ಆಗ ಅವರು, ‘ನೀನು ದುಃಖದಿಂದ ಅಳುವದೇಕೆ?’ ಎಂದು ವಿಚಾರಿಸುವರು. ಆಗ ನೀನು ಹೀಗೆ ಹೇಳಬೇಕು: ‘ಭೀತಿಯನ್ನು ಉಂಟು ಮಾಡುವ ವಾರ್ತೆ ಬರುವದರಿಂದ ಎಲ್ಲರ ಹೃದಯಗಳು ಭಯದಿಂದ ಕರಗಿಹೋಗಿರುತ್ತವೆ; ಕೈಗಳು ಬಲಹೀನವಾಗುತ್ತವೆ. ಪ್ರತಿ ಮನುಷ್ಯನ ಆತ್ಮವು ಕೃಶವಾಗುವುದು. ಮೊಣಗಂಟುಗಳು ನೀರಿನಂತಿರುವವು.’ ನೋಡಿ, ಆ ಕೆಟ್ಟ ಸುದ್ದಿಯು ಬರುತ್ತಲಿದೆ. ಇವೆಲ್ಲಾ ನಡೆಯುವವು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.