ಯೆಶಾಯ 26:16 - ಪರಿಶುದ್ದ ಬೈಬಲ್16 ಯೆಹೋವನೇ, ಕಷ್ಟ ಬಂದಾಗ ಜನರಿಗೆ ನಿನ್ನ ನೆನಪಾಗುವುದು. ನೀನು ಅವರನ್ನು ಶಿಕ್ಷಿಸಿದಾಗ ಅವರು ನಿನಗೆ ಮೌನ ಪ್ರಾರ್ಥನೆ ಮಾಡುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಯೆಹೋವನೇ, ನಿನ್ನ ಜನರು ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಹುಡುಕಿದರು. ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಯೆಹೋವನೇ, [ನಿನ್ನ ಜನರು] ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಆಶ್ರಯಿಸಿದರು, ನಿನ್ನ ಶಿಕ್ಷೆಗೆ ಗುರಿಯಾಗಿ ಜಪಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಯೆಹೋವ ದೇವರೇ, ಇಕ್ಕಟ್ಟಿನಲ್ಲಿ ಅವರು ನಿಮ್ಮನ್ನು ಹುಡುಕಿದರು. ನಿಮ್ಮ ಶಿಕ್ಷೆ ಅವರ ಮೇಲಿರುವಾಗ, ಅವರು ಪ್ರಾರ್ಥನೆಯನ್ನು ಮಾಡಿದರು. ಅಧ್ಯಾಯವನ್ನು ನೋಡಿ |
ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ. ನಿಮ್ಮ ಹೃದಯವು ನೀರಿನಂತೆ ಹರಿಯಲಿ. ನಿಮ್ಮ ಹೃದಯಸಾರವನ್ನು ಯೆಹೋವನ ಸಮ್ಮುಖದಲ್ಲಿ ಹೊಯ್ದುಬಿಡಿರಿ. ನಿಮ್ಮ ಕೈಗಳನ್ನು ಮೇಲೆತ್ತಿ ಯೆಹೋವನಿಗೆ ಪ್ರಾರ್ಥಿಸಿರಿ. ನಿಮ್ಮ ಮಕ್ಕಳು ಬದುಕಲಿ ಎಂದು ಆತನನ್ನು ಕೇಳಿಕೊಳ್ಳಿರಿ. ಹಸಿವೆಯಿಂದ ಮೂರ್ಛೆಹೋಗುತ್ತಿದ್ದ ನಿಮ್ಮ ಮಕ್ಕಳ ಪ್ರಾಣ ಉಳಿಯಲಿ ಎಂದು ಆತನನ್ನು ಪ್ರಾರ್ಥಿಸಿರಿ. ಹಸಿವೆಯಿಂದ ಅವರು ನಗರದ ಎಲ್ಲ ಬೀದಿಗಳಲ್ಲಿ ಮೂರ್ಛೆಹೋಗುತ್ತಿದ್ದಾರೆ.
ಅವರು ಮರದ ತುಂಡುಗಳೊಡನೆ ಮಾತನಾಡಿ, ‘ನೀನು ನಮ್ಮ ತಂದೆ’ ಎಂದು ಹೇಳುವರು. ಆ ಜನರು ಕಲ್ಲುಬಂಡೆಯೊಂದಿಗೆ ಮಾತನಾಡಿ, ‘ನೀನು ನಮಗೆ ಜನ್ಮಕೊಟ್ಟ ತಾಯಿ’ ಎಂದು ಹೇಳುವರು. ಆ ಜನರೆಲ್ಲರು ನಾಚಿಕೆಪಡುವರು. ಅವರು ನನ್ನ ಕಡೆಗೆ ನೋಡುವದಿಲ್ಲ. ಅವರು ನನಗೆ ವಿಮುಖರಾಗಿದ್ದಾರೆ. ಆದರೆ ಯೆಹೂದದ ಜನರು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ, ‘ಬಾ ನಮ್ಮನ್ನು ರಕ್ಷಿಸು’ ಎಂದು ನನ್ನನ್ನು ಕೇಳುತ್ತಾರೆ.