64 ಆಮೇಲೆ ‘ಇದೇ ರೀತಿಯಲ್ಲಿ ಬಾಬಿಲೋನ್ ಕೂಡ ಮುಳುಗಿಹೋಗುವುದು. ಬಾಬಿಲೋನ್ ಎಂದಿಗೂ ಮೇಲಕ್ಕೆ ಏಳುವದಿಲ್ಲ. ಅಲ್ಲಿ ನಾನು ಬರಮಾಡುವ ಅನೇಕ ವಿಪತ್ತುಗಳಿಂದಾಗಿ ಬಾಬಿಲೋನ್ ಮುಳುಗಿಹೋಗುವುದು’” ಎಂದು ಹೇಳು. ಯೆರೆಮೀಯನ ಸಂದೇಶ ಇಲ್ಲಿಗೆ ಮುಗಿಯುತ್ತದೆ.
64 ಯೆಹೋವನು ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಆ ಪಟ್ಟಣವೂ ಹೀಗೆಯೇ ಮುಳುಗುವುದು, ಮತ್ತೆ ಏಳದು” ಎಂದು ಹೇಳು ಎಂದನು. ಜನರು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವುದು ಎಂಬ ಮಾತಿನವರೆಗೆ ಯೆರೆಮೀಯನ ಪ್ರವಾದನೆಯಾಯಿತು.
ಸರ್ವಶಕ್ತನಾದ ಯೆಹೋವನು ಹೀಗೆನ್ನುವನು: “ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು. ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು. ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು. ಆದರೆ ಅದು ನಿಷ್ಪ್ರಯೋಜಕವಾಗುವುದು. ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು. ಆದರೆ ಅವರು ಕೇವಲ ಅಗ್ನಿಗೆ ಆಹುತಿಯಾಗುವರು.”
ನಂತರ ಬಲಿಷ್ಠನಾದ ದೇವದೂತನೊಬ್ಬನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಸುವ ಕಲ್ಲಿನಂತಿತ್ತು. ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ಎಸೆದು ಹೀಗೆ ಹೇಳಿದನು: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಕೆಳಕ್ಕೆ ಎಸೆಯಲ್ಪಡುವುದು. ಆ ನಗರಿಯು ಮತ್ತೆಂದಿಗೂ ಕಾಣಿಸುವುದಿಲ್ಲ.
ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು: “ಅವಳು ನಾಶವಾದಳು! ಬಾಬಿಲೋನೆಂಬ ಮಹಾನಗರಿಯು ನಾಶವಾದಳು! ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು, ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು, ಅಶುದ್ಧವಾದ ಮತ್ತು ಅಸಹ್ಯವಾದ ಸಕಲ ಹಕ್ಕಿಗಳಿಗೆ ಆಶ್ರಯವಾದಳು.”
ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.
“ಯೆರೆಮೀಯನೇ, ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನಾಂಗಗಳಿಗೆ ಹೇಳು: ‘ನನ್ನ ರೋಷದ ಈ ಪಾತ್ರೆಯಿಂದ ಕುಡಿಯಿರಿ, ಕುಡಿದು ಅಮಲೇರಿ ವಾಂತಿಮಾಡಿಕೊಳ್ಳಿ, ಕೆಳಗೆ ಬಿದ್ದು ಮೇಲಕ್ಕೆ ಏಳದಿರಿ, ಏಕೆಂದರೆ ನಾನು ನಿಮ್ಮನ್ನು ಕೊಲ್ಲಲು ಒಂದು ಖಡ್ಗವನ್ನು ಕಳುಹಿಸುತ್ತಿದ್ದೇನೆ.’
ನಿನಗೆ ಅನೇಕಾನೇಕ ಸಲಹೆಗಾರರಿದ್ದಾರೆ. ಅವರು ನಿನಗೆ ಕೊಡುವ ಸಲಹೆಗಳಿಂದ ನೀನು ಬೇಸರಗೊಂಡಿರುವಿಯಾ? ಹಾಗಾದರೆ ನಿನ್ನಲ್ಲಿರುವ ಖಗೋಳಶಾಸ್ತ್ರಜ್ಞರನ್ನು ಕರೆಯಿಸು. ತಿಂಗಳು ಯಾವಾಗ ಪ್ರಾರಂಭವಾಗುತ್ತದೆಯೆಂದು ಅವರು ಹೇಳಬಲ್ಲರು. ನಿನ್ನ ಸಂಕಟಗಳು ಯಾವಾಗ ಪ್ರಾಪ್ತವಾಗುತ್ತವೆಯೆಂದು ಅವರು ನಿನಗೆ ತಿಳಿಸಬಲ್ಲರು.
ಪ್ರತಿಯೊಬ್ಬನೂ ತನ್ನ ನೆರೆಯವನಿಗೆ ಸುಳ್ಳು ಹೇಳುತ್ತಾನೆ. ಒಬ್ಬನೂ ಸತ್ಯವನ್ನು ನುಡಿಯುವದಿಲ್ಲ. ಯೆಹೂದದ ಜನರು ತಮ್ಮ ನಾಲಿಗೆಗಳಿಗೆ ಸುಳ್ಳು ಹೇಳುವದನ್ನು ಕಲಿಸಿದ್ದಾರೆ. ಅವರು ಹಿಂತಿರುಗಿ ಬರಲು ಆಯಾಸವಾಗುವಷ್ಟು ಪಾಪಗಳನ್ನು ಮಾಡಿದ್ದಾರೆ.