ಯೆಶಾಯ 2:9 - ಪರಿಶುದ್ದ ಬೈಬಲ್9 ಜನರು ಕೆಟ್ಟದಾರಿಯಲ್ಲಿ ಹೋಗುತ್ತಿದ್ದಾರೆ; ಹೀನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ. ದೇವರೇ, ನೀನು ಅವರನ್ನು ಖಂಡಿತವಾಗಿಯೂ ಕ್ಷಮಿಸಬೇಡ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಹೀಗಿರಲು ಜನರು ಅಧರ್ಮಿಗಳಾಗಲಿ, ಉತ್ತಮರಾಗಲಿ ತಗ್ಗಿಸಲ್ಪಡುವರು, ಪ್ರತಿ ಮನುಷ್ಯನು ಬಿದ್ದುಹೋಗುವನು. ನೀನು ಅವರನ್ನು ಸ್ವೀಕರಿಸಬೇಡ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಮಾನವನು ತಗ್ಗಿಹೋಗಿದ್ದಾನೆ, ಅಧೋಗತಿಗೆ ಇಳಿದಿದ್ದಾನೆ. ಸ್ವಾಮೀ, ಅವನಿಗೆ ಕ್ಷಮೆ ನೀಡಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಹೀಗಿರಲು ಅಧಮರಾಗಲಿ ಉತ್ತಮರಾಗಲಿ ತಗ್ಗಿಸಲ್ಪಡುವರು; (ಅವರನ್ನು ಕ್ಷವಿುಸಬೇಡ). ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆದ್ದರಿಂದ ಮನುಷ್ಯರು ನಮ್ರರಾಗುತ್ತಾರೆ; ಎಲ್ಲರೂ ತಲೆಬಾಗುತ್ತಾರೆ; ಅವರನ್ನು ಕ್ಷಮಿಸಬೇಡಿ. ಅಧ್ಯಾಯವನ್ನು ನೋಡಿ |
ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ.