Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 17:14 - ಪರಿಶುದ್ದ ಬೈಬಲ್‌

14 ಆ ರಾತ್ರಿ ಜನರು ಭಯಗ್ರಸ್ತರಾಗುವರು. ಬೆಳಗಾಗುವದರೊಳಗೆ ಏನೂ ಉಳಿಯುವದಿಲ್ಲ. ಹಾಗೆಯೇ ನಮ್ಮ ವೈರಿಗಳಿಗೆ ಏನೂ ದೊರಕುವದಿಲ್ಲ. ಅವರು ನಮ್ಮ ದೇಶಕ್ಕೆ ನುಗ್ಗಿದರೂ ಅವರಿಗೆ ಏನೂ ಸಿಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಇಗೋ, ಸಂಜೆಯಲ್ಲಿ ಹೆದರಿ ಉದಯದೊಳಗಾಗಿ ಇಲ್ಲವಾಗುವರು! ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಬೈಗಿನಲ್ಲಿ ಇಗೋ, ಎಲ್ಲೆಲ್ಲೂ ಭಯ, ಬೆಳಗಾದಾಗ ಅವೆಲ್ಲ ಮಾಯ; ಇದೇ ನಮ್ಮನ್ನು ಸೂರೆಮಾಡುವವರ ಗತಿ, ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು !.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ, ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಸಾಯಂಕಾಲದಲ್ಲಿ ಭಯಭ್ರಾಂತಿ, ಉದಯಕ್ಕೆ ಮುಂಚೆ ಅವು ಇಲ್ಲದಂತಾಗುವುದು. ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 17:14
24 ತಿಳಿವುಗಳ ಹೋಲಿಕೆ  

ಆ ರಾತ್ರಿ ಯೆಹೋವನ ದೂತನು ಹೊರಕ್ಕೆ ಹೋಗಿ, ಅಶ್ಶೂರದ ಶಿಬಿರದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಜನರನ್ನು ಕೊಂದುಹಾಕಿದನು. ಜನರು ಬೆಳಗಿನ ಜಾವದಲ್ಲಿ ಮೇಲಕ್ಕೆದ್ದಾಗ ಸತ್ತ ದೇಹಗಳನ್ನು ನೋಡಿದರು.


ಯಾಕೆಂದರೆ ಯೆಹೋವನು ಅವರ ಪರವಾಗಿ ವಾದಿಸುವನು; ಅವರನ್ನು ದರೋಡೆ ಮಾಡಬೇಕೆಂದಿರುವವರ ಪ್ರಾಣಗಳನ್ನು ತೆಗೆದುಹಾಕುವನು.


ಆದ್ದರಿಂದ ಅವರಿಗೆ ಅಡವಿಯಿಂದ ಮತ್ತು ಬಯಲಿನಿಂದ ಸೌದೆಯನ್ನು ತೆಗೆಯುವ ಅವಶ್ಯಕತೆ ಇರುವದಿಲ್ಲ. ಅವರು ಸತ್ತ ಸೈನಿಕರಿಂದ ಬೆಲೆಬಾಳುವ ವಸ್ತುಗಳನ್ನು ದೋಚುವರು. ತಮ್ಮಿಂದ ದೋಚಿದ ಸೈನಿಕರಿಂದ ಅವರು ದೋಚುವರು.” ಇದು ಒಡೆಯನಾದ ಯೆಹೋವನ ನುಡಿ.


ನಿಮ್ಮ ಗತಿ ಹೀಗಾಗುವುದು. ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.” ಇದು ಯೆಹೋವನ ನುಡಿ. “ಏಕೆ ಹೀಗಾಗುವದು? ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ. ಸುಳ್ಳುದೇವರುಗಳನ್ನು ನಂಬಿದಿರಿ.


ಇಸ್ರೇಲಿನ ಜನರು ಯೆಹೋವನಿಗೆ ಒಂದು ಪವಿತ್ರವಾದ ಕಾಣಿಕೆಯಾಗಿದ್ದರು. ಅವರು ಯೆಹೋವನ ಬೆಳೆಯ ಪ್ರಥಮ ಫಲವಾಗಿದ್ದರು. ಇಸ್ರೇಲಿನ ಜನರನ್ನು ಪೀಡಿಸಲು ಪ್ರಯತ್ನಿಸಿದವರನ್ನು ಯಾರಾದರೂ ಆಗಿರಲಿ, ದೋಷಿಗಳೆಂದು ನಿರ್ಣಯಿಸಲಾಗುತ್ತಿತ್ತು. ಆ ಕೆಟ್ಟ ಜನರಿಗೆ ಕೇಡಾಗುತ್ತಿತ್ತು.’” ಇದು ಯೆಹೋವನ ಸಂದೇಶ.


ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದ್ದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ:


ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು. ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.


ದುಷ್ಟರಿಗೆ ದೇವರು ಮಾಡುವುದು ಇದನ್ನೇ. ಅವರಿಗೆ ದೇವರು ಕೊಡುವುದೂ ಇದನ್ನೇ.”


ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ, ಇಂದು ಮಹಾಕಷ್ಟದ ದಿನವಾಗಿದೆ. ನಾವು ಶಿಕ್ಷೆಯನ್ನೂ ನಿಂದೆಯನ್ನೂ ಅನುಭವಿಸಬೇಕಾಯಿತು. ಇದು ಪ್ರಸವವೇದನೆಯ ದಿನದಂತಿದೆ. ಆದರೆ ಹೆರಲು ಶಕ್ತಿಯೇ ಇಲ್ಲವಾಗಿದೆ.


“ಯೆಹೋವನೇ, ನಿನ್ನ ವೈರಿಗಳೆಲ್ಲಾ ಹೀಗೇ ಸಾಯಲಿ; ಆದರೆ ನಿನ್ನನ್ನು ಪ್ರೀತಿಸುವವರೆಲ್ಲರೂ ಬಲವಾಗಿದ್ದು ಉದಯಿಸುವ ಸೂರ್ಯನಂತೆ ಬೆಳಗಲಿ!” ನಲವತ್ತು ವರ್ಷಗಳವರೆಗೆ ದೇಶದಲ್ಲಿ ಶಾಂತಿ ನೆಲೆಸಿತ್ತು.


ಆದರೆ ಸ್ವಲ್ಪ ಸಮಯದ ನಂತರ ನನ್ನ ಸಿಟ್ಟು ತಣ್ಣಗಾಗುವದು. ಅಶ್ಶೂರವು ಸಾಕಷ್ಟು ನಿಮ್ಮನ್ನು ಶಿಕ್ಷಿಸಿದನೆಂದು ನಾನು ತೃಪ್ತಿಗೊಳ್ಳುವೆನು.”


ನೆಲದ ಮೇಲೆ ಅನೇಕ ಅಪರಿಚಿತರು ಧೂಳಿನ ಕಣಗಳಂತೆ ಇದ್ದಾರೆ. ಅನೇಕ ಮಂದಿ ದುಷ್ಟಜನರು ಗಾಳಿಯಲ್ಲಿ ತೂರಿಹೋಗುವ ಹೊಟ್ಟಿನಂತಿದ್ದಾರೆ.


ಅರೀಯೇಲ್ ವಿರುದ್ಧವಾಗಿ ಅನೇಕಾನೇಕ ಜನಾಂಗಗಳು ಯುದ್ಧಮಾಡಿದರು. ಅವೆಲ್ಲಾ ರಾತ್ರಿಕಾಲದ ಭಯಂಕರ ಕನಸುಗಳಂತೆ ಇದ್ದವು. ಸೈನ್ಯವು ಅರೀಯೇಲ್‌ಗೆ ಮುತ್ತಿಗೆ ಹಾಕಿ ಅದನ್ನು ಶಿಕ್ಷಿಸಿದವು.


ಹಿಂದಿನ ಕಾಲದಲ್ಲಿ ನೀವು ಅನುಭವಿಸಿದ ಸಂಕಟಗಳನ್ನು ನೆನಪುಮಾಡಿಕೊಳ್ಳುವಿರಿ. ನೀವು ಹೀಗೆ ಭಾವಿಸಿಕೊಳ್ಳುವಿರಿ: “ಬೇರೆ ದೇಶಗಳಿಂದ ಬಂದ ಜನರೆಲ್ಲಿದ್ದಾರೆ? ನಮಗೆ ಅರ್ಥವಾಗದಂಥ ಭಾಷೆಯಲ್ಲಿ ಅವರು ಮಾತಾಡುತ್ತಿದ್ದರು. ಪರದೇಶದ ಅಧಿಕಾರಿಗಳು, ತೆರಿಗೆ ಎತ್ತುವವರು ಎಲ್ಲಿ? ನಮ್ಮ ಕೋಟೆಗಳನ್ನು, ಬುರುಜುಗಳನ್ನು ಲೆಕ್ಕಿಸಲು ಬಂದ ಗೂಢಚಾರರೆಲ್ಲಿ? ಅವರೆಲ್ಲಾ ಹೋಗಿಬಿಟ್ಟರು. ನೀವೆಂದೂ ಆ ಜನರನ್ನು ಕಾಣದೆ ಇರುವಿರಿ.”


ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರ್ಷವರ್ಷವೂ ಅವುಗಳು ಅಲ್ಲಿಯೇ ವಾಸಮಾಡುವವು.


ನಿನಗೆ ವಿರುದ್ಧವಾಗಿದ್ದ ಜನರನ್ನು ನೀನು ಹುಡುಕುವೆ. ಆದರೆ ಅವರು ನಿನಗೆ ಕಾಣಿಸುವುದಿಲ್ಲ. ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ಕಾಣದೆಹೋಗುವರು.


ಆದರೆ ಏಸಾವನಿಂದ ನಾನು ಎಲ್ಲವನ್ನು ಕಿತ್ತುಕೊಳ್ಳುವೆನು. ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನ್ನು ನಾನು ಪತ್ತೆ ಹಚ್ಚುವೆನು. ಅವನು ನನ್ನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಅವನ ಮಕ್ಕಳು, ಬಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.


ಅದಕ್ಕೆ ಕಾವಲುಗಾರ, “ಮುಂಜಾನೆ ಬರುತ್ತಿದೆ. ಆದರೆ ರಾತ್ರಿ ತಿರುಗಿ ಬರುತ್ತಿದೆ. ನೀನೇನಾದರೋ ಕೇಳಬೇಕಿದ್ದರೆ ಮತ್ತೆ ಬಂದು ವಿಚಾರಿಸು” ಎಂದು ಉತ್ತರಿಸಿದನು.


ನಾನು ಅರೀಯೇಲನ್ನು ಶಿಕ್ಷಿಸಿದ್ದೇನೆ. ಆ ನಗರವು ದುಃಖರೋಧನಗಳಿಂದ ತುಂಬಿದೆ. ಆದರೆ ಆಕೆ ಯಾವಾಗಲೂ ನನ್ನ ಅರೀಯೇಲಾಗಿದ್ದಾಳೆ.


ಆತನ ಶ್ವಾಸವು (ಆತ್ಮ) ಒಂದು ಮಹಾನದಿಯಂತಿರುವದು. ಅದರ ನೀರು ಕುತ್ತಿಗೆಯ ತನಕ ಏರುವದು. ಯೆಹೋವನು ಜನಾಂಗಗಳಿಗೆ ನ್ಯಾಯತೀರಿಸುವನು. ಅವುಗಳನ್ನು ಜರಡಿಯಿಂದ ಜಾಲಾಡಿಸುವನು. ಯೆಹೋವನು ಅವುಗಳನ್ನು ನಿಯಂತ್ರಿಸುವನು. ಅದು ಪ್ರಾಣಿಗಳನ್ನು ನಿಯಂತ್ರಿಸುವ ಬಾಯಿಯಲ್ಲಿ ಹಾಕುವ ಕಡಿವಾಣದಂತಿರುವದು.


ಯೆಹೋವನು ತಿರುಗಿ ಜೆರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು. ಯೆಹೂದವು ಆ ಪವಿತ್ರ ದೇಶದಲ್ಲಿರುವ ಆತನ ಪಾಲು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು