ಯೆರೆಮೀಯ 50:41 - ಪರಿಶುದ್ದ ಬೈಬಲ್41 “ಇಗೋ, ಉತ್ತರದಿಂದ ಜನರು ಬರುತ್ತಿದ್ದಾರೆ. ಅವರು ಒಂದು ಪ್ರಬಲ ರಾಷ್ಟ್ರದಿಂದ ಬರುತ್ತಿದ್ದಾರೆ. ಇಡೀ ಜಗತ್ತಿನ ಹಲವಾರು ರಾಜರುಗಳು ಒಟ್ಟುಗೂಡಿ ಬರುತ್ತಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201941 ಆಹಾ, ಉತ್ತರ ದಿಕ್ಕಿನಿಂದ ಒಂದು ಜನಾಂಗವು ಬರುತ್ತೆ, ಮಹಾ ಜನವೂ, ಬಹು ಮಂದಿ ಅರಸರೂ ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಬರುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)41 ಇಗೋ ರಾಷ್ಟ್ರವೊಂದು ಬರುವುದು ಉತ್ತರದಿಂದ: ಎಚ್ಚರಗೊಳ್ವರು ಮಹಾಜನ ಹಾಗೂ ಅರಸರು ಬಹುಮಂದಿ ಬರುವರವರು ಲೋಕದ ಕಟ್ಟಕಡೆಯಿಂದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)41 ಆಹಾ, ಬಡಗಲಿಂದ ಒಂದು ಜನಾಂಗವು ಬರುತ್ತದೆ, ಮಹಾ ಜನವೂ ಬಹುಮಂದಿ ಅರಸರೂ ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಬರುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ41 “ಇಗೋ, ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬರುವುದು ಅನೇಕ ಅರಸರು ಎಚ್ಚರಗೊಳ್ಳುವರು. ಅವರು ಲೋಕದ ಕಟ್ಟಕಡೆಯಿಂದ ಬರುತ್ತಾರೆ. ಅಧ್ಯಾಯವನ್ನು ನೋಡಿ |
ನಿಮ್ಮ ಬಾಣಗಳನ್ನು ಮಸೆಯಿರಿ. ನಿಮ್ಮ ಕವಚಗಳನ್ನು ಧರಿಸಿರಿ. ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ. ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ. ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು. ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.