ಯೆರೆಮೀಯ 5:7 - ಪರಿಶುದ್ದ ಬೈಬಲ್7 “ಯೆಹೂದವೇ, ನಾನು ನಿನ್ನನ್ನು ಏಕೆ ಕ್ಷಮಿಸಬೇಕು? ಒಂದು ಕಾರಣವನ್ನಾದರೂ ಕೊಡು. ನಿನ್ನ ಮಕ್ಕಳು ನನ್ನನ್ನು ತೊರೆದಿದ್ದಾರೆ. ದೇವರುಗಳೇ ಅಲ್ಲದ ವಿಗ್ರಹಗಳಿಗೆ ಅವರು ಹರಕೆ ಹೊತ್ತಿದ್ದಾರೆ. ನಾನು ನಿನ್ನ ಮಕ್ಕಳಿಗೆ ಬೇಕಾದದ್ದನ್ನು ಕೊಟ್ಟೆ. ಆದರೂ ಅವರು ನನಗೆ ನಂಬಿಗಸ್ತರಾಗಿ ಉಳಿಯಲಿಲ್ಲ. ಅವರು ತಮ್ಮ ಹೆಚ್ಚಿನ ಸಮಯವನ್ನು ವೇಶ್ಯೆಯರ ಮನೆಗಳಲ್ಲಿ ಕಳೆದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಯೆಹೋವನು, “ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆ ತುಂಬಾ ಆಹಾರಕೊಟ್ಟ ಮೇಲೂ ಅವರು ವ್ಯಭಿಚಾರ ಮಾಡಿದರು, ವ್ಯಭಿಚಾರಿಣಿಯರ ಮನೆಗಳಲ್ಲಿ ಗುಂಪುಕೂಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಸರ್ವೇಶ್ವರ ಸ್ವಾಮಿ ಹೀಗೆಂದು ಪ್ರಶ್ನಿಸುತ್ತಾರೆ; “ಎಲೈ ಜೆರುಸಲೇಮ್, ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ತೊರೆದುಬಿಟ್ಟಿದ್ದಾರೆ; ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆತುಂಬ ಊಟಕೊಟ್ಟೆ; ಅವರೋ ವ್ಯಭಿಚಾರ ಮಾಡಿದ್ದಾರೆ, ವೇಶ್ಯೆಯರ ಮನೆಗಳಲ್ಲಿ ಗುಂಪು ಸೇರಿದ್ದಾರೆ ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಯೆಹೋವನು ಹೀಗನ್ನುತ್ತಾನೆ - ನಾನು ನಿನ್ನನ್ನು ಹೇಗೆ ಕ್ಷವಿುಸಲಿ? ನಿನ್ನ ಜನರು ನನ್ನನ್ನು ವಿಸರ್ಜಿಸಿ ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ; ನಾನು ಅವರಿಗೆ ಹೊಟ್ಟೆತುಂಬಾ ಆಹಾರಕೊಟ್ಟ ಮೇಲೆ ಅವರು ಹಾದರ ಮಾಡಿದರು, ಸೂಳೆಯರ ಮನೆಗಳಲ್ಲಿ ಗುಂಪುಕೂಡಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? ನಿನ್ನ ಮಕ್ಕಳು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ. ನಾನು ಅವರನ್ನು ತೃಪ್ತಿಪಡಿಸಿದ ಮೇಲೆ, ಅವರು ವ್ಯಭಿಚಾರ ಮಾಡಿದ್ದಾರೆ. ವೇಶ್ಯೆಯರ ಮನೆಗಳಲ್ಲಿ ಗುಂಪಾಗಿ ಸೇರಿದ್ದಾರೆ. ಅಧ್ಯಾಯವನ್ನು ನೋಡಿ |
ಯೆಹೂದ ದೇಶವು ವ್ಯಭಿಚಾರಿಗಳಿಂದ ತುಂಬಿಹೋಗಿದೆ. ಅವರು ಅನೇಕ ರೀತಿಯಲ್ಲಿ ಅಪನಂಬಿಗಸ್ತರಾಗಿದ್ದಾರೆ. ಯೆಹೋವನು ನಾಡನ್ನು ಶಪಿಸಿದ್ದರಿಂದ ಅದು ಬರಡು ಭೂಮಿಯಾಯಿತು. ಹುಲ್ಲುಗಾವಲಿನ ಸಸಿಗಳು ಒಣಗಿ ಸತ್ತುಹೋಗುತ್ತಲಿವೆ. ಹೊಲಗಳು ಮರುಭೂಮಿಯಂತಾಗಿವೆ. ಪ್ರವಾದಿಗಳು ಸೆರೆ ಒಯ್ಯಲ್ಪಟ್ಟಿದ್ದಾರೆ. ಆ ಪ್ರವಾದಿಗಳು ತಮ್ಮ ಪ್ರಭಾವವನ್ನೂ ಶಕ್ತಿಯನ್ನೂ ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ.
ಆ ಜನರು ತಮ್ಮ ಪಾಠಗಳನ್ನು ಸರಿಯಾಗಿ ಕಲಿತುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ಮೊದಲು, ಆ ಜನರು ಬಾಳನ ಹೆಸರೆತ್ತಿ ಪ್ರಮಾಣ ಮಾಡುವುದನ್ನು ನನ್ನ ಜನರಿಗೆ ಕಲಿಸಿಕೊಟ್ಟರು. ಈಗ ಆ ಜನರು ಅದೇ ರೀತಿಯಲ್ಲಿ ತಮ್ಮ ಪಾಠವನ್ನು ಕಲಿತುಕೊಳ್ಳಬೇಕೆಂಬುದು ನನ್ನ ಇಚ್ಛೆ. ಅವರು, ‘ಯೆಹೋವನ ಜೀವದಾಣೆ’ ಎಂದು ಹೇಳಿದರೆ ಅವರನ್ನು ಅಭಿವೃದ್ಧಿಪಡಿಸಿ ಅವರನ್ನು ನಮ್ಮ ಜನರ ಮಧ್ಯದಲ್ಲಿ ನೆಲೆಗೊಳಿಸುವೆನು.
ಆಗ ನಾನು ನಿಮ್ಮ ಬಳಿಗೆ ಬಂದು ಯೋಗ್ಯವಾದ ಕಾರ್ಯವನ್ನು ಮಾಡುವೆನು. ದುಷ್ಟ ಕ್ರಿಯೆಗಳನ್ನು ಮಾಡಿದ ಜನರ ಬಗ್ಗೆ ನ್ಯಾಯಾಧೀಶರೊಡನೆ ದೂರು ಹೇಳುವ ಮನುಷ್ಯನಂತಿರುವೆನು. ಕೆಲವರು ಮಾಟಮಂತ್ರ ಮಾಡುವರು; ಕೆಲವರು ವ್ಯಭಿಚಾರ ಮಾಡುವರು; ಕೆಲವರು ಸುಳ್ಳು ವಾಗ್ದಾನಗಳನ್ನು ಮಾಡುವರು; ಕೆಲವರು ಕೂಲಿಯಾಳುಗಳಿಗೆ ಹೇಳಿದ ಕೂಲಿಯನ್ನು ಕೊಡದೆ ಅವರಿಗೆ ಮೋಸಮಾಡುವರು. ಜನರು ವಿಧವೆಯರಿಗೂ ಅನಾಥರಿಗೂ ಸಹಾಯ ಮಾಡುವದಿಲ್ಲ. ಪರದೇಶಿಗಳಿಗೆ ಸಹಾಯ ಮಾಡುವದಿಲ್ಲ. ನನಗೆ ಗೌರವ ಸಲ್ಲಿಸುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ. ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ. ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು. ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ. ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು. ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”
ಈ ಪೀಳಿಗೆಯ ಜನರೇ, ಯೆಹೋವನ ಸಂದೇಶದ ಕಡೆಗೆ ಗಮನ ಕೊಡಿ, “ಇಸ್ರೇಲಿನ ಜನರಿಗೆ ನಾನು ಮರಳುಗಾಡಿನಂತೆ ಇರುವೆನೇ? ನಾನು ಗಾಢಾಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಂತೆ ಇರುವೆನೇ? ನನ್ನ ಜನರು, ‘ನಮಗೆ ಇಷ್ಟವಾದ ಮಾರ್ಗವನ್ನು ಅನುಸರಿಸಲು ನಾವು ಸ್ವತಂತ್ರರಾಗಿದ್ದೇವೆ. ಯೆಹೋವನೇ, ನಾವು ಪುನಃ ನಿನ್ನಲ್ಲಿಗೆ ಬರುವದಿಲ್ಲ’ ಎಂದು ಹೇಳುತ್ತಾರೆ. ಅವರು ಹಾಗೆ ಏಕೆ ಹೇಳುತ್ತಾರೆ?