ಯೆಶಾಯ 18:4 - ಪರಿಶುದ್ದ ಬೈಬಲ್4 ಯೆಹೋವನು ಹೀಗೆನ್ನುತ್ತಾನೆ: “ನನಗಾಗಿ ಸಿದ್ಧಪಡಿಸಲ್ಪಟ್ಟ ಸ್ಥಳದಲ್ಲಿ ಮೌನವಾಗಿದ್ದು ಇವುಗಳನ್ನೆಲ್ಲಾ ವೀಕ್ಷಿಸುವೆನು. ಬೇಸಿಗೆಯ ಮಧ್ಯಾಹ್ನದ ಹೊತ್ತಿನಲ್ಲಿ ಜನರು ವಿಶ್ರಮಿಸುತ್ತಿರುವರು. ಅದು ಬೇಸಿಗೆಯ ಸುಗ್ಗಿಕಾಲವಾಗಿರುವದು; ಮಳೆ ಇರುವದಿಲ್ಲ, ಕೇವಲ ಮುಂಜಾನೆಯ ಇಬ್ಬನಿ ಇರುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯೆಹೋವನು ನನಗೆ ಹೇಳುವುದೇನೆಂದರೆ, “ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ, ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು” ಎಂಬುದೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ : “ಬಿಸಿಹಗಲಿನ ಸೂರ್ಯನಂತೆ, ಕೊಯಿಲುಗಾಲದಲ್ಲಿರುವ ಮಂಜಿನಂತೆ, ನಾನು ನನ್ನ ನಿವಾಸಸ್ಥಾನದಿಂದ ಸುಮ್ಮನೆ ನೋಡುತ್ತಿರುವೆನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯೆಹೋವನು ನನಗೆ ಹೇಳಿರುವದೇನಂದರೆ, ಬಿಸಿಲಿನಲ್ಲಿ ಜಳಜಳಿಸುವ ದಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂಬದೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಯೆಹೋವ ದೇವರು ನನಗೆ ಹೀಗೆ ಹೇಳಿದರು, “ನಾನು ನನ್ನ ವಿಶ್ರಾಂತಿಯನ್ನು ತೆಗೆದುಕೊಳ್ಳುವೆನು. ಬಿಸಿಹಗಲಿನ ಸೂರ್ಯನಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದಂತೆಯೂ ನಾನು ನನ್ನ ನಿವಾಸಸ್ಥಾನದಲ್ಲಿ ಸುಮ್ಮನೆ ನೋಡುತ್ತಿರುವೆನು.” ಅಧ್ಯಾಯವನ್ನು ನೋಡಿ |
ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನಿಗೆ ವಿಶೇಷವಾದ ಕಾಣಿಕೆಯು ಸಮರ್ಪಿಸಲ್ಪಡುವದು. ಆ ಕಾಣಿಕೆಯು ಉನ್ನತವಾಗಿರುವ ಬಲಶಾಲಿಗಳಾದ ಜನರಿಂದ ಬರುವದು. ಎಲ್ಲಾ ದೇಶಗಳ ಜನರು ಈ ಉನ್ನತವಾದ ಈ ಬಲಿಷ್ಠರಿಗೆ ಹೆದರುವರು. ಅವರು ಬಲಾಢ್ಯ ಜನಾಂಗವಾಗಿದ್ದಾರೆ. ಅವರ ಜನಾಂಗವು ಇತರ ಜನಾಂಗಗಳನ್ನು ಸೋಲಿಸುತ್ತದೆ. ಅವರ ದೇಶವು ನದಿಯ ಶಾಖೆಗಳಿಂದ ತುಂಬಿದೆ. ಈ ಕಾಣಿಕೆಯನ್ನು ಚೀಯೋನ್ ಪರ್ವತದಲ್ಲಿರುವ ಯೆಹೋವನ ಸ್ಥಳಕ್ಕೆ ತರುವರು.
ಆದರೆ ಯೆಹೋವನು ಹೇಳುವುದೇನೆಂದರೆ, “ನಿನ್ನ ಜನರು ಸತ್ತಿದ್ದಾರೆ. ಆದರೆ ಅವರು ಮತ್ತೆ ಬದುಕುವರು. ನನ್ನ ಜನರ ದೇಹಗಳು ಸತ್ತವರೊಳಗಿಂದ ಏಳುವವು. ಭೂಮಿಯ ಮೇಲೆ ಸತ್ತಿರುವ ಜನರೇ, ಎದ್ದುನಿಂತು ಸಂತೋಷಿಸಿರಿ. ನಿಮ್ಮನ್ನು ಆವರಿಸಿದ ಮಂಜು ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ. ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”
ದೇವರು ಉನ್ನತಸ್ಥಾನದಲ್ಲಿ ಎತ್ತಲ್ಪಟ್ಟಿದ್ದಾನೆ. ಆತನು ಸದಾಕಾಲ ಜೀವಿಸುತ್ತಾನೆ. ಆತನ ಹೆಸರು ಪರಿಶುದ್ಧವಾದದ್ದು. ದೇವರು ಹೇಳುವುದೇನೆಂದರೆ, “ನಾನು ಉನ್ನತಲೋಕವೆಂಬ ಪವಿತ್ರಸ್ಥಳದಲ್ಲಿ ವಾಸಿಸುತ್ತೇನೆ. ಅದೇ ಸಮಯದಲ್ಲಿ ದುಃಖಪಡುವವರೂ ದೀನರೂ ಆಗಿರುವ ಜನರೊಂದಿಗೆ ವಾಸಮಾಡುತ್ತೇನೆ. ಆತ್ಮದಲ್ಲಿ ದೀನರಾಗಿರುವವರಿಗೆ ನಾನು ಹೊಸಜನ್ಮ ಕೊಡುತ್ತೇನೆ. ಹೃದಯದಲ್ಲಿ ದುಃಖಿಸುವವರಿಗೆ ನಾನು ಹೊಸ ಜೀವ ಕೊಡುತ್ತೇನೆ.