12 ಬಾಬಿಲೋನಿನ ಕೋಟೆಗೋಡೆಯ ವಿರುದ್ಧ ಧ್ವಜವನ್ನು ಎತ್ತಿ ಹಾರಿಸಿರಿ. ಹೆಚ್ಚಿನ ಸಂಖ್ಯೆಯಲ್ಲಿ ಕಾವಲುಗಾರರನ್ನು ಕರೆದುತನ್ನಿರಿ. ಯೋಧರನ್ನು ಅವರವರ ಸ್ಥಾನಗಳಲ್ಲಿ ನಿಲ್ಲಿಸಿರಿ. ಗುಪ್ತವಾಗಿ ಧಾಳಿ ಮಾಡುವುದಕ್ಕೆ ಸಿದ್ಧರಾಗಿರಿ. ಯೆಹೋವನು ತನ್ನ ಯೋಜನೆಗಳಂತೆ ಕಾರ್ಯ ನೆರವೇರಿಸುವನು. ಯೆಹೋವನು ಬಾಬಿಲೋನಿನ ಜನರ ವಿರುದ್ಧ ಹೇಳಿರುವಂತೆಯೇ ಮಾಡುವನು.
12 ಬಾಬಿಲೋನಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ; ಪಹರೆಯನ್ನು ಬಲಪಡಿಸಿರಿ; ಕಾವಲುಗಾರರನ್ನು ನಿಲ್ಲಿಸಿರಿ; ಹೊಂಚಿಕೊಳ್ಳುವವರನ್ನು ಸಿದ್ಧಮಾಡಿರಿ; ಏಕೆಂದರೆ ಯೆಹೋವ ದೇವರು ಬಾಬಿಲೋನಿನ ನಿವಾಸಿಗಳಿಗೆ ವಿರೋಧವಾಗಿ ತಾನು ಹೇಳಿದ್ದನ್ನು ಯೋಚಿಸಿದ್ದನ್ನು ಮಾಡಿದ್ದಾರೆ.
ನಿಮ್ಮ ಬಾಣಗಳನ್ನು ಮಸೆಯಿರಿ. ನಿಮ್ಮ ಕವಚಗಳನ್ನು ಧರಿಸಿರಿ. ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ. ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ. ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು. ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
ನೋವಿನಿಂದಲೋ ಎಂಬಂತೆ ಭೂಮಿಯು ನಡುಗುತ್ತದೆ ಮತ್ತು ಹೊರಳಾಡುತ್ತದೆ. ಯೆಹೋವನು ತಾನು ಯೋಚಿಸಿದಂತೆ ಬಾಬಿಲೋನಿಗೆ ಮಾಡಿದಾಗ ಅದು ನಡುಗುತ್ತದೆ. ಬಾಬಿಲೋನನ್ನು ಯಾರೂ ವಾಸಮಾಡದ ಮರುಭೂಮಿಯನ್ನಾಗಿ ಮಾಡಬೇಕೆಂಬುದು ಯೆಹೋವನ ಯೋಜನೆ.
ಮತ್ತು ಎಲ್ಲಾ ಜನಾಂಗಗಳನ್ನು ನಾನು ಒಟ್ಟುಗೂಡಿಸುವೆನು. ಆ ದೇಶಗಳನ್ನು ಯೆಹೋಷಾಫಾಟ್ ತಗ್ಗಿಗೆ ಕರೆತರುವೆನು. ಅಲ್ಲಿ ಅವರಿಗೆ ನ್ಯಾಯತೀರಿಸುವೆನು. ಆ ದೇಶಗಳವರು ನನ್ನ ಜನರಾದ ಇಸ್ರೇಲರನ್ನು ಚದರಿಸಿದ್ದರು. ಅವರನ್ನು ಪರದೇಶಗಳಲ್ಲಿ ವಾಸಿಸುವಂತೆ ಮಾಡಿದರು. ಆದ್ದರಿಂದ ಆ ದೇಶಗಳವರನ್ನು ನಾನು ಶಿಕ್ಷಿಸುವೆನು. ಆ ದೇಶದವರು ನನ್ನ ದೇಶವನ್ನು ವಿಭಜಿಸಿದರು.
ಯೆಹೋವನು ತಾನು ನಿಯೋಜಿಸಿದಂತೆ ಮಾಡಿದನು. ತಾನು ಮಾಡುತ್ತೇನೆಂದು ಹೇಳಿದ್ದನ್ನು ಆತನು ಮಾಡಿದ್ದಾನೆ. ಪುರಾತನ ಕಾಲದಿಂದ ತಾನು ವಿಧಿಸಿದ್ದನ್ನು ಆತನು ಮಾಡಿದ್ದಾನೆ. ಆತನು ನಿಷ್ಕರುಣೆಯಿಂದ ನಾಶಮಾಡಿದ್ದಾನೆ. ನಿನಗೆ ಸಂಭವಿಸಿದವುಗಳ ಮೂಲಕವಾಗಿ ಆತನು ನಿನ್ನ ವೈರಿಗಳನ್ನು ಸಂತೋಷಪಡಿಸಿದ್ದಾನೆ. ಆತನು ನಿನ್ನ ವೈರಿಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದಾನೆ.
“ಎಲ್ಲಾ ದೇಶಗಳಲ್ಲಿ ಯುದ್ಧದ ಧ್ವಜವನ್ನು ಹಾರಿಸಿರಿ. ಎಲ್ಲಾ ರಾಷ್ಟ್ರಗಳಲ್ಲಿ ತುತ್ತೂರಿಗಳನ್ನು ಊದಿರಿ. ಬಾಬಿಲೋನಿನ ವಿರುದ್ಧ ಹೋರಾಡಲು ಎಲ್ಲಾ ಜನಾಂಗಗಳನ್ನು ಸಿದ್ಧಗೊಳಿಸಿರಿ. ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಜ್ಯಗಳನ್ನು ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಕರೆಯಿರಿ. ಸೈನ್ಯದ ಮುಂದಾಳಾಗಿರಲು ಒಬ್ಬ ಸೇನಾಧಿಪತಿಯನ್ನು ಆರಿಸಿರಿ. ಮಿಡತೆಯ ದಂಡಿನಂತೆ ಅಪಾರವಾಗಿರುವ ಅಶ್ವಬಲವನ್ನು ಕಳುಹಿಸಿರಿ.
ತರುವಾಯ “ಆಯಿ”ಯ ಅರಸನು ಇಸ್ರೇಲರ ಸೈನ್ಯವನ್ನು ನೋಡಿದನು. ಅರಸನು ಮತ್ತು ಅವನ ಜನರು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಿ ಮುಗಿಸುವುದಕ್ಕಾಗಿ ತ್ವರೆಮಾಡಿ ಹೊರಟರು. “ಆಯಿ”ಯ ಅರಸನು ಪಟ್ಟಣದ ಪೂರ್ವಕ್ಕೆ ಹೋದನು. ಆದ್ದರಿಂದ ಅವನು ಪಟ್ಟಣದ ಹಿಂಭಾಗದಲ್ಲಿ ಅಡಗಿದ್ದ ಸೈನಿಕರನ್ನು ನೋಡಲಿಲ್ಲ.
ಈ ಪ್ರದೇಶದ ಜನರು ಸತ್ತವರಿಗಾಗಿ ಅಳುವರು. ಆಕಾಶವು ಕಪ್ಪಾಗುವುದು. ನಾನು ಹೇಳಿದ್ದೇನೆ, ಅದು ಬದಲಾಗುವುದಿಲ್ಲ. ನಾನು ಒಂದು ನಿರ್ಣಯ ತೆಗೆದುಕೊಂಡಿದ್ದೇನೆ, ನಾನು ನನ್ನ ಮನಸ್ಸನ್ನು ಬದಲಾಯಿಸುವದಿಲ್ಲ.”
ಯೆಹೋವನು ತನ್ನ ಆಯುಧಶಾಲೆಯನ್ನು ತೆರೆದಿದ್ದಾನೆ. ಆತನು ತನ್ನ ಆಯುಧಶಾಲೆಯಿಂದ ತನ್ನ ರೋಷದ ಶಸ್ತ್ರಾಸ್ತ್ರಗಳನ್ನು ಹೊರತೆಗೆದಿದ್ದಾನೆ. ತಾನು ಮಾಡಬೇಕಾದ ಕಾರ್ಯಕ್ಕಾಗಿ ಸರ್ವಶಕ್ತನಾದ ಆತನು ಆ ಶಸ್ತ್ರಾಸ್ತ್ರಗಳನ್ನು ಹೊರಗೆ ತೆಗೆದಿದ್ದಾನೆ. ಕಸ್ದೀಯರ ದೇಶದಲ್ಲಿ ಆತನು ಮಾಡಬೇಕಾದ ಕಾರ್ಯವೊಂದಿದೆ.
ದೇವರು ಜನಾಂಗಗಳಿಗೆ ಒಂದು ಗುರುತಾಗಿ ಧ್ವಜವನ್ನೆತ್ತುವನು. ಇಸ್ರೇಲ್ ಮತ್ತು ಯೆಹೂದದ ಜನರು ತಮ್ಮ ಸ್ಥಳಗಳಿಂದ ಕಡ್ಡಾಯವಾಗಿ ತೆಗೆದುಹಾಕಲ್ಪಡುವರು. ಆ ಜನರು ಪ್ರಪಂಚದ ಬಹುದೂರದ ಸ್ಥಳಗಳಿಗೆ ಚದರಿ ಹೋಗುವರು. ಆದರೆ ದೇವರು ಅವರನ್ನು ಒಟ್ಟಾಗಿ ಸೇರಿಸುವನು.