ಯೆಶಾಯ 14:13 - ಪರಿಶುದ್ದ ಬೈಬಲ್13 ನೀನು ಯಾವಾಗಲೂ ನಿನ್ನೊಳಗೆ, “ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು. ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು. ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು. ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಆಕಾಶಕ್ಕೆ ಏರಿ, ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಘನತೆಗೇರಿಸಿ, ಉತ್ತರದಿಕ್ಕಿನ ಕಟ್ಟಕಡೆಯಿರುವ ಸಮೂಹ ಪರ್ವತದ ಮೇಲೆ ಆಸೀನನಾಗುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ‘ಹತ್ತಿಹೋಗುವೆನು ನಾನು ಆಕಾಶಮಂಡಲಕೆ ಉತ್ತರದಿಕ್ಕಿನ ಕೊನೆಗಿರುವ ಸುರಗಣ ಪರ್ವತಕ್ಕೆ ಎತ್ತುವೆ ಸಿಂಹಾಸನವನ್ನು ದೇವ ನಕ್ಷತ್ರಗಳ ಮೇಲಕೆ ‘ಕುಳಿತಲ್ಲಿ ರಾಜ್ಯವಾಳುವೆ’ ಎಂದುಕೊಂಡೆ ನಿನ್ನೊಳಗೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನೀನು ನಿನ್ನ ಮನಸ್ಸಿನಲ್ಲಿ - ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನನಾಗುವೆನು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ, “ನಾನು ಆಕಾಶಕ್ಕೆ ಏರಿ, ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು. ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ ನಾನು ಆಸೀನನಾಗುವೆನು. ಅಧ್ಯಾಯವನ್ನು ನೋಡಿ |
ಈ ನಿನೆವೆಯು ಸಂತೋಷಭರಿತ ನಗರಿಯಾಗಿದೆ. ಅದರ ನಿವಾಸಿಗಳು ತಾವು ಸುರಕ್ಷಿತರಾಗಿದ್ದೇವೆಂದು ತಿಳಿದಿದ್ದಾರೆ. ನಿನೆವೆಯು ಲೋಕದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಳವೆಂದು ತಿಳಿದಿದ್ದಾರೆ. ಅವರು ಬಹಳ ಗರ್ವಪಡುತ್ತಾರೆ. ಆದರೆ ಆ ನಗರವು ನಾಶವಾಗುವದು. ಕಾಡುಮೃಗಗಳ ಹಕ್ಕೆಯಾಗುವದು. ದಾಟಿಹೋಗುವ ಜನರು, ತಮ್ಮ ಆಶ್ಚರ್ಯವನ್ನು ಸಿಳ್ಳುಹಾಕಿ ತಲೆಯಾಡಿಸಿ “ಎಂಥಾ ದುರ್ಗತಿ” ಎಂದು ಉದ್ಗರಿಸುವರು.
ಎದೋಮೇ, ನೀನು ಬೇರೆ ಜನಾಂಗಗಳನ್ನು ಹೆದರಿಸಿದೆ. ಆದ್ದರಿಂದ ನೀನು ನಿನ್ನನ್ನೇ ಪ್ರಮುಖನೆಂದು ಭಾವಿಸಿಕೊಂಡೆ. ಆದರೆ ಅದು ನಿನ್ನ ಮೂರ್ಖತನ. ನಿನ್ನ ಅಹಂಭಾವ ನಿನಗೆ ಮೋಸಮಾಡಿದೆ. ಎದೋಮೇ, ನೀನು ಎತ್ತರದ ಬೆಟ್ಟಗಳಲ್ಲಿರುವೆ. ಬೆಟ್ಟಗುಡ್ಡಗಳಿಂದ ರಕ್ಷಿತವಾದ ಸ್ಥಳಗಳಲ್ಲಿ ನೀನು ವಾಸಿಸುವೆ. ಆದರೆ ರಣಹದ್ದು ಗೂಡುಕಟ್ಟುವಷ್ಟು ಎತ್ತರದ ಸ್ಥಳದಲ್ಲಿ ನೀನು ಮನೆಕಟ್ಟಿದರೂ ನಾನು ನಿನ್ನನ್ನು ಹಿಡಿಯುತ್ತೇನೆ. ಅಲ್ಲಿಂದ ನಿನ್ನನ್ನು ಕೆಳಗೆ ತರುತ್ತೇನೆ.” ಇದು ಯೆಹೋವನ ನುಡಿ.
“ಉತ್ತರದ ರಾಜನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡುವನು; ಬಡಾಯಿ ಕೊಚ್ಚಿಕೊಳ್ಳುವನು. ಅವನು ತನ್ನನ್ನು ತಾನು ಹೊಗಳಿಕೊಳ್ಳುವನು ಮತ್ತು ದೇವರಿಗಿಂತ ತಾನು ಹೆಚ್ಚಿನವನೆಂದು ಭಾವಿಸುವನು. ಅವನು ಯಾರೂ ಎಂದೂ ಕೇಳದ ಸಂಗತಿಗಳನ್ನು ಹೇಳುವನು. ಅವನು ಮಹೋನ್ನತನಾದ ದೇವರ ವಿರುದ್ಧವಾಗಿ ಅಂತಹ ಸಂಗತಿಗಳನ್ನು ಹೇಳುವನು. ಎಲ್ಲ ಕೆಟ್ಟ ಸಂಗತಿಗಳು ಜರಗುವವರೆಗೂ ಅವನು ಜಯ ಪಡೆಯುವನು. ಏನು ನಡೆಯಬೇಕೆಂದು ದೇವರು ನಿಶ್ಚಯ ಮಾಡಿರುವನೋ ಅದು ನಡೆಯುವದು.