ಯೆಶಾಯ 23:7 - ಪರಿಶುದ್ದ ಬೈಬಲ್7 ಹಿಂದಿನ ಕಾಲದಲ್ಲಿ ನೀವು ತೂರ್ ನಗರದಲ್ಲಿ ಉಲ್ಲಾಸಿಸಿದಿರಿ. ಪ್ರಾರಂಭದಿಂದಲೇ ಆ ನಗರವು ಅಭಿವೃದ್ಧಿಹೊಂದುತ್ತಿತ್ತು. ಆ ನಗರದ ಜನರು ಬಹುದೂರ ಪ್ರಯಾಣಮಾಡಿ ನೆಲೆಸಿರುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನಿಮ್ಮ ಉಲ್ಲಾಸದ ಪಟ್ಟಣವು ಇದೇನೋ? ಅದರ ಉತ್ಪತ್ತಿಯು ಪುರಾತನವಾದದ್ದೇ ಸರಿ; ಅವರ ಕಾಲುಗಳು ಅವರನ್ನು ದೂರ ದೇಶದಲ್ಲಿ ವಾಸಿಸುವುದಕ್ಕೆ ಕರೆದುಕೊಂಡು ಹೋಗುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಇದು ತಾನೋ, ನಿಮ್ಮ ವಸಾಹತುಗಳನ್ನು ನಿರ್ಮಿಸಿಕೊಳ್ಳಲು ಜನರನ್ನು ಕಳುಹಿಸಿದ ನಗರ ! ಇದರ ವರ್ತಕರು ಪ್ರಭುಗಳು ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನಿಮ್ಮ ಉಲ್ಲಾಸದ ಪಟ್ಟಣವು ಇದೇನೋ? ಅದರ ಉತ್ಪತ್ತಿಯು ಪುರಾತನವಾದದ್ದೇ ಸರಿ; ಅದರ ಜನರು ಮುಂದೆ ನಡೆದು ಅತಿ ದೂರದಲ್ಲಿಯೂ ನಿವಾಸಮಾಡಿಕೊಂಡಿದ್ದರಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ನಿಮ್ಮ ಉಲ್ಲಾಸದ ಪಟ್ಟಣವೂ, ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವುದಕ್ಕೆ ತೆಗೆದುಕೊಂಡು ಹೋಗುವವು. ಅಧ್ಯಾಯವನ್ನು ನೋಡಿ |