Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 12:2 - ಪರಿಶುದ್ದ ಬೈಬಲ್‌

2 ದೇವರು ನನ್ನನ್ನು ರಕ್ಷಿಸುತ್ತಾನೆ. ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ. ಯೆಹೋವನೇ ನನ್ನ ಬಲವು. ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇಗೋ, ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸವಿಡುವೆನು; ಯೆಹೋವನೇ ನನ್ನ ಬಲವೂ, ಕೀರ್ತನೆಯೂ ಆತನೇ, ನನಗೆ ರಕ್ಷಣೆಯೂ ಆಗಿದ್ದಾನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ದೇವರೇ ಉದ್ಧಾರಕನೆನಗೆ ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ. ದೇವಾದಿದೇವನೇ ಎನಗೆ ಶಕ್ತಿ ಆತನೆನ್ನ ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇಗೋ ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸಪಡುವೆನು; ನನ್ನ ಬಲವೂ ಕೀರ್ತನೆಯೂ ಯಾಹುಯೆಹೋವನಷ್ಟೆ, ಆತನೇ ನನಗೆ ರಕ್ಷಕನಾದನು ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಿಜವಾಗಿಯೂ ದೇವರೇ ನನಗೆ ರಕ್ಷಣೆಯು, ನಾನು ಭರವಸವಿಡುವೆನು ಮತ್ತು ಭಯಪಡೆನು. ಕರ್ತರಾದ ಯೆಹೋವ ದೇವರೇ ನನ್ನ ಬಲವೂ ನನ್ನ ಕೀರ್ತನೆಯೂ, ಅವರೇ ನನಗೆ ರಕ್ಷಣೆಯೂ ಆಗಿದ್ದಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 12:2
41 ತಿಳಿವುಗಳ ಹೋಲಿಕೆ  

ಯೆಹೋವನೇ ನನ್ನ ಬಲ, ಆತನು ನನ್ನನ್ನು ರಕ್ಷಿಸುತ್ತಾನೆ. ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನನಗೆ ರಕ್ಷಣೆ ಆಯಿತು. ಯೆಹೋವನು ನನ್ನ ದೇವರು. ಮತ್ತು ನಾನು ಆತನನ್ನು ಸ್ತುತಿಸುತ್ತೇನೆ. ಯೆಹೋವನೇ ನಮ್ಮ ಪೂರ್ವಿಕರ ದೇವರು. ನಾನು ಆತನನ್ನು ಸನ್ಮಾನಿಸುತ್ತೇನೆ.


ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ. ನಾನು ಯಾರಿಗೂ ಭಯಪಡಬೇಕಿಲ್ಲ! ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ. ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!


ನನ್ನ ಬಲವೂ ಜಯಗೀತೆಯೂ ಯೆಹೋವನೇ. ಆತನೇ ನನ್ನನ್ನು ರಕ್ಷಿಸುವನು!


ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು.


ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು. ಯೆಹೋವನೇ, ನಾನು ನಿನಗೆ ಯಜ್ಞವನ್ನರ್ಪಿಸುವೆನು. ನಾನು ನಿನ್ನನ್ನು ಕೊಂಡಾಡಿ ಸ್ತೋತ್ರಸಲ್ಲಿಸುವೆನು. ನಾನು ನಿನಗೆ ವಿಶೇಷವಾದ ಹರಕೆಗಳನ್ನು ಮಾಡುವೆನು. ನಾನು ಕೊಟ್ಟ ವಚನಗಳನ್ನು ಪಾಲಿಸುವೆನು.”


ಆದರೆ ಇಸ್ರೇಲು ಯೆಹೋವನಿಂದ ರಕ್ಷಿಸಲ್ಪಡುವದು. ಆ ರಕ್ಷಣೆಯು ಶಾಶ್ವತವಾದದ್ದು. ಇನ್ನೆಂದಿಗೂ ಇಸ್ರೇಲ್ ನಾಚಿಕೆಗೆ ಒಳಗಾಗುವದಿಲ್ಲ.


