Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:4 - ಪರಿಶುದ್ದ ಬೈಬಲ್‌

4 ಕಸ್ದೀಯರ ಪ್ರದೇಶದಲ್ಲಿಯೇ ಬಾಬಿಲೋನಿನ ಸೈನಿಕರನ್ನು ಕೊಲ್ಲಲಾಗುವುದು. ಬಾಬಿಲೋನಿನ ಬೀದಿಗಳಲ್ಲಿಯೇ ಅವರು ಗಾಯಗೊಳ್ಳುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕಸ್ದೀಯರು ತಮ್ಮ ದೇಶದಲ್ಲಿ ಹತರಾಗಿ ಬೀಳುವರು, ಬಾಬೆಲಿನ ಬೀದಿಗಳಲ್ಲಿ ಇರಿಯಲ್ಪಟ್ಟು ಮಣ್ಣುಪಾಲಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಬಾಬಿಲೋನಿಯರು ತಮ್ಮ ದೇಶದಲ್ಲೆ ಹತರಾಗಿ ಬೀಳುವರು. ಅದರ ಬೀದಿಗಳಲ್ಲೆ ಕತ್ತಿಗೆ ತುತ್ತಾಗಿ ಮಣ್ಣುಪಾಲಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕಸ್ದೀಯರು ತಮ್ಮ ದೇಶದಲ್ಲಿ ಹತರಾಗಿ ಬೀಳುವರು, ಬಾಬೆಲಿನ ಬೀದಿಗಳಲ್ಲಿ ಇರಿಯಲ್ಪಟ್ಟು ಮಣ್ಣುಪಾಲಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಈ ಪ್ರಕಾರ ಬಾಬಿಲೋನಿಯರ ದೇಶದಲ್ಲಿ ಹತರಾಗಿ ಬೀಳುವರು. ಅದರ ಬೀದಿಗಳಲ್ಲಿಯೇ ಕತ್ತಿಗೆ ತುತ್ತಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:4
6 ತಿಳಿವುಗಳ ಹೋಲಿಕೆ  

ಆದ್ದರಿಂದ ತರುಣರು ನಗರದ ಚೌಕಗಳಲ್ಲಿ ಮರಣಹೊಂದುವರು. ಆ ಕಾಲದಲ್ಲಿ ದಮಸ್ಕದ ಎಲ್ಲಾ ಸೈನಿಕರು ಕೊಲ್ಲಲ್ಪಡುವರು.” ಇದು ಸರ್ವಶಕ್ತನಾದ ಯೆಹೋವನ ನುಡಿ.


ಬಾಬಿಲೋನಿನ ತರುಣರನ್ನು ಬೀದಿಗಳಲ್ಲಿ ಕೊಲ್ಲಲಾಗುವುದು. ಅದರ ಎಲ್ಲಾ ಸೈನಿಕರು ಅಂದು ಸಾಯುವರು.” ಯೆಹೋವನು ಹೀಗೆನ್ನುತ್ತಾನೆ:


ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು.


ಖಡ್ಗವೇ, ಬಾಬಿಲೋನಿನ ಕುದುರೆಗಳನ್ನು ಮತ್ತು ರಥಗಳನ್ನು ಧ್ವಂಸಮಾಡು! ಖಡ್ಗವೇ, ಪರದೇಶಗಳಿಂದ ಕರೆಸಿದ ಸೈನಿಕರನ್ನು ಕೊಂದುಹಾಕು! ಆ ಸೈನಿಕರು ಹೆದರಿದ ಹೆಂಗಸರಂತಾಗಿರುವರು. ಖಡ್ಗವೇ, ಬಾಬಿಲೋನಿನ ಭಂಡಾರಗಳನ್ನು ನಾಶಮಾಡು! ಆ ಐಶ್ವರ್ಯವು ಸೂರೆಗೊಳ್ಳುವುದು.


ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ. ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ. ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ. ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು. ಈಗ ನೀನು ಸಾಧಾರಣ ಹೆಣದಂತೆ ಇರುವೆ. ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.


ಬಾಬಿಲೋನ್ ನಗರವು ಗಗನ ಚುಂಬಿಯಾಗಿ ಬೆಳೆಯಬಹುದು. ಅದು ತನ್ನ ಕೋಟೆಗಳನ್ನು ಭದ್ರಪಡಿಸಿಕೊಳ್ಳಬಹುದು. ಆದರೆ ಆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನ್ನು ಕಳುಹಿಸುತ್ತೇನೆ. ಆ ಜನರು ಅದನ್ನು ನಾಶಮಾಡುವರು.” ಇದು ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು