಯ ತುಂಡುಗಳಂತಿದ್ದಾರೆ. ಒಬ್ಬನು ಮೃದುವಾದ ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡುತ್ತಾನೆ. ಆ ಮಡಿಕೆಯು ಕುಂಬಾರನಿಗೆ, ‘ನೀನು ಮಾಡುತ್ತಿರುವುದೇನು?’ ಎಂದು ಪ್ರಶ್ನಿಸುವದಿಲ್ಲ. ತಯಾರಿಸಲ್ಪಟ್ಟ ವಸ್ತುಗಳಿಗೆ ತಯಾರಿಸಿದವನನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಜನರು ಈ ಜೇಡಿಮಣ್ಣಿನಂತೆ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅಯ್ಯೋ, ತನ್ನನ್ನು ರೂಪಿಸಿದಾತನ ಸಂಗಡ ವ್ಯಾಜ್ಯವಾಡುವವನ ಗತಿ ಏನು! ಮಣ್ಣಿನ ಮಡಿಕೆಗಳಲ್ಲಿ ಅವನೂ ಒಂದು ಮಡಿಕೆಯಲ್ಲವೆ! ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದು ಕೇಳುವುದುಂಟೇ? ಅಥವಾ ನಿನ್ನ ಕಾರ್ಯವು, ‘ಅವನಿಗೆ ಕೈಯಿಲ್ಲ’ ಅಂದೀತೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಧಿಕ್ಕಾರ ! ತನ್ನನು ರೂಪಿಸಿದವನೊಡನೇ ವ್ಯಾಜ್ಯ ಮಾಡುವವನಿಗೆ; ಅವನು ಕೂಡ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? “ಏನು ಮಾಡುತ್ತಿ” ಎಂದು ಮಣ್ಣು ಕುಂಬಾರನನು ಕೇಳುವುದುಂಟೆ? ‘ನಾನು ನಿನ್ನ ಕೈಯ ಕೃತಿ ಅಲ್ಲ’ ಎಂದು ಆ ಮಡಕೆ ಹೇಳುವುದುಂಟೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅಯ್ಯೋ, ತನ್ನನ್ನು ರೂಪಿಸಿದಾತನ ಸಂಗಡ ವ್ಯಾಜ್ಯವಾಡುವವನ ಗತಿ ಏನು! ಮಣ್ಣು ಮಡಕೆಗಳಲ್ಲಿ ಅವನೂ ಒಂದು ಮಡಕೆಯಲ್ಲವೆ. ಮಣ್ಣು - ಏನು ಮಾಡುತ್ತೀ ಎಂದು ರೂಪಿಸುವವನನ್ನು ಕೇಳುವದುಂಟೇ? ನಿನ್ನ ಕಾರ್ಯವು [ನಿನ್ನ ವಿಷಯವಾಗಿ] ಅವನಿಗೆ ಕೈಯಿಲ್ಲ ಅಂದೀತೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ! ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದೂ, ‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ ಆ ಮಡಕೆ ಹೇಳುವುದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 45:9
22 ತಿಳಿವುಗಳ ಹೋಲಿಕೆ  

ಯೆಹೋವನೇ, ನೀನು ನಮ್ಮ ತಂದೆಯಾಗಿರುವೆ. ನಾವು ಜೇಡಿಮಣ್ಣಿನಂತಿದ್ದೇವೆ. ನೀನಾದರೋ ಕುಂಬಾರನಾಗಿರುವೆ. ನಿನ್ನ ಕೈಗಳು ನಮ್ಮನ್ನು ನಿರ್ಮಿಸಿದವು.


“ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಬುದನ್ನು ನೀವು ಬಲ್ಲಿರಿ. ನೀವು ಕುಂಬಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಬಾರನಂತಿದ್ದೇನೆ.


ನೀವು ಗಲಿಬಿಲಿಗೊಂಡಿದ್ದೀರಿ. ಜೇಡಿಮಣ್ಣು ಕುಂಬಾರನಿಗೆ ಸಮಾನವಾಗಿದೆ ಎಂದು ಯೋಚಿಸುತ್ತೀರಿ. ಒಂದು ವಸ್ತು ಅದರ ನಿರ್ಮಾಣಿಕನಿಗೆ, “ನೀನು ನನ್ನನ್ನು ನಿರ್ಮಿಸಲಿಲ್ಲ” ಎಂದು ಕೇಳಬಹುದು ಎಂದು ನೆನಸುತ್ತೀರಿ. ಒಂದು ಮಡಿಕೆಯು ಅದನ್ನು ಮಾಡಿದವನಿಗೆ, “ನಿನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ ಹಾಗಾಯಿತು.


ಕೊಡಲಿಯು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಗರಗಸವು ಅದನ್ನು ಉಪಯೋಗಿಸುವವನಿಗಿಂತ ಉತ್ತಮವಲ್ಲ. ಆದರೆ ಅಶ್ಶೂರವು ತಾನು ದೇವರಿಗಿಂತಲೂ ಶಕ್ತಿಶಾಲಿ, ಸಾಮರ್ಥ್ಯವುಳ್ಳವನು ಎಂದು ನೆನಸುತ್ತಾನೆ. ಬೆತ್ತವು, ತನ್ನನ್ನು ಎತ್ತಿಹಿಡಿದು ಬೇರೆಯವರನ್ನು ಶಿಕ್ಷಿಸುವವನಿಗಿಂತ ತಾನು ಬಲಿಷ್ಠನೂ ಪ್ರಮುಖನೂ ಎಂದು ಹೇಳುವಂತಿದೆ ಇದು.


ಯೆಹೋವನೇ ವಿರೋಧವಾಗಿದ್ದರೆ, ಜಯಪ್ರಧವಾಗಬಲ್ಲ ಯೋಜನೆಯನ್ನು ಮಾಡುವಂಥ ಜ್ಞಾನ ಯಾರಿಗೂ ಇಲ್ಲ.


ಬಾಬಿಲೋನೇ, ನಾನು ನಿನಗಾಗಿ ಒಂದು ಬಲೆಯನ್ನು ಒಡ್ಡಿದೆ. ನೀನು ತಿಳಿಯದೆ ಸಿಕ್ಕಿಹಾಕಿಕೊಂಡೆ. ನೀನು ಯೆಹೋವನ ವಿರುದ್ಧ ಹೋರಾಡಿದೆ. ಆದ್ದರಿಂದ ನಿನ್ನನ್ನು ಹುಡುಕಿ ವಶಪಡಿಸಿಕೊಳ್ಳಲಾಯಿತು.


ಪ್ರಭುವಿಗೆ ಅಸೂಯೆಯನ್ನು ಉಂಟುಮಾಡಬೇಕೆಂದಿದ್ದೀರೋ? ಆತನಿಗಿಂತಲೂ ನಾವು ಬಲಿಷ್ಠರಾಗಿದ್ದೇವೋ? ಇಲ್ಲ!


ದೇವರೇ ತೆಗೆದುಕೊಳ್ಳುವುದಾದರೆ, ಆತನನ್ನು ತಡೆಯಬಲ್ಲವರು ಯಾರು? ‘ನೀನು ಏನು ಮಾಡುತ್ತಿರುವೆ’ ಎಂದು ಆತನನ್ನು ಕೇಳುವವರು ಯಾರು?


ಯೋಬನೇ, ನೀನು ದೇವರೊಂದಿಗೆ ವಾದಿಸುವುದೇಕೆ? ದೇವರು ನಿನಗೆ ಪ್ರತಿಯೊಂದನ್ನೂ ವಿವರಿಸಬೇಕೆಂದು ಭಾವಿಸಿಕೊಂಡಿರುವೆಯೋ?


“ಸರ್ವಶಕ್ತನಾದ ದೇವರ ವಿರುದ್ಧ ವ್ಯಾಜ್ಯಹೂಡಿದವನು ಆತನನ್ನು ಸರಿಪಡಿಸಬಲ್ಲನೇ? ದೇವರ ಮೇಲೆ ಅಪವಾದ ಹೊರಿಸುವವನು ಆತನಿಗೆ ಉತ್ತರ ನೀಡಲಿ” ಎಂದನು.


ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ.


ತಂದೆಯು ಮಕ್ಕಳನ್ನು ಹುಟ್ಟಿಸುತ್ತಾನೆ. ಮಕ್ಕಳು ತಂದೆಯನ್ನು, ‘ನನಗೆ ಜೀವ ಯಾಕೆ ಕೊಟ್ಟೆ?’ ಎಂದು ಕೇಳಲಾಗುವುದಿಲ್ಲ. ಮಕ್ಕಳು ತಮ್ಮ ತಾಯಿಗೆ, ‘ನನ್ನನ್ನು ಯಾಕೆ ಹೆತ್ತದ್ದು ಎಂದು ಕೇಳಲಾಗುವುದಿಲ್ಲ.’”


ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ.


ಭೂಮಿಯ ಜನರು ಬಹು ಮುಖ್ಯರಲ್ಲ. ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ. ಯಾರೂ ಆತನನ್ನು ತಡೆಯಲಾರರು! ಯಾರೂ ಆತನನ್ನು ಪ್ರಶ್ನಿಸಲಾರರು!


ದೇವರ ಜ್ಞಾನವು ಅಗಾಧವಾದದ್ದು; ಆತನ ಶಕ್ತಿಯು ಮಹತ್ವವಾದದ್ದು; ಯಾವನೂ ದೇವರಿಗೆ ವಿರೋಧವಾಗಿ ಜಯಗಳಿಸಲಾರನು.


ದೇವರೇ, ನೀನು ನನ್ನನ್ನು ಜೇಡಿಮಣ್ಣಿನಂತೆ ಮಾಡಿರುವೆ ಎಂಬುದನ್ನು ಜ್ಞಾಪಿಸಿಕೋ. ಈಗ ನನ್ನನ್ನು ಮತ್ತೆ ಧೂಳನ್ನಾಗಿ ಯಾಕೆ ಮಾರ್ಪಡಿಸುತ್ತಿರುವೆ?


ನಿನ್ನ ಹೆಸರನ್ನು ಯಾರೂ ಕರೆಯುವದಿಲ್ಲ. ನಿನ್ನನ್ನು ಹಿಂಬಾಲಿಸಲು ಯಾರಿಗೂ ಇಷ್ಟವಿಲ್ಲ; ಯಾಕೆಂದರೆ ನೀನು ನಮಗೆ ವಿಮುಖನಾಗಿರುವೆ ಮತ್ತು ನಮ್ಮನ್ನು ನಮ್ಮ ಪಾಪಗಳ ದೋಷಕ್ಕೆ ಒಪ್ಪಿಸಿಕೊಟ್ಟಿರುವಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು