ಯೆಶಾಯ 43:3 - ಪರಿಶುದ್ದ ಬೈಬಲ್3 ಯಾಕೆಂದರೆ ಯೆಹೋವನಾದ ನಾನೇ ನಿನ್ನ ದೇವರು. ಇಸ್ರೇಲಿನ ಪರಿಶುದ್ಧನಾದ ನಾನೇ ನಿನ್ನ ರಕ್ಷಕನು. ಈಜಿಪ್ಟನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲು ನಿನಗೆ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಏಕೆಂದರೆ ಯೆಹೋವನೆಂಬ ನಾನು ನಿನ್ನ ದೇವರು, ಇಸ್ರಾಯೇಲರ ಸದಮಲಸ್ವಾಮಿಯಾದ ನಾನು ನಿನ್ನ ರಕ್ಷಕನು. ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ. ನಿನ್ನ ಬದಲಾಗಿ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನಿನ್ನ ದೇವರಾದ ಸರ್ವೇಶ್ವರ ನಾನು, ಇಸ್ರಯೇಲರ ಪರಮಪಾವನ ಸ್ವಾಮಿ, ನಿನ್ನ ರಕ್ಷಕ ನಾನು. ಈಡುಮಾಡಿದ್ದೇನೆ ಈಜಿಪ್ಟನ್ನು ನಿನ್ನ ವಿಮೋಚನೆಗಾಗಿ ಕೊಟ್ಟಿದ್ದೇನೆ ಸುಡಾನ್ ಸೆಬಾ ನಾಡುಗಳನ್ನು ನಿನಗೆ ಈಡಾಗಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆಹೋವನೆಂಬ ನಾನು ನಿನ್ನ ದೇವರಾಗಿದ್ದೇನಷ್ಟೆ, ಇಸ್ರಾಯೇಲ್ಯರ ಸದಮಲಸ್ವಾವಿುಯಾದ ನಾನು ನಿನ್ನ ರಕ್ಷಕನು. ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನಗೆ ಬದಲಾಗಿ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಏಕೆಂದರೆ ನಾನೇ ನಿನ್ನ ಯೆಹೋವ ದೇವರೂ ನಿನ್ನ ದೇವರಾದ ಇಸ್ರಾಯೇಲಿನ ಪರಿಶುದ್ಧನೂ, ನಿನ್ನ ರಕ್ಷಕನೂ ಆಗಿದ್ದೇನೆ. ಈಜಿಪ್ಟನ್ನು ನಿನ್ನ ವಿಮೋಚನೆಗೂ, ಇಥಿಯೋಪಿಯ ಮತ್ತು ಸೆಬಾ ಸೀಮೆಗಳನ್ನು ನಿನಗೋಸ್ಕರ ಕೊಟ್ಟಿದ್ದೇನೆ. ಅಧ್ಯಾಯವನ್ನು ನೋಡಿ |
ನನ್ನ ಬಳಿಗೆ ಬರಲು ಅವರಿಗೆ ಹೇಳು. ತಾವು ವಿಗ್ರಹಗಳನ್ನು ಯಾಕೆ ನಂಬುತ್ತಾರೆಂದು ನನ್ನೊಂದಿಗೆ ವಾದಿಸಲಿ.) “ಬಹಳ ಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ನಿಮಗೆ ತಿಳಿಸಿದವರು ಯಾರು? ಬಹಳ ಕಾಲದಿಂದ ಈ ವಿಷಯಗಳನ್ನು ನಿಮಗೆ ತಿಳಿಸುತ್ತಾ ಬಂದವರು ಯಾರು? ನಾನೇ. ಯೆಹೋವನಾದ ನಾನೇ ನಿಮಗೆಲ್ಲವನ್ನು ತಿಳಿಸಿದೆನು. ನಾನೊಬ್ಬನೇ ದೇವರು. ನನ್ನಂಥ ದೇವರು ಬೇರೆ ಇದ್ದಾರೆಯೇ? ಕರುಣೆಯುಳ್ಳ ದೇವರು ಬೇರೆಲ್ಲಾದರೂ ಇರುವನೇ? ತನ್ನ ಜನರನ್ನು ವಿಮೋಚಿಸುವಂಥ ಬೇರೆ ದೇವರು ಇರುವನೇ? ಇಲ್ಲ! ಬೇರೆ ದೇವರು ಇಲ್ಲ!
ಯೆಹೋವನು ಹೇಳುವುದೇನೆಂದರೆ, “ಈಜಿಪ್ಟ್ ಮತ್ತು ಇಥಿಯೋಪ್ಯ ಐಶ್ವರ್ಯವುಳ್ಳ ರಾಜ್ಯಗಳಾಗಿವೆ. ಇಸ್ರೇಲೇ, ನೀನು ಆ ಐಶ್ವರ್ಯವನ್ನು ಪಡೆದುಕೊಳ್ಳುವೆ. ಸೆಬಾದ ಉನ್ನತ ಜನರು ನಿನ್ನವರಾಗುವರು. ಅವರು ತಮ್ಮ ಕುತ್ತಿಗೆಗಳಲ್ಲಿ ಸಂಕೋಲೆಗಳಿಂದ ಬಂಧಿತರಾಗಿ ನಿಮ್ಮ ಹಿಂದೆ ನಡೆಯುವರು. ಅವರು ನಿಮ್ಮ ಮುಂದೆ ಅಡ್ಡಬಿದ್ದು, ‘ಇಸ್ರೇಲೇ, ದೇವರು ನಿಜವಾಗಿ ನಿಮ್ಮೊಂದಿಗಿದ್ದಾನೆ. ಬೇರೆ ದೇವರುಗಳೇ ಇಲ್ಲ’” ಎಂದು ನಿಮ್ಮಲ್ಲಿ ಪ್ರಾರ್ಥಿಸುವರು.