ಯೆಶಾಯ 34:17 - ಪರಿಶುದ್ದ ಬೈಬಲ್17 ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರ್ಷವರ್ಷವೂ ಅವುಗಳು ಅಲ್ಲಿಯೇ ವಾಸಮಾಡುವವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಆತನೇ ಇವುಗಳಿಗೆ ಪಾಲು ಮಾಡಿಕೊಟ್ಟಿದ್ದಾನೆ. ಆತನ ಕೈಯೇ ಗೆರೆ ಹಾಕಿ ದೇಶವನ್ನು ಹಂಚಿಕೊಟ್ಟಿದೆ. ಅದು ಇವುಗಳಿಗೆ ನಿತ್ಯ ಸ್ವಾಸ್ತ್ಯವಾಗುವುದು, ಅವು ತಲಾತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಅವರೇ, ಇವುಗಳಿಗೆ ಹಂಚಿಕೊಟ್ಟಿದ್ದಾರೆ, ಅವರ ಕೈಯೇ ನೂಲುಹಿಡಿದು ನಾಡನ್ನು ಇವುಗಳಿಗೆ ವಿಭಾಗಮಾಡಿದೆ; ಅದು ಇವುಗಳಿಗೆ ಶಾಶ್ವತ ಸೊತ್ತಾಗುವುದು, ತಲತಲಾಂತರಕ್ಕೂ ಅವು ಅಲ್ಲಿ ವಾಸಮಾಡುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಆತನೇ ಇವುಗಳಿಗೆ ಪಾಲುಮಾಡಿಕೊಟ್ಟಿದ್ದಾನೆ, ಆತನ ಕೈಯೇ ನೂಲುಹಾಕಿ ದೇಶವನ್ನು ಹಂಚಿದೆ; ಅದು ಇವುಗಳಿಗೆ ನಿತ್ಯಸ್ವಾಸ್ತ್ಯವಾಗುವದು, ಅವು ತಲತಲಾಂತರಕ್ಕೂ ಅಲ್ಲಿ ವಾಸಿಸುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಅವರೇ ಅವುಗಳಿಗೋಸ್ಕರ ಚೀಟು ಹಾಕಿದ್ದಾರೆ. ಅವರ ಕೈಯೇ ಅದನ್ನು ಗೆರೆ ಎಳೆದು, ಅವರಿಗೆ ಹಂಚಿಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿಕೊಳ್ಳುವುವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವುವು. ಅಧ್ಯಾಯವನ್ನು ನೋಡಿ |