ಯೆಶಾಯ 37:36 - ಪರಿಶುದ್ದ ಬೈಬಲ್36 ಆ ರಾತ್ರಿ, ಯೆಹೋವನ ದೂತನು ಹೊರಟುಹೋಗಿ ಅಶ್ಶೂರದ ಪಾಳೆಯದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಸಂಹರಿಸಿದನು. ಜನರು ಬೆಳಿಗ್ಗೆ ಎದ್ದಾಗ ಸುತ್ತಲೂ ಹೆಣಗಳು ಬಿದ್ದಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201936 ಆಗ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲರು ಹೆಣಗಳಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)36 ಆಗ ಸರ್ವೇಶ್ವರ ಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಬೆಳಿಗ್ಗೆ ಎದ್ದುನೋಡುವಾಗ ಅವರೆಲ್ಲರೂ ಹೆಣಗಳಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)36 ಆಗ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲಾ ಹೆಣಗಳಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ36 ಆಗ ಯೆಹೋವ ದೇವರ ದೂತನು ಹೊರಟುಬಂದು ಅಸ್ಸೀರಿಯದ ದಂಡಿನಲ್ಲಿದ್ದ 1,85,000 ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ, ಇಗೋ, ಅವರೆಲ್ಲರು ಸತ್ತು ಹೆಣಗಳಾಗಿದ್ದರು. ಅಧ್ಯಾಯವನ್ನು ನೋಡಿ |
ಆ ಬಳಿಕ ಸರ್ವಶಕ್ತನಾದ ಯೆಹೋವನು ಕೊರಡೆಯಿಂದ ಅಶ್ಶೂರವನ್ನು ಹೊಡೆಯುವನು. ಹಿಂದಿನ ಕಾಲದಲ್ಲಿ ಓರೇಬ್ ಬಂಡೆಯ ಮೇಲೆ ಮಿದ್ಯಾನ್ಯರನ್ನು ಯೆಹೋವನು ಹೇಗೆ ಸೋಲಿಸಿದನೋ ಹಾಗೆಯೇ ಅಶ್ಶೂರವನ್ನು ಸೋಲಿಸುವನು. ಹಿಂದಿನ ಕಾಲದಲ್ಲಿ ಯೆಹೋವನು ಈಜಿಪ್ಟನ್ನು ಶಿಕ್ಷಿಸಿದನು. ಆತನು ಕೋಲನ್ನೆತ್ತಿ ಸಮುದ್ರ ಮಾರ್ಗವಾಗಿ ತನ್ನ ಜನರನ್ನು ಈಜಿಪ್ಟಿನಿಂದ ಹೊರನಡಿಸಿದನು. ಅದೇ ರೀತಿಯಲ್ಲಿ ಅಶ್ಶೂರದಿಂದ ಯೆಹೋವನು ತನ್ನ ಜನರನ್ನು ರಕ್ಷಿಸಿ ಬಿಡಿಸುವನು.
ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳ ದೇವರಿಗೆ ಸ್ತೋತ್ರವಾಗಲಿ. ಅವರ ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರನ್ನು ಬೆಂಕಿಯಿಂದ ರಕ್ಷಿಸಿದ್ದಾನೆ. ಈ ಮೂರು ಜನರು ತಮ್ಮ ದೇವರ ಮೇಲೆ ವಿಶ್ವಾಸವಿಟ್ಟರು. ಅವರು ನನ್ನ ಆಜ್ಞೆಯನ್ನು ಪಾಲಿಸಲು ಒಪ್ಪಲಿಲ್ಲ. ಬೇರೆ ಯಾವ ದೇವರನ್ನೂ ಪೂಜಿಸುವುದಕ್ಕೆ ಅಥವಾ ಸೇವಿಸುವುದಕ್ಕೆ ಬದಲಾಗಿ ಸಾಯಲು ಅವರು ಸಿದ್ಧರಾಗಿದ್ದರು.