ಸದ್ಧರ್ಮದ ‘ಸಸಿಯ’ ಸಮಯದಲ್ಲಿ ಯೆಹೂದದ ಜನರು ರಕ್ಷಿಸಲ್ಪಡುವರು ಮತ್ತು ಇಸ್ರೇಲ್ ಸುರಕ್ಷಿತವಾಗಿರುವುದು. ಯೆಹೋವನೇ, ನಮ್ಮ ಸದ್ಧರ್ಮ ಎಂಬ ಹೆಸರು ಅವನಿಗಾಗುವುದು.”


ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು. ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು. ಇಸ್ರೇಲಿನ ರಕ್ಷಣೆ ಖಚಿತವಾಗಿಯೂ ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.


ಆಗ ಅವರು ನೀನೊಬ್ಬನೇ ದೇವರೆಂದೂ ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು. ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ ದೇವರೆಂದು ಅವರು ಅರಿತುಕೊಳ್ಳುವರು.


ನಿಸ್ಸಂದೇಹವಾಗಿಯೂ ನಮ್ಮ ಆರಾಧನಾ ಜೀವಿತದ ರಹಸ್ಯವು ಮಹೋನ್ನತವಾದದ್ದು: ಕ್ರಿಸ್ತನು ಮಾನವ ದೇಹದಲ್ಲಿ ನಮಗೆ ಪ್ರತ್ಯಕ್ಷನಾದನು. ಆತನೇ ಕ್ರಿಸ್ತನೆಂದು ಪವಿತ್ರಾತ್ಮನು ನಿರೂಪಿಸಿದನು. ದೇವದೂತರಿಗೆ ಆತನು ಕಾಣಿಸಿಕೊಂಡನು. ಆತನನ್ನು ಕುರಿತ ಸುವಾರ್ತೆಯನ್ನು ಜನಾಂಗಗಳವರಿಗೆಲ್ಲ (ಯೆಹೂದ್ಯರಲ್ಲದವರಿಗೆ) ಪ್ರಸಿದ್ಧಿಪಡಿಸಲಾಯಿತು. ಲೋಕದಲ್ಲಿರುವ ಜನರು ಆತನಲ್ಲಿ ನಂಬಿಕೆಯಿಟ್ಟರು. ಆತನು ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.


ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ.


ಆದರೆ ನಾನು ಯೆಹೂದ ದೇಶಕ್ಕೆ ಕರುಣೆಯನ್ನು ತೋರಿಸುವೆನು. ನಾನು ಅವರನ್ನು ರಕ್ಷಿಸುವೆನು. ಅವರನ್ನು ರಕ್ಷಿಸಲು ನಾನು ಬಿಲ್ಲುಬಾಣಗಳನ್ನು ಉಪಯೋಗಿಸುವದಿಲ್ಲ. ಅಥವಾ ಯುದ್ಧಾಶ್ವಗಳನ್ನಾಗಲಿ ಸೈನ್ಯವನ್ನಾಗಲಿ ಉಪಯೋಗಿಸುವದಿಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದಲೇ ನಾನು ಅವರನ್ನು ರಕ್ಷಿಸುವೆನು.”


ಇಗೋ, ಯೆಹೋವನು ದೂರದೇಶಗಳವರಿಗೆ ಹೇಳುವುದೇನೆಂದರೆ, “ಚೀಯೋನಿನ ಜನರಿಗೆ ತಿಳಿಸಿರಿ: ‘ನೋಡು, ನಿನ್ನ ರಕ್ಷಕನು ಬರುತ್ತಿದ್ದಾನೆ. ತನ್ನ ಕೈಯಲ್ಲಿ ನಿನಗೆ ಪ್ರತಿಫಲವನ್ನು ತೆಗೆದುಕೊಂಡು ಬರುತ್ತಿದ್ದಾನೆ.’”


ಹೀಗಿದ್ದಲ್ಲಿ ರಾಜನು ಮಳೆಯಲ್ಲಿ ಆಶ್ರಯ ಸ್ಥಳವಾಗಿಯೂ ಗಾಳಿಯಲ್ಲಿ ಮರೆಯಂತೆಯೂ ಮರುಭೂಮಿಯಲ್ಲಿ ಒರತೆಯಂತೆಯೂ ಬೆಂಗಾಡಿನಲ್ಲಿ ಬಂಡೆಯ ನೆರಳಿನಂತೆಯೂ ಇರುವನು.


ನನ್ನ ಒಡೆಯನಾದ ದೇವರು ನಿಮಗೊಂದು ಗುರುತನ್ನು ಕೊಡುವನು: ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನಿಗೆ ಜನ್ಮ ನೀಡುವಳು. ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.


ಹನ್ನಳು ಇಂತೆಂದಳು: “ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ. ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ. ನಾನು ನನ್ನ ಶತ್ರುಗಳ ಬಗ್ಗೆ ನಗುವೆನು. ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.


ನಾನು ನಿರಪರಾಧಿಯೆಂದು ಆಗ ರುಜುವಾತಾಗುವುದು. ಯಾಕೆಂದರೆ, ದೇವರನ್ನು ಮುಖಾಮುಖಿಯಾಗಿ ಸಂಧಿಸಲು ದುಷ್ಟನಿಗೆ ಸಾಧ್ಯವೇ ಇಲ್ಲ.


ಅವನ ಮನಸ್ಸು ದೃಢವಾಗಿರುವುದರಿಂದ ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.


ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಹೇಳುವುದೇನೆಂದರೆ: “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಅಶ್ಶೂರಕ್ಕೆ ನೀವು ಭಯಪಡಬೇಡಿ. ಹಿಂದಿನ ಕಾಲದಲ್ಲಿ ಈಜಿಪ್ಟ್ ನಿಮ್ಮನ್ನು ಬಾಧಿಸಿದಂತೆ ಇವನೂ ನಿಮ್ಮನ್ನು ಬಾಧಿಸುವನು. ಅವನ ಬಾಧೆಯು ನಿಮ್ಮ ಬೆನ್ನಿನ ಮೇಲೆ ಬೆತ್ತದಿಂದ ಹೊಡೆದಂತೆ ಇರುವದು.


ನೀವು ನಿಮ್ಮ ರಕ್ಷಕನಾದ ದೇವರನ್ನು ಮರೆತುಬಿಟ್ಟಿದ್ದರಿಂದ ನಿಮಗೆ ಹೀಗೆ ಆಗುವದು. ದೇವರು ನಿಮ್ಮ ಆಶ್ರಯದುರ್ಗವಾಗಿದ್ದಾನೆಂಬುದನ್ನು ನೀವು ನೆನಪು ಮಾಡಿಕೊಳ್ಳಲಿಲ್ಲ. ದೂರದ ಪ್ರಾಂತ್ಯದಿಂದ ನೀವು ಉತ್ತಮ ತಳಿಯ ದ್ರಾಕ್ಷಿಯನ್ನು ತಂದಿರಿ. ಅದನ್ನು ನೀವು ನೆಟ್ಟರೂ ಅವು ಚಿಗುರುವದಿಲ್ಲ.


ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.


ನಾನು ಯೆಹೋವನ ಸೇವಕನಾಗಿರಬೇಕೆಂದು ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು. ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು ಆತನು ನನ್ನನ್ನು ರೂಪಿಸಿದನು. ಯೆಹೋವನು ನನ್ನನ್ನು ಸನ್ಮಾನಿಸುವನು. ನಾನು ಆತನಿಂದ ಬಲವನ್ನು ಹೊಂದುವೆನು.


ಯೆಹೋವನನ್ನು ಗೌರವಿಸುವ ಜನರು ಆತನ ಸೇವಕನ ಮಾತನ್ನು ಕೇಳುವರು. ಆ ಸೇವಕನು ಮುಂದೆ ಸಂಭವಿಸುವುದರ ಬಗ್ಗೆ ಚಿಂತೆ ಇಲ್ಲದೆ ಸಂಪೂರ್ಣವಾಗಿ ದೇವರ ಮೇಲೆ ನಂಬಿಕೆ ಇಡುವನು. ಅವನು ಪರಿಪೂರ್ಣವಾಗಿ ಯೆಹೋವನ ಹೆಸರಿನಲ್ಲಿ ನಂಬಿಕೆ ಇಟ್ಟು ತನ್ನ ದೇವರ ಮೇಲೆ ಅವಲಂಬಿಸಿಕೊಳ್ಳುವನು.


ಯೆಹೋವನು ನನ್ನನ್ನು ಸಂತೋಷಭರಿತನನ್ನಾಗಿ ಮಾಡುತ್ತಾನೆ. ನನ್ನ ಸಂಪೂರ್ಣ ವ್ಯಕ್ತಿತ್ವವು ನನ್ನ ದೇವರಲ್ಲಿ ಸಂತೋಷಿಸುತ್ತದೆ. ಯೆಹೋವನು ರಕ್ಷಣೆಯೆಂಬ ವಸ್ತ್ರವನ್ನು ನನಗೆ ತೊಡಿಸಿದ್ದಾನೆ. ಮದುವೆಯಲ್ಲಿ ಮದುಮಗನು ಧರಿಸಿಕೊಳ್ಳುವ ಬಟ್ಟೆಯಂತೆ ಅದು ನಯವಾಗಿದೆ. ಯೆಹೋವನು ನನಗೆ ನೀತಿಯೆಂಬ ನಿಲುವಂಗಿಯನ್ನು ತೊಡಿಸಿರುತ್ತಾನೆ. ಅದು ಮದುಮಗಳು ಮದುವೆಯಲ್ಲಿ ಧರಿಸಿಕೊಳ್ಳುವ ಬಟ್ಟೆಯಂತಿದೆ.


ನನ್ನ ಜನರು ಸಂತೋಷದಲ್ಲಿರುವರು. ಅವರು ನಿತ್ಯಕಾಲಕ್ಕೂ ಹರ್ಷಿಸುವರು. ನಾನು ಜೆರುಸಲೇಮನ್ನು ಸಂತಸದಿಂದ ತುಂಬಿಸುವೆನು. ಅವರನ್ನು ಸಂತೋಷದ ಜನರನ್ನಾಗಿ ಮಾಡುವೆನು.


ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳ ದೇವರಿಗೆ ಸ್ತೋತ್ರವಾಗಲಿ. ಅವರ ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರನ್ನು ಬೆಂಕಿಯಿಂದ ರಕ್ಷಿಸಿದ್ದಾನೆ. ಈ ಮೂರು ಜನರು ತಮ್ಮ ದೇವರ ಮೇಲೆ ವಿಶ್ವಾಸವಿಟ್ಟರು. ಅವರು ನನ್ನ ಆಜ್ಞೆಯನ್ನು ಪಾಲಿಸಲು ಒಪ್ಪಲಿಲ್ಲ. ಬೇರೆ ಯಾವ ದೇವರನ್ನೂ ಪೂಜಿಸುವುದಕ್ಕೆ ಅಥವಾ ಸೇವಿಸುವುದಕ್ಕೆ ಬದಲಾಗಿ ಸಾಯಲು ಅವರು ಸಿದ್ಧರಾಗಿದ್ದರು.


ಆದ್ದರಿಂದ ಚೀಯೋನಿನ ಜನರೇ, ಸಂತೋಷಪಡಿರಿ. ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ. ಆತನು ನಿಮಗೆ ಮಳೆ ಸುರಿಸುವನು. ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು.


ನಾನು ಯೆಹೋವನಲ್ಲಿ ಸಂತೋಷಿಸುವೆನು. ನನ್ನ ರಕ್ಷಕನಾದ ದೇವರಲ್ಲಿ ಸಂತೋಷಪಡುವೆನು.


ಇಸ್ರೇಲಿನ ಜನರನ್ನು ಎಂದೆಂದಿಗೂ ನಿನ್ನ ಸ್ವಂತ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನು ಅವರಿಗಾಗಿ ದೇವರಾದೆ.


ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ. ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.


ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ. ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು.


ದೇವರು ತನ್ನ ವೈರಿಗಳ ಶಿರಸ್ಸುಗಳನ್ನೂ ಪಾಪದಲ್ಲಿ ಜೀವಿಸುವವರ ತಲೆಗಳನ್ನೂ ಜಜ್ಜಿಬಿಡುವನು.


ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.


ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು. ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”


ಯೆಹೋವನು ಹೇಳುವುದೇನೆಂದರೆ, “ನಿನ್ನನ್ನು ಸಂತೈಸುವಾತನು ನಾನೇ. ಆದ್ದರಿಂದ ನೀನು ಜನರಿಗೆ ಯಾಕೆ ಹೆದರಬೇಕು. ಅವರು ಹುಟ್ಟಿ ಸಾಯುವ ನರರಾಗಿದ್ದಾರೆ. ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು