ಯೆಶಾಯ 19:17 - ಪರಿಶುದ್ದ ಬೈಬಲ್17 ಯೆಹೂದ ಪ್ರಾಂತ್ಯದವರೂ ಈಜಿಪ್ಟಿನಲ್ಲಿರುವವರೂ ಭಯಪಡಬೇಕಾಗಿದೆ. ಈಜಿಪ್ಟಿನಲ್ಲಿ ಯಾರೇ ಆಗಲಿ ಯೆಹೂದದ ಹೆಸರು ಕೇಳಿದಾಗ ಭಯಪಡುವರು. ಯಾಕೆಂದರೆ ಭಯಂಕರ ಘಟನೆಗಳು ಈಜಿಪ್ಟಿನಲ್ಲಿ ಸಂಭವಿಸುವಂತೆ ಸರ್ವಶಕ್ತನಾದ ಯೆಹೋವನು ಮಾಡುತ್ತಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಐಗುಪ್ತವು ಬೆಚ್ಚಿಬೀಳುವುದಕ್ಕೆ ಯೆಹೂದ ದೇಶವೇ ಕಾರಣವಾಗುವುದು. ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಜುದೇಯ ನಾಡು ಈಜಿಪ್ಟಿನವರಿಗೆ ಭಯಂಕರವಾಗಿರುವುದು. ಆ ನಾಡಿನ ಹೆಸರನ್ನು ಕೇಳಿದ್ದೇ ತಡ, ಪ್ರತಿಯೊಬ್ಬನೂ ಬೆಚ್ಚಿಬೀಳುವನು. ಪ್ರತಿಯೊಬ್ಬನೂ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಈಜಿಪ್ಟಿನ ವಿರುದ್ಧ ಮಾಡಿರುವ ಸಂಕಲ್ಪವನ್ನು ತಿಳಿದು ನಿಬ್ಬೆರಗಾಗುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಮತ್ತು ಐಗುಪ್ತವು ಬೆಚ್ಚಿ ಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು. ಅಧ್ಯಾಯವನ್ನು ನೋಡಿ |