Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:1 - ಪರಿಶುದ್ದ ಬೈಬಲ್‌

1 “ಯಾಕೋಬೇ, ನೀನೇ ನನ್ನ ಸೇವಕ. ನನ್ನ ಮಾತುಗಳನ್ನು ಕೇಳು. ಇಸ್ರೇಲೇ, ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ. ನಾನು ಹೇಳುವುದನ್ನು ಕೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಇಸ್ರಾಯೇಲೇ, ಈಗ ಕೇಳು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 “ಕೇಳೀಗ ನನ್ನ ದಾಸ ಯಕೋಬೇ, ನಾನು ಆರಿಸಿಕೊಂಡ ಇಸ್ರಯೇಲೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಇಸ್ರಾಯೇಲೇ, ಈಗ ಕೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 “ಈಗಲಾದರೋ ನನ್ನ ಸೇವಕನಾದ ಯಾಕೋಬೇ ಮತ್ತು ನಾನು ಆರಿಸಿಕೊಂಡ ಇಸ್ರಾಯೇಲೇ, ಕೇಳು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:1
22 ತಿಳಿವುಗಳ ಹೋಲಿಕೆ  

ಯೆಹೋವನು ಹೀಗೆನ್ನುತ್ತಾನೆ, “ಇಸ್ರೇಲೇ, ನೀನು ನನ್ನ ಸೇವಕನಾಗಿರುವೆ. ಯಾಕೋಬೇ, ನಾನು ನಿನ್ನನ್ನು ಆರಿಸಿಕೊಂಡೆನು. ನೀನು ನನ್ನ ಸ್ನೇಹಿತನಾದ ಅಬ್ರಹಾಮನ ಕುಟುಂಬದವನಾಗಿರುವೆ.


ಯೆಹೋವನು ಹೀಗೆಂದನು: “ನನ್ನ ಸೇವಕನಾದ ಯಾಕೋಬನೇ, ಭಯಪಡಬೇಡ! ಇಸ್ರೇಲೇ, ಅಂಜಬೇಡ, ನಾನು ನಿಮ್ಮನ್ನು ಆ ದೂರಪ್ರದೇಶದಿಂದ ರಕ್ಷಿಸುವೆನು. ಆ ದೂರದೇಶದಲ್ಲಿ ನೀವು ಬಂಧಿಗಳಾಗಿದ್ದೀರಿ, ಆದರೆ ನಾನು ನಿಮ್ಮ ವಂಶದವರನ್ನು ರಕ್ಷಿಸುತ್ತೇನೆ. ಅವರನ್ನು ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ. ಯಾಕೋಬು ಮತ್ತೆ ನೆಮ್ಮದಿಯಿಂದ ಇರುವುದು. ಜನರು ಯಾಕೋಬನನ್ನು ಪೀಡಿಸುವದಿಲ್ಲ; ನನ್ನ ಜನರನ್ನು ಹೆದರಿಸುವ ಶತ್ರುಗಳಿರುವದಿಲ್ಲ.” ಇದು ಯೆಹೋವನ ನುಡಿ.


ತನ್ನ ಗುಹೆಯಿಂದ ಒಂದು “ಸಿಂಹವು” ಹೊರಬಂದಿದೆ. ಜನಾಂಗಗಳ ವಿನಾಶಕವಾದ ಸಿಂಹವು ಹೆಜ್ಜೆ ಹಾಕುತ್ತಿದೆ. ಅದು ನಿಮ್ಮ ಪ್ರದೇಶವನ್ನು ನಾಶಮಾಡಲು ತನ್ನ ಗುಹೆಯನ್ನು ಬಿಟ್ಟು ಹೊರಟಿದೆ. ನಿಮ್ಮ ಪಟ್ಟಣಗಳೆಲ್ಲ ನಾಶಹೊಂದುವವು. ಅಲ್ಲಿ ವಾಸಿಸಲು ಜನರೇ ಇಲ್ಲದಂತಾಗುವುದು.


ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ; ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.


“ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ.


ನಾನು ಹೇಳುವ ವಿಷಯಗಳಿಗೆ ಸರಿಯಾಗಿ ಕಿವಿಗೊಡಿರಿ. ನಿಮ್ಮ ಆತ್ಮಗಳು ಜೀವಿಸುವಂತೆ ನನ್ನ ಮಾತುಗಳನ್ನು ಕೇಳಿರಿ. ನನ್ನ ಬಳಿಗೆ ಬನ್ನಿರಿ, ನಾನು ನಿಮ್ಮೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ನಾನು ದಾವೀದನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಅದಿರುವುದು. ನಾನು ದಾವೀದನಿಗೆ ಅವನನ್ನು ಪ್ರೀತಿಸುವೆನೆಂದೂ ಅವನಿಗೆ ಪ್ರಾಮಾಣಿಕನಾಗಿರುವೆನೆಂದೂ ವಾಗ್ದಾನ ಮಾಡಿದ್ದೆನು. ಆ ಒಡಂಬಡಿಕೆಯನ್ನು ನೀವು ಖಂಡಿತವಾಗಿ ನಂಬಬಹುದು.


ಯಾಕೋಬೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಇಸ್ರೇಲೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಈಗ ಆತನು ಹೇಳುವುದೇನೆಂದರೆ: “ಭಯಪಡಬೇಡ. ನಾನೇ ನಿನ್ನನ್ನು ರಕ್ಷಿಸಿದ್ದೇನೆ. ನಾನು ನಿನಗೆ ಹೆಸರಿಟ್ಟೆನು. ನೀನು ನನ್ನವನೇ.


ನನ್ನ ಜನರಲ್ಲಿ ಯಾರಾದರೂ ದೇವರ ಮಾತನ್ನು ಕೇಳಿದ್ದಾರೋ? ಇಲ್ಲ! ಆದರೆ ನೀವು ಆತನ ಮಾತುಗಳಿಗೆ ಲಕ್ಷ್ಯಗೊಟ್ಟು ಕೇಳಿ ಸಂಭವಿಸಿರುವದನ್ನು ಗಮನಿಸಬೇಕು.


ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು.


ಆತನು ಆ ದೇಶಗಳನ್ನು ಇಸ್ರೇಲರಿಗೆ ಉಡುಗೊರೆಯಾಗಿ ಕೊಟ್ಟನು. ಆತನ ಪ್ರೀತಿ ಶಾಶ್ವತವಾದದ್ದು.


ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ.


ನೀನು ದೂರದೇಶದಲ್ಲಿದ್ದೆ. ಆದರೆ ಕೈಚಾಚಿ ಆ ದೇಶದಿಂದ ನಿನ್ನನ್ನು ಕರೆದೆನು. ‘ನೀನು ನನ್ನ ಸೇವಕ’ ಎಂದು ಹೇಳಿದೆನು. ನಾನು ನಿನ್ನನ್ನು ಆರಿಸಿಕೊಂಡೆನು. ಆದರೆ ನಿನ್ನನ್ನು ತಳ್ಳಿಬಿಡಲಿಲ್ಲ.


“ಯಾಕೋಬೇ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊ! ಇಸ್ರೇಲೇ, ನೀನು ನನ್ನ ಸೇವಕನೆಂಬುದನ್ನು ನೆನಪಿನಲ್ಲಿಟ್ಟುಕೊ! ನಾನೇ ನಿನ್ನನ್ನು ನಿರ್ಮಿಸಿದೆನು; ನೀನೇ ನನ್ನ ಸೇವಕನು. ಆದ್ದರಿಂದ ಇಸ್ರೇಲೇ, ನನ್ನನ್ನು ಮರೆತುಬಿಡಬೇಡ.


ನಾನು ನನ್ನ ಸೇವಕನಾದ ಯಾಕೋಬನಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ. ನಾನು ಆರಿಸಿಕೊಂಡ ಜನಾಂಗವಾದ ಇಸ್ರೇಲಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ. ಸೈರಸನೇ, ನಾನು ನಿನ್ನ ಹೆಸರೆತ್ತಿ ಕರೆದಿದ್ದೇನೆ. ನೀನು ನನ್ನನ್ನು ತಿಳಿಯದವನಾಗಿದ್ದರೂ ನಾನು ನಿನಗೆ ಬಿರುದನ್ನು ಅನುಗ್ರಹಿಸಿದ್ದೇನೆ.


“ಯಾಕೋಬೇ, ನನಗೆ ಕಿವಿಗೊಡು. ಇಸ್ರೇಲೇ, ನೀವು ನನ್ನ ಜನರಾಗುವದಕ್ಕಾಗಿ ನಿಮ್ಮನ್ನು ನಾನು ಕರೆದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿರಿ. ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು