ಯೆಶಾಯ 22:16 - ಪರಿಶುದ್ದ ಬೈಬಲ್16 ಆ ಸೇವಕನನ್ನು ‘ನೀನಿಲ್ಲಿ ಏನು ಮಾಡುತ್ತಿರುವೆ? ನಿನ್ನ ಕುಟುಂಬದವರಲ್ಲಿ ಯಾರನ್ನಾದರೂ ಇಲ್ಲಿ ಸಮಾಧಿ ಮಾಡಿರುವಿಯಾ? ಇಲ್ಲಿ ಸಮಾಧಿಯನ್ನು ಯಾಕೆ ನಿರ್ಮಿಸಿರುವೆ? ಎಂದು ಕೇಳು.’” ಅದಕ್ಕೆ ಯೆಶಾಯನು, “ಈ ಮನುಷ್ಯನನ್ನು ನೋಡು. ಅವನು ತನ್ನ ಸಮಾಧಿಯನ್ನು ಎತ್ತರವಾದ ಸ್ಥಳದಲ್ಲಿ ಸಿದ್ಧಪಡಿಸುತ್ತಿದ್ದಾನೆ. ಅವನು ಸಮಾಧಿ ಸಿದ್ಧಪಡಿಸಲು ಬಂಡೆಯನ್ನು ಕೊರೆಯುತ್ತಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ‘ಇಲ್ಲಿ ನಿನಗೇನು ಕೆಲಸ? ಇಲ್ಲಿ ನಿನಗಾಗಿ ಸಮಾಧಿಯನ್ನು ತೋಡಿಸಿಕೊಂಡಿರುವ ನೀನು ಯಾರು? ಉನ್ನತದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ, ಬಂಡೆಯನ್ನು ಕೆತ್ತಿಸಿ, ನಿನಗಾಗಿ ವಿಶ್ರಾಂತಿಯ ಸ್ಥಳವನ್ನು ತೋಡಿಸಿದಿ ಅಲ್ಲವೇ?’” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ನಿನಗೇನು ಕೆಲಸವಿಲ್ಲಿ? ನಿನಗಾರಿಹರಿಲ್ಲಿ? ತೋಡಿಸಿಕೊಂಡಿರುವೆಯಾ ಗೂಡನ್ನಿಲ್ಲಿ? ಗೋರಿಯನ್ನು ಕೊರೆಯಿಸಿಕೊಂಡಿರುವೆಯಾ ಎತ್ತರದ ಬಂಡೆಯಲ್ಲಿ? ಕೆತ್ತಿಸಿಕೊಂಡಿರುವೆಯಾ ನಿನಗೊಂದು ನಿವಾಸವನಿಲ್ಲಿ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಇಲ್ಲಿ ನಿನಗೇನು? ಇಲ್ಲಿ ನಿನಗೆ ಯಾರಿದ್ದಾರೆ? ಇಲ್ಲಿ ನಿನಗಾಗಿ ಗೋರಿಯನ್ನು ತೋಡಿಸಿಕೊಂಡಿದ್ದೀಯಾ? ಎತ್ತರದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ ಬಂಡೆಯನ್ನು ಕಡೆಯಿಸಿ ನಿನಗೆ ನಿವಾಸವನ್ನು ಮಾಡಿಸುತ್ತಾ ಇದ್ದೀಯೋ? ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ನಿನಗೆ ಸಮಾಧಿಯನ್ನು ತೋಡಿಸಿದೆ, ಬಂಡೆಯಲ್ಲಿ ನಿನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದಿ ಅಲ್ಲವೇ? ಅಧ್ಯಾಯವನ್ನು ನೋಡಿ |
“ಮನುಷ್ಯನೇ, ಯೆಹೋವನು ನಿನ್ನನ್ನು ಧ್ವಂಸ ಮಾಡುವನು. ಆತನು ನಿನ್ನನ್ನು ಚೆಂಡಿನಂತೆ ಉರುಳಿಸಿ ಬಹುದೂರಕ್ಕೆ ಅಂದರೆ ಬೇರೊಂದು ದೇಶದ ತೆರೆದ ತೋಳುಗಳಿಗೆ ಎಸೆದುಬಿಡುವನು. ಅಲ್ಲಿ ನೀನು ಸಾಯುವೆ” ಎಂದು ಹೇಳಿದನು. ಅದಕ್ಕೆ ಯೆಹೋವನು, “ನೀನು ನಿನ್ನ ರಥಗಳಲ್ಲಿ ಹೆಚ್ಚಳಪಡುತ್ತಿರುವೆ. ಆದರೆ ಆ ದೂರದೇಶದಲ್ಲಿರುವ ನಿನ್ನ ಹೊಸ ಅರಸನ ಬಳಿಯಲ್ಲಿ ಇದಕ್ಕಿಂತಲೂ ಶ್ರೇಷ್ಠವಾದ ರಥಗಳಿವೆ. ಅವನ ಅರಮನೆಯಲ್ಲಿ ನಿನ್ನ ರಥಗಳು ಮುಖ್ಯವಾದವುಗಳಾಗಿರುವುದಿಲ್ಲ.