ಯೆಶಾಯ 45:2 - ಪರಿಶುದ್ದ ಬೈಬಲ್2 ಸೈರಸನೇ, ನಿನ್ನ ಸೈನ್ಯವು ಮುನ್ನುಗ್ಗುವದು. ನಾನು ನಿನ್ನ ಮುಂದೆ ಹೋಗಿ ಪರ್ವತಗಳನ್ನು ನೆಲಸಮ ಮಾಡುವೆನು. ಹಿತ್ತಾಳೆಯ ನಗರ ದ್ವಾರಗಳನ್ನು ಪುಡಿಪುಡಿ ಮಾಡುವೆನು. ದ್ವಾರಗಳ ಕಬ್ಬಿಣದ ಅಗುಳಿಗಳನ್ನು ತುಂಡು ಮಾಡಿ ಬಿಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 “ನಾನು ನಿನ್ನ ಮುಂದೆ ಹೋಗಿ, ದಿಣ್ಣೆಗಳನ್ನು ಸಮಮಾಡುವೆನು. ತಾಮ್ರದ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ನಿನ್ನ ಮುಂದೆ ಸಾಗುವೆನು ನಾನು ಸಮಮಾಡುವೆನು ಬೆಟ್ಟಗುಡ್ಡಗಳನು ಒಡೆದುಹಾಕುವೆನು ಕಂಚಿನ ಕದಗಳನು ಮುರಿದುಬಿಡುವೆನು ಕಬ್ಬಿಣದ ಅಗುಳಿಗಳನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡುವೆನು, ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ನಾನು ನಿನ್ನ ಮುಂದೆ ಹೋಗಿ ಬೆಟ್ಟಗುಡ್ಡಗಳನ್ನು ಸಮಮಾಡಿ, ಕಂಚಿನ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು. ಅಧ್ಯಾಯವನ್ನು ನೋಡಿ |
ನಾನು ಸೈರಸನಿಗೆ ಸುಕಾರ್ಯಗಳನ್ನು ಮಾಡಲು ಶಕ್ತಿಯನ್ನು ಕೊಟ್ಟಿದ್ದೇನೆ. ಅವನ ಕೆಲಸಗಳನ್ನೆಲ್ಲಾ ಸುಲಭಗೊಳಿಸುತ್ತೇನೆ. ಸೈರಸನು ನನ್ನ ಪಟ್ಟಣವನ್ನು ಮತ್ತೆ ಕಟ್ಟುವನು; ನನ್ನ ಜನರಿಗೆ ಸ್ವಾತಂತ್ರ್ಯವನ್ನು ಕೊಡುವನು. ನನ್ನ ಜನರನ್ನು ಸೈರಸನು ನನಗೆ ಮಾರಿಬಿಡುವದಿಲ್ಲ. ಈ ಕಾರ್ಯಗಳನ್ನೆಲ್ಲ ಮಾಡುವದಕ್ಕೆ ನಾನು ಅವನಿಗೆ ಹಣ ಕೊಡುವ ಅವಶ್ಯವಿಲ್ಲ. ಜನರು ಸ್ವತಂತ್ರರಾಗುವರು. ಇದಕ್ಕಾಗಿ ನನಗೇನೂ ಖರ್ಚು ಇಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
ಸರ್ವಶಕ್ತನಾದ ಯೆಹೋವನು ಹೀಗೆನ್ನುವನು: “ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು. ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು. ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು. ಆದರೆ ಅದು ನಿಷ್ಪ್ರಯೋಜಕವಾಗುವುದು. ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು. ಆದರೆ ಅವರು ಕೇವಲ ಅಗ್ನಿಗೆ ಆಹುತಿಯಾಗುವರು.”