ಯೆಶಾಯ 14:22 - ಪರಿಶುದ್ದ ಬೈಬಲ್22 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 “ನಾನು ಅವರ ವಿರುದ್ಧವಾಗಿ ಏಳುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ನಾನು ಬಾಬೆಲಿನಿಂದ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಸಂತತಿಯನ್ನೂ ನಿರ್ಮೂಲ ಮಾಡುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ನುಡಿಗಳು : “ನಾನವರಿಗೆ ವಿರುದ್ಧವಾಗಿ ಎದ್ದು ನಿರ್ನಾಮಮಾಡುವೆನು, ಬಾಬಿಲೋನಿನ ಹೆಸರನು, ಜನಶೇಷವನು, ಪುತ್ರಪೌತ್ರರನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಸೇನಾಧೀಶ್ವರನಾದ ಯೆಹೋವನಿಂದ ಒಂದು ಮಾತು ಹೊರಟಿತು - ನಾನು ಅವರಿಗೆ ವಿರುದ್ಧವಾಗಿ ಎದ್ದು ಬಾಬೆಲಿನಿಂದ ಹೆಸರನ್ನೂ ಜನಶೇಷವನ್ನೂ ಪುತ್ರ ಪೌತ್ರರನ್ನೂ ಕತ್ತರಿಸಿಬಿಡುವೆನು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 “ಅವರಿಗೆ ವಿರುದ್ಧವಾಗಿ ಏಳುತ್ತೇನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಬಾಬಿಲೋನಿನಿಂದ ಆಕೆಯ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಮಕ್ಕಳನ್ನೂ ಅದರ ಸಂತತಿಯವರನ್ನೂ ನಿರ್ಮೂಲ ಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |