Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 50:11 - ಪರಿಶುದ್ದ ಬೈಬಲ್‌

11 “ಬಾಬಿಲೋನೇ, ನೀನು ಉಲ್ಲಾಸದಲ್ಲಿರುವೆ ಮತ್ತು ಸಂತೋಷದಲ್ಲಿರುವೆ. ನೀನು ನನ್ನ ಪ್ರದೇಶವನ್ನು ತೆಗೆದುಕೊಂಡೆ. ನೀನು ಕಣತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿರುವೆ. ನಿನ್ನ ನಗು ಕುದುರೆಗಳ ಸಂತೋಷಭರಿತ ಕೆನೆತದಂತೆ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 “ನನ್ನ ಸ್ವತ್ತನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುವವರೂ, ಕಣತುಳಿಯುವ ಕಡಸಿನ ಹಾಗೆ ಕುಣಿದಾಡುವವರೂ, ಕೊಬ್ಬಿದ ಕುದುರೆಗಳಂತೆ ಹೇಕರಿಸುವವರೂ ಆಗಿರುವುದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ನನ್ನ ಸೊತ್ತಾದವರನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುತ್ತಿದ್ದೀರಿ! ಕಣ ತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿದ್ದೀರಿ. ಕೊಬ್ಬಿದ ಕುದುರೆಗಳಂತೆ ಕೆನೆಯುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನನ್ನ ಸ್ವಾಸ್ತ್ಯವನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುವವರೂ ಕಣತುಳಿಯುವ ಕಡಸಿನ ಹಾಗೆ ಕುಣಿದಾಡುವವರೂ ಕೊಬ್ಬಿದ ಕುದುರೆಗಳಂತೆ ಹೇಕರಿಸುವವರೂ ಆಗಿರುವದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ಏಕೆಂದರೆ ನನ್ನ ಸೊತ್ತನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ, ನೀವು ಉಲ್ಲಾಸಿಸಿದ್ದರಿಂದಲೂ, ಕೊಬ್ಬಿದ ಕಡಸಿನ ಹಾಗೆ ಗರ್ವ ಪಟ್ಟದ್ದರಿಂದಲೂ, ಗಂಡು ಕುದುರೆಗಳ ಹಾಗೆ ಹೂಂಕರಿಸಿದ್ದರಿಂದಲೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 50:11
32 ತಿಳಿವುಗಳ ಹೋಲಿಕೆ  

“ನನ್ನ ಜನರ ಮೇಲೆ ನಾನು ಸಿಟ್ಟಿಗೆದ್ದಿದ್ದೆನು. ಅವರು ನನಗೆ ಸೇರಿದವರಾಗಿದ್ದಾರೆ. ಆದರೆ ನಾನು ಅವರ ಮೇಲೆ ಸಿಟ್ಟಾದೆನು. ಆದ್ದರಿಂದ ನಾನು ಅವರನ್ನು ತಳ್ಳಿಬಿಟ್ಟೆನು. ಅವರನ್ನು ನಿನಗೆ ಕೊಟ್ಟೆನು; ನೀನು ಅವರನ್ನು ಶಿಕ್ಷಿಸಿದೆ. ಅವರ ಮೇಲೆ ಕರುಣೆ ತೋರಿಸಲಿಲ್ಲ. ವೃದ್ಧರೂ ಕಷ್ಟದ ಕೆಲಸ ಮಾಡುವಂತೆ ಮಾಡಿದೆ.


ಆದರೆ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೆಲ್ಲಾ ಯೆಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತರಾಗಿರುವಾಗಲೇ ಅವರ ಚರ್ಮವು ಕೊಳೆತುಹೋಗುವದು. ಅವರ ಕಣ್ಣುಗಳು ಅವು ಇರುವಲ್ಲಿಯೇ ಕೊಳೆತುಹೋಗುವವು. ಅವರ ಬಾಯೊಳಗೆ ಅವರ ನಾಲಿಗೆಗಳು ಕೊಳೆತುಹೋಗುವವು.


ನಿನ್ನ ಸಹೋದರನ ಸಂಕಟದಲ್ಲಿ ನೀನು ಹರ್ಷಿಸಿದೆ. ನೀನು ಹಾಗೆ ಮಾಡಬಾರದಾಗಿತ್ತು. ಯೆಹೂದವನ್ನು ನಾಶಮಾಡುವಾಗ ನೀನು ಸಂತೋಷಪಟ್ಟೆ. ನೀನು ಹಾಗೆ ಮಾಡಬಾರದಾಗಿತ್ತು. ನೀನು ಅವರ ಸಂಕಟ ಕಾಲದಲ್ಲಿ ಕೊಚ್ಚಿಕೊಂಡೆ. ನೀನು ಹಾಗೆ ಮಾಡಬಾರದಾಗಿತ್ತು.


ಸಮಾರ್ಯದ ಪರ್ವತಗಳಲ್ಲಿರುವ ಬಾಷಾನಿನ ದನಗಳೇ, ನನ್ನ ಮಾತಿಗೆ ಕಿವಿಗೊಡಿರಿ. ನೀವು ಬಡ ಜನರನ್ನು ಹಿಂಸಿಸಿ ಜಜ್ಜುತ್ತೀರಿ. ನಿಮ್ಮ ಗಂಡಂದಿರ ಹತ್ತಿರ, “ನಮಗೆ ಕುಡಿಯಲಿಕ್ಕೆ ತಂದುಕೊಡು” ಎಂದು ಹೇಳುತ್ತೀರಿ.


“ಎಫ್ರಾಯೀಮ್ ಹತೋಟಿಗೆ ಬಂದು ಕಣ ತುಳಿಯಲು ಇಷ್ಟಪಡುವ ಪ್ರಾಯದ ಹಸುವಿನಂತಿದೆ. ಆಕೆಯ ಕುತ್ತಿಗೆಗೆ ನಾನು ಒಂದು ಒಳ್ಳೆಯ ನೊಗವನ್ನಿಡುವೆನು. ಎಫ್ರಾಯೀಮನಿಗೆ ನಾನು ಹಗ್ಗದಿಂದ ಬಂಧಿಸುವೆನು. ಆಗ ಯೆಹೂದವು ಭೂಮಿಯನ್ನು ಉಳುವದು. ಯಾಕೋಬನು ಮಣ್ಣಿನ ಗೆಡ್ಡೆಗಳನ್ನು ಒಡೆದು ಪುಡಿಮಾಡುವನು.”


“ನಾನು ನರಳಾಡುತ್ತಿದ್ದೇನೆ. ಅದಕ್ಕಾಗಿ ನನ್ನ ಮಾತುಗಳಿಗೆ ಕಿವಿಗೊಡು; ನನ್ನನ್ನು ಸಂತೈಸುವವರು ಯಾರೂ ಇಲ್ಲ. ನನ್ನ ಎಲ್ಲ ವೈರಿಗಳು ನನ್ನ ಕಷ್ಟಗಳ ಬಗ್ಗೆ ಕೇಳಿದ್ದಾರೆ. ಅವರು ಸಂತೋಷಪಡುತ್ತಿದ್ದಾರೆ. ನೀನು ನನಗೆ ಈ ಸ್ಥಿತಿಯನ್ನು ತಂದದ್ದಕ್ಕಾಗಿ ಅವರು ಸಂತೋಷಪಡುತ್ತಲಿದ್ದಾರೆ. ನೀನು ಪ್ರಕಟಿಸಿದ ಆ ದಿನವನ್ನು ಬರಮಾಡು. ಆ ದಿನ ನನ್ನ ಶತ್ರುಗಳ ಸ್ಥಿತಿ ನನ್ನ ಇಂದಿನ ಸ್ಥಿತಿಯಂತೆ ಆಗಲಿ.


ಬಾಬಿಲೋನಿನ ಎಲ್ಲಾ ತರುಣರನ್ನು ಕೊಂದುಹಾಕಿರಿ. ಅವರನ್ನು ಕತ್ತರಿಸಿಬಿಡಿ. ಅವರನ್ನು ಸೋಲಿಸುವ ಸಮಯ ಬಂದಿದೆ. ಇದು ಅವರಿಗೆ ಕೇಡಿನ ಕಾಲ. ಇದು ಅವರನ್ನು ದಂಡಿಸುವ ಸಮಯ.


“ಇಸ್ರೇಲು ದೇಶಗಳಲ್ಲೆಲ್ಲಾ ಚದರಿಹೋದ ಕುರಿಹಿಂಡಿನಂತಾಗಿದೆ. ಸಿಂಹಗಳಿಗೆ ಹೆದರಿ ಓಡಿಹೋದ ಕುರಿಗಳಂತಾಗಿದೆ ಇಸ್ರೇಲು. ಅದನ್ನು ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ ಅಶ್ಶೂರದ ರಾಜನು. ಅದರ ಎಲುಬುಗಳನ್ನು ಜಗಿದ ಕೊನೆಯ ಸಿಂಹವೆಂದರೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು.


ಸಂಬಳಕ್ಕಾಗಿ ದುಡಿಯುವ ಈಜಿಪ್ಟಿನ ಸೈನಿಕರು ಕೊಬ್ಬಿದ ಕರುಗಳಂತಿದ್ದಾರೆ. ಅವರೆಲ್ಲರು ಹಿಂತಿರುಗಿ ಓಡಿಹೋಗುವರು. ಅವರು ಧೈರ್ಯದಿಂದ ಧಾಳಿಯನ್ನು ಎದುರಿಸಲಾರರು. ಅವರ ವಿನಾಶದ ಕಾಲ ಬರುತ್ತಿದೆ. ಬೇಗ ಅವರನ್ನು ದಂಡಿಸಲಾಗುವುದು.


ಅವರು ಮಾಡಿದ ದುಷ್ಕೃತ್ಯಗಳಿಂದ ಅವರು ಬೆಳೆದಿದ್ದಾರೆ, ಕೊಬ್ಬಿದ್ದಾರೆ. ಅವರು ಮಾಡುವ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲ. ಅವರು ಅನಾಥ ಮಕ್ಕಳ ಪಕ್ಷವಹಿಸಿ ಮಾತನಾಡುವದಿಲ್ಲ. ಅವರು ಅನಾಥರಿಗೆ ಸಹಾಯ ಮಾಡುವದಿಲ್ಲ. ಅವರು ದಿಕ್ಕಿಲ್ಲದವರಿಗೆ ನ್ಯಾಯ ದೊರೆಯದಂತೆ ಮಾಡುವರು.


ಅವರು ಮನದಣಿಯುವ ಹಾಗೆ ತಿಂದು ಕೊಬ್ಬಿ ಕಾಮವೇರಿದ ಕುದುರೆಗಳಂತಿದ್ದಾರೆ. ಅವರು ನೆರೆಮನೆಯವನ ಹೆಂಡತಿಯನ್ನು ಕೆನೆತು ಕರೆಯುವ ಕುದುರೆಯಂತಿದ್ದಾರೆ.


ಬಡವನನ್ನು ಗೇಲಿಮಾಡಿದರೆ ಅವನನ್ನು ನಿರ್ಮಿಸಿದ ದೇವರಿಗೇ ಅವಮಾನಮಾಡಿದಂತಾಗುವುದು. ಬೇರೊಬ್ಬನ ದುರಾವಸ್ಥೆಯಲ್ಲಿ ಸಂತೋಷಪಡುವವರಿಗೆ ದಂಡನೆಯು ಖಂಡಿತ.


ಜನರು ನನ್ನನ್ನು ಸುತ್ತುಗಟ್ಟಿದ್ದಾರೆ; ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.


“ಆದರೆ ಯೆಶುರೂನು ಕೊಬ್ಬಿದನು; ಕೊಬ್ಬಿದ ಹೋರಿಯಂತೆ ಒದ್ದನು; ಅವನು ಚೆನ್ನಾಗಿ ತಿಂದು ಕೊಬ್ಬಿ ಊದಿಕೊಂಡನು; ತನ್ನ ನಿರ್ಮಾಣಿಕನಾದ ಯೆಹೋವನನ್ನು ತೊರೆದನು; ತನ್ನನ್ನು ಸಂರಕ್ಷಿಸಿದ ಬಂಡೆಯಿಂದ ಓಡಿಹೋದನು;


ಆದ್ದರಿಂದ ‘ಕೋಮಲ ಸ್ತ್ರೀಯೇ,’ ನನ್ನ ಮಾತನ್ನು ಕೇಳು. ಸುರಕ್ಷಿತಳಾಗಿರುವೆ ಎಂದು ನೆನಸಿಕೊಂಡು ಹೀಗೆ ನಿನ್ನೊಳಗೆ, ‘ನಾನೇ ಮಹಾವ್ಯಕ್ತಿ. ನನ್ನಂಥ ಮಹಾವ್ಯಕ್ತಿ ಯಾರೂ ಇಲ್ಲ. ನಾನೆಂದಿಗೂ ವಿಧವೆಯಾಗುವದಿಲ್ಲ. ಯಾವಾಗಲೂ ನನಗೆ ಮಕ್ಕಳಿರುವರು’ ಎಂದುಕೊಳ್ಳುವೆ.


ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಬುದನ್ನು ನಿಮಗೆ ಹೇಳುವೆನು. ಆ ಜನರು ತುಂಬ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನ್ನು ಅವರು ಹಾಳು ಮಾಡಿದರು. ನಾನು ಆ ಜನರನ್ನು ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನ್ನೂ ಎಸೆಯುವೆನು.


“ಈಜಿಪ್ಟು ಸುಂದರವಾದ ಹಸುವಿನಂತಿದೆ, ಆದರೆ ಉತ್ತರದಿಂದ ತೊಣಚಿಯು ಅದನ್ನು ಪೀಡಿಸಲು ಬರುತ್ತಿದೆ.


ಇಸ್ರೇಲ್ ರಾಜ್ಯವು ನಾಶವಾದಾಗ ನೀನು ಸಂತೋಷಪಟ್ಟಿರುವೆ. ನಾನು ಕೂಡ ಹಾಗೆಯೇ ಮಾಡುವೆನು. ಸೇಯೀರ್ ಪರ್ವತ ಮತ್ತು ಎದೋಮ್ ರಾಜ್ಯವೆಲ್ಲಾ ನಾಶವಾಗುವದು. ಆಗ ನಾನು ಯೆಹೋವನೆಂದು ನೀನು ತಿಳಿಯುವೆ.”


“ಎದೋಮಿನ ಬಗ್ಗೆಯೂ ಉಳಿದ ಆ ವಿದೇಶಗಳ ಬಗ್ಗೆಯೂ ನಾನು ರೋಷದಿಂದ ಮಾತಾಡುತ್ತಿದ್ದೇನೆಂದು ಪ್ರಮಾಣ ಮಾಡುತ್ತೇನೆ. ಆ ಜನಾಂಗಗಳು ನನ್ನ ದೇಶವನ್ನು ತಮ್ಮ ಸ್ವಾಸ್ತ್ಯವನ್ನಾಗಿ ಸಂತೋಷದಿಂದ ತೆಗೆದುಕೊಂಡರು. ಅವರು ಅದನ್ನು ವಶಪಡಿಸಿಕೊಂಡು ಸೂರೆ ಮಾಡಿದಾಗ ಮತ್ತು ನನ್ನ ಜನರಿಗೆ ಅವಮಾನ ಮಾಡಿದಾಗ ನನ್ನ ಜನರನ್ನು ಅವರು ಎಷ್ಟೊಂದು ದ್ವೇಷಿಸುತ್ತಾರೆಂದು ತೋರಿಸುತ್ತಾ ಉಲ್ಲಾಸಪಟ್ಟರು.


ಅವೆಲ್ಲವನ್ನು ಗಾಳ, ಬಲೆಗಳಿಂದ ವೈರಿಯು ಹಿಡಿಯುತ್ತಾನೆ. ಬಲೆಯಲ್ಲಿ ಅವುಗಳನ್ನು ವೈರಿಯು ಹಿಡಿದು ಎಳೆಯುವನು. ತಾನು ಹಿಡಿದನೆಂದು ವೈರಿಯು ಹರ್ಷಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